TN Railway Accident: ರೈಲು ಹಳಿಯಲ್ಲಿನ ನಟ್ಟು ಬೋಲ್ಟು ತೆಗೆದಿದ್ದರಿಂದ ಭಾಗಮತಿ ಎಕ್ಸ್ಪ್ರೆಸ್ ಅಪಘಾತಕ್ಕಿಡಾಗಿರುವುದು ಬಹಿರಂಗ !

ಚೆನ್ನೈ – ಅಕ್ಟೋಬರ್ ೧೧ ರಂದು ಮೈಸೂರಿನಿಂದ ಬಿಹಾರದ ದರಭಂಗಗೆ ಹೊರಟಿದ್ದ ಭಾಗಮತಿ ಎಕ್ಸ್ಪ್ರೆಸ್ ಹಳಿಯಿಂದ ಜಾರಿ ಪಕ್ಕದ ಹಳಿಯಲ್ಲಿ ನಿಂತಿದ್ದ ಗುಡ್ಸ್ ಗಾಡಿಗೆ ಡಿಕ್ಕಿ ಹೊಡೆಯಿತು. ರೈಲ್ವೆ ಇಲಾಖೆಯ ತನಿಖೆಯಲ್ಲಿ ಈ ಅಪಘಾತದ ಕಾರಣ ಬೆಳಕಿಗೆ ಬಂದಿದೆ. ಕವರೈಪೆಟೆ ನಿಲ್ದಾಣದ ಹತ್ತಿರ ನಡೆದಿರುವ ಈ ಅಪಘಾತದ ಸ್ಥಳದಲ್ಲಿ ರೈಲ್ವೆ ಹಳಿಯ ನಟ್ಟು ಬೋಲ್ಟು ಅನ್ನು ಉದ್ದೇಶಪೂರ್ವಕವಾಗಿ ತೆಗೆದಿರುವುದು ಬೆಳಕಿಗೆ ಬಂದಿದೆ. ಈ ಅಪಘಾತದಲ್ಲಿ ೨೦ ಜನರು ಗಾಯಗೊಂಡಿದ್ದರು.

ರೈಲ್ವೆ ಭದ್ರತಾ ಆಯುಕ್ತ ಎ.ಎಂ. ಚೌದರಿ ಎದುರು ವಿಚಾರಣೆಗಾಗಿ ಉಪಸ್ಥಿತರಿದ್ದ ಟ್ರ್ಯಾಕ್ ಮ್ಯಾನ್, ಟ್ರೈನ್ ಚಾಲಕ (ಲೋಕೋ ಪೈಲೆಟ್) ‘ಸ್ಟೇಷನ್ ಮಾಸ್ಟರ್, ಇವರ ಸಹಿತ ೧೫ ರೈಲ್ವೇ ಸಿಬ್ಬಂದಿಗಳು ಈ ಅಪಘಾತದ ಹಿಂದೆ ಯಾವುದೇ ತಾಂತ್ರಿಕ ದೋಷ ಇಲ್ಲವೆಂದು ಹೇಳಿದರು; ಆದರೆ ಹಳಿಯ ನಟ್ಟು ಬೋಲ್ಟು ಉದ್ದೇಶಪೂರ್ವಕವಾಗಿ ತೆಗೆಯಲಾಗಿತ್ತು ಎಂದು ಅವರು ಹೇಳಿದರು. ರೈಲು ಹಳಿಯಲ್ಲಿನ ೬ ನಟ್ಟು ಬೋಲ್ಟು ತೆಗೆಯಲಾಗಿತ್ತು, ಎಂದು ರೈಲ್ವೆ ಪೊಲೀಸ್ ಇಲಾಖೆಯ ಸಹಾಯಕ ಆಯುಕ್ತ ಕರ್ಣನ್ ಇವರು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ಕೃತ್ಯ ಮಾಡಿದ ಸಮಾಜಘಾತಕರನ್ನು ಹುಡುಕಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !