ಸರ್ದಾರ್ ಪಟೇಲ್ ಅವರ 150ನೇ ಜಯಂತಿ ನಿಮಿತ್ತ ದೇಶಾದ್ಯಂತ ಸ್ಮರಣೋತ್ಸವ ಆಚರಣೆ

ನವದೆಹಲಿ – ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜಯಂತಿ ನಿಮಿತ್ತ, ಕೇಂದ್ರ ಸರಕಾರವು 2024 ರಿಂದ 2026 ಈ ಎರಡು ವರ್ಷಗಳ ಕಾಲಾವಧಿಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ರಾಷ್ಟ್ರಾದ್ಯಂತ ಅವರ ಸ್ಮರಣೋತ್ಸವವನ್ನು ಆಚರಿಸಲು ನಿರ್ಧರಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಕ್ಟೋಬರ್ 23 ರಂದು ಇದನ್ನು ಘೋಷಿಸಿದರು. ಸರ್ದಾರ್ ಪಟೇಲ್ ಅವರು ಭಾರತಕ್ಕೆ ನೀಡಿದ ಮಹಾನ್ ಕೊಡುಗೆಯನ್ನು ಗೌರವಿಸುವುದು, ಹಾಗೆಯೇ ಕಾಶ್ಮೀರದಿಂದ ಲಕ್ಷದ್ವೀಪದವರೆಗೆ ರಾಷ್ಟ್ರವನ್ನು ಒಂದುಗೂಡಿಸುವಲ್ಲಿ ಅವರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುವುದು, ಈ ಎಲ್ಲಾ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಅಕ್ಟೋಬರ್ 31 ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವಾಗಿದೆ.