ಹುಬ್ಬಳ್ಳಿ – ಸಾರ್ವಜನಿಕ ಆಸ್ತಿ ಕಬಳಿಕೆ ಮಾಡುತ್ತಿರುವ ವಕ್ಫ್ ಮಂಡಳಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು, ‘ಇದು ನಮ್ಮ ಜಮೀನು ಅವರ ತಂದೆಯ ಆಸ್ತಿಯೇ ? ಅಧಿಕಾರದ ಆಸೆಗಾಗಿ ಆಸ್ತಿಯನ್ನು ವಕ್ಫ್ ಹೆಸರಿಗೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ಪ್ರಲ್ಲಾದ ಜೊಶಿ ಮಾತು ಮುಂದುವರೆಸಿ, ವಿಜಯಪುರದ ದೇವಸ್ಥಾನಕ್ಕೂ ವಕ್ಫ್ ಮಂಡಳಿಯಿಂದ ನೋಟಿಸ್ ನೀಡಲಾಗಿದೆ. ಬೆಂಗಳೂರಿನ ವಿಲ್ಸನ್ ಹೋಟೆಲ್‌ಗೂ ನೋಟಿಸ್ ನೀಡಲಾಗಿದೆ. ಅಳ್ನಾವರ ಪೊಲೀಸ್ ಠಾಣೆಗೆ ಕಾಂಪೌಂಡ್ ಸೇರಿಸಲು ವಿರೋಧ ವ್ಯಕ್ತವಾಗಿದೆ. 2013ರಲ್ಲಿ ಹಲವರ ವಿರೋಧವನ್ನು ಕಡೆಗಣಿಸಿ ವಕ್ಫ್ ಮಂಡಳಿಗೆ ಅಸಂಖ್ಯಾತ ಅಧಿಕಾರ ನೀಡಲಾಯಿತು. ಪೊಲೀಸರೂ ಅಸಹಾಯಕರಾಗಿದ್ದಾರೆ ಎಂದು ಹೇಳಿದರು.