ಶ್ರೀಲಂಕಾ ನೌಕಾಪಡೆಯಿಂದ 12 ಭಾರತೀಯ ಮೀನುಗಾರರ ಬಂಧನ

ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾದ ಸಮುದ್ರ ಗಡಿಯಲ್ಲಿ ಅಕ್ರಮ ಮೀನುಗಾರಿಕೆ ಆರೋಪದ ಮೇಲೆ 12 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿ ಅವರ ದೋಣಿಯನ್ನೂ ಜಪ್ತಿ ಮಾಡಲಾಗಿದೆ. ಇಂತಹ ಘಟನೆಗಳಲ್ಲಿ ಶ್ರೀಲಂಕಾದಿಂದ ಬಂಧಿತ ಭಾರತೀಯರ ಸಂಖ್ಯೆ ಈಗ 462 ಕ್ಕೆ ಏರಿದೆ ಹಾಗೂ 62 ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎರಡು ನೆರೆಯ ದೇಶಗಳ ನಡುವೆ ಪುನರಾವರ್ತಿತ ಮೀನುಗಾರಿಕೆ ಸಮಸ್ಯೆಯನ್ನು ಚರ್ಚಿಸಲು 12 ಸದಸ್ಯರ ಭಾರತೀಯ ತಂಡವು ಅಕ್ಟೋಬರ್ 29 ರಂದು ಶ್ರೀಲಂಕಾಕ್ಕೆ ಭೇಟಿ ನೀಡಲಿದೆ ಎಂದು ಶ್ರೀಲಂಕಾದ ಮೀನುಗಾರಿಕೆ ಸಚಿವಾಲಯ ತಿಳಿಸಿದೆ. ಎರಡೂ ದೇಶಗಳ ಮೀನುಗಾರರು ತಿಳಿಯದೆ ಪರಸ್ಪರರ ಪ್ರಾದೇಶಿಕ ಜಲಪ್ರದೇಶವನ್ನು ಪ್ರವೇಶಿಸಿದ ಕಾರಣಕ್ಕಾಗಿ ಹೆಚ್ಚಾಗಿ ಬಂಧಿಸಲ್ಪಡುತ್ತಾರೆ. (ಇದು ಹಾಗಾಗಬಾರದು; ಅದಕ್ಕಾಗಿ ಎರಡೂ ದೇಶಗಳ ಸಮುದ್ರ ಗಡಿಯಲ್ಲಿ ಮೀನುಗಾರರಿಗೆ ಗಡಿ ತಿಳಿಯಲು ಫಲಕಗಳನ್ನು ಹಾಕಲು ಏಕೆ ಪರಿಹಾರವನ್ನು ತೆಗೆದುಕೊಳ್ಳುತ್ತಿಲ್ಲ ? – ಸಂಪಾದಕರು)

ಸಂಪಾದಕೀಯ ನಿಲುವು

ಇಂತಹ ಘಟನೆಗಳು ನಿರಂತರವಾಗಿ ನಡೆಯದಂತೆ ತಡೆಯಲು ಸರಕಾರ ಏಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ?