ಉತ್ತರಾಖಂಡ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ವಿಶೇಷ ಸನ್ಮಾನ!

ಉತ್ತರಾಖಂಡ ಸಂಸ್ಕೃತ ವಿಶ್ವವಿದ್ಯಾನಿಲಯದ 11 ನೇ ದೀಕ್ಷಾಂತ ಸಮಾರಂಭ !

ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ‘ವಿದ್ಯಾವಾಚಸ್ಪತಿ’ (ಡಿ.ಲಿಟ್) ಈ ಗೌರವ ಪದವಿ ಪ್ರದಾನ!

ಹರಿದ್ವಾರ (ಉತ್ತರಾಖಂಡ್): ಅಯೋಧ್ಯೆಯ “ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸ”ದ ಖಜಾಂಚಿ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಉತ್ತರಾಖಂಡ್ ಸಂಸ್ಕೃತ ವಿಶ್ವವಿದ್ಯಾಲಯದಿಂದ ವಿಶೇಷ ಸನ್ಮಾನ ಮಾಡಲಾಯಿತು.

ಉತ್ತರಾಖಂಡ ಸಂಸ್ಕೃತ ವಿಶ್ವವಿದ್ಯಾನಿಲಯದ ಅಧಿಕಾರಿಗಳಿಂದ ಪ.ಪೂ. ಸ್ವಾಮಿ ಗೋವಿಂದದೇವ ಗಿರಿಯನ್ನು ಸನ್ಮಾನಿಸುವಾಗ

ಪ.ಪೂ. ಸ್ವಾಮಿಜಿಯವರಿಗೆ ನೀಡಲಾದ ಸನ್ಮಾನ ಪತ್ರ

ನವೆಂಬರ್ 29 ರಂದು ಸಂಜೆ ಆಯೋಜಿಸಲಾದ ವಿಶ್ವವಿದ್ಯಾಲಯದ 11ನೇ ಪದವೀಧರ ಸಮಾರಂಭದಲ್ಲಿ ಪ.ಪೂ. ಸ್ವಾಮಿ ಜೀ ಅವರಿಗೆ ‘ವಿದ್ಯಾವಾಚಸ್ಪತಿ’ (ಡಿ.ಲಿಟ್) ಈ ಗೌರವ ಪದವಿ ಪ್ರದಾನ ಮಾಡಲಾಯಿತು. ವೇದಿಕ ಕ್ಷೇತ್ರದಲ್ಲಿ ನೀಡಿದ ಅಮೂಲ್ಯ ಕೊಡುಗೆಗಾಗಿ ಪ.ಪೂ. ಸ್ವಾಮಿಜಿಯವರಿಗೆ ಈ ಗೌರವ ಅರ್ಪಿಸಲಾಯಿತು.