ನವ ದೆಹಲಿ – ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಮತ್ತು ಅಜಮೇರ್ ದರ್ಗಾ ಪ್ರಕರಣದ ಅರ್ಜಿದಾರರಾಗಿರುವ ವಿಷ್ಣು ಗುಪ್ತ ಅವರಿಗೆ ಕೊಲೆ ಬೆದರಿಕೆಗಳು ಬಂದಿವೆ. ಈ ಸಂಬಂಧದಲ್ಲಿ ನವದೆಹಲಿಯ ಬಾರಾಖಂಭಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.
ವಿಷ್ಣು ಗುಪ್ತ ಅವರು ಹೇಳಿದರು,
1. ನನಗೆ ಇತ್ತೀಚೆಗೆ 2 ದೂರವಾಣಿ ಕರೆಗಳು ಬಂದಿವೆ ಮತ್ತು ದೂರವಾಣಿ ಮಾಡಿದವರು ನನ್ನನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಕೆನಡಾದಿಂದ ಕರೆ ಬಂದಿತು. ಕರೆ ಮಾಡಿದ ವ್ಯಕ್ತಿ, “ಅಜಮೇರ್ ದರ್ಗಾ ಪ್ರಕರಣವನ್ನು ದಾಖಲಿಸಿ ನೀವು ದೊಡ್ಡ ತಪ್ಪು ಮಾಡಿದ್ದೀರಿ, ಮತ್ತು ಈಗ ನಿಮ್ಮ ತಲೆಯನ್ನು ಕತ್ತರಿಸುತ್ತೇವೆ.” ಎಂದು ಹೇಳಿದ್ದಾನೆ. ನನಗೆ ದೇಶದಲ್ಲಿಯೂ ಇದೇ ರೀತಿಯಕರೆಗಳು ಬಂದಿವೆ ಎಂದು ಹೇಳಿದರು.
2. ನಾನು ಹೇಳುವುದೇನೆಂದರೆ, ನಾನು ಇಂತಹ ಬೆದರಿಕೆಗಳಿಗೆ ಭಯಪಡುವುದಿಲ್ಲ. ನಾವು ಈ ಜನರಿಂದ ಭಯಪಡಲು ಸಾಧ್ಯವಿಲ್ಲ ಮತ್ತು ನಾವು ನಮ್ಮ ಕಾನೂನನುಸಾರ ಹಕ್ಕನ್ನು ಕೇಳುತ್ತಿದ್ದೇವೆ; ಆದ್ದರಿಂದ ನಾವು ನ್ಯಾಯಾಲಯದ ಕದವನ್ನು ತಟ್ಟಿದ್ದೇವೆ.
3. ನಾನು ಯಾರ ಭಾವನೆಯನ್ನು ನೋಯಿಸಿಲ್ಲ ಮತ್ತು ನನಗೆ ಹಾಗೆ ಮಾಡಲು ಇಚ್ಛಿಸುವುದಿಲ್ಲ. ನಾವು ಕೇವಲ ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ; ಏಕೆಂದರೆ ಅಜಮೇರ್ ದರ್ಗಾ ಮಹಾದೇವ ಶಿವ ಮಂದಿರವಾಗಿದೆ, ಮತ್ತು ನಾವು ಅದನ್ನು ಕಾನೂನು ಹೋರಾಟದ ಮೂಲಕ ಹಿಂದಿರುಗಿಸಿಕೊಳ್ಳುತ್ತೇವೆ. ಈ ಪ್ರಕರಣದಲ್ಲಿ ಎಲ್ಲಾ ಕಕ್ಷಿದಾರರಿಗೆ ನೋಟಿಸ್ ನೀಡಲಾಗಿದೆ ಮತ್ತು ಶೀಘ್ರದಲ್ಲೇ ಅದರ ಸಮೀಕ್ಷೆಯೂ ನಡೆಯಲಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಈ ಬೆದರಿಕೆಯಿಂದ, ಅಲ್ಲಿ ಶಿವಮಂದಿರವೇ ಇದೆ ಎಂಬುದು ಬಹಿರಂಗವಾಗುವ ಆತಂಕದಿಂದಾಗಿ ಈ ಬೆದರಿಕೆಗಳು ನೀಡಲಾಗುತ್ತಿವೆ. ಒಂದು ವೇಳೆ ಅಲ್ಲಿ ಶಿವಮಂದಿರವಿಲ್ಲದಿದ್ದರೆ, ಅದು ಸ್ಪಷ್ಟವಾಗಿದ್ದರೆ, ಸಂಬಂಧಪಟ್ಟವರು ಯಾವುದು ಸತ್ಯವಾಗಿದೆಯೋ, ಅದು ಹೊರಗೆ ಬರುವುದು ಎನ್ನುವ ನಿಲುವನ್ನು ಹೊಂದಿರುತ್ತಿದ್ದರು ! |