ಅಮೃತಸರದಲ್ಲಿ ಮುಚ್ಚಿದ್ದ ಪೋಲೀಸ್ ಚೌಕಿಯ ಹೊರಗೆ ಬಾಂಬಸ್ಫೋಟ

ಅಮೃತಸರ (ಪಂಜಾಬ) – ಇಲ್ಲಿ ಕಳೆದ ವರ್ಷ ಮುಚ್ಚಲಾಗಿದ್ದ ಗುರ್ಬಕ್ಷನಗರದ ಪೊಲೀಸ್ ಚೌಕಿಯ ಹೊರಗೆ ಬಾಂಬಸ್ಫೋಟ ಸಂಭವಿಸಿದೆ. ಪೊಲೀಸರು ಈ ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ. ಈ ಸ್ಫೋಟದಿಂದ ಯಾವುದೇ ಹಾನಿ ಸಂಭವಿಸಿಲ್ಲ. ‘ಈ ಸ್ಫೋಟ ಹೇಗೆ ಸಂಭವಿಸಿತು? ‘ ಎಂಬುದರ ಮಾಹಿತಿ ಪಡೆಯಲಾಗುತ್ತಿದೆ. ಸ್ಥಳೀಯರ ಹೇಳಿಕೆಯ ಅನುಸಾರ, ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬಾಂಬ ಸ್ಫೋಟದ ಸದ್ದಿನಿಂದ ಇಡೀ ಪ್ರದೇಶ ತತ್ತರಿಸಿತು. ಸ್ಫೋಟವು ಎಷ್ಟು ಶಕ್ತಿಶಾಲಿಯಾಗಿತ್ತು ಅಂದರೆ ಎಲ್ಲಾ ಜನರು ತಮ್ಮ ಮನೆಯ ಹೂರಗೆ ಓಡಿಬಂದರು, ಅಷ್ಟೇ ಅಲ್ಲದೆ ಮನೆಗಳ ಗೋಡೆಗಳೂ ಅಲುಗಾಡಿದವು. ಕೆಲ ದಿನಗಳ ಹಿಂದೆ ಅಜನಾಲಾ ಪೊಲೀಸ್ ಠಾಣೆಯ ಹೊರಗೆ ಅತ್ಯಾಧುನಿಕ ಸ್ಫೋಟಕಗಳು ಪತ್ತೆಯಾಗಿದ್ದವು.

ಸಂಪಾದಕೀಯ ನಿಲುವು

ಸದ್ಯ ಪಂಜಾಬಿನಲ್ಲಿ ಬಾಂಬಸ್ಫೋಟಗಳ ಪ್ರಮಾಣ ಹೆಚ್ಚಿವೆ. ಕಾಶ್ಮೀರದ ಬೆನ್ನಲ್ಲೇ, ಪಂಜಾಬಿನಲ್ಲಿಯೂ ಭಯೋತ್ಪಾದಕರ ಚಟುವಟಿಕೆಗಳು ಹೆಚ್ಚುತ್ತಿವೆ, ಇದು ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ !