ಮಂಗಳೂರು – ಕಾಂಗ್ರೆಸ್ ನಗರ ನಕ್ಸಲೀಯರ ಪಕ್ಷ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಭಾಜಪವನ್ನು ಭಯೋತ್ಪಾದಕ ಪಕ್ಷ ಎಂದು ಆರೋಪಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಖರ್ಗೆ, ‘ದೇಶಾದ್ಯಂತ ದಲಿತ, ಹಿಂದುಳಿದ ವರ್ಗ ಮತ್ತು ಬುಡಕಟ್ಟು ಸಮುದಾಯಗಳ ಮೇಲಿನ ದೌರ್ಜನ್ಯಗಳನ್ನು ಭಾಜಪ ಬೆಂಬಲಿಸುತ್ತದೆ’ ಎಂದು ಹೇಳಿದರು. (ಕಾಂಗ್ರೆಸ್ ‘ಭಯೋತ್ಪಾದಕ’ ಪದದ ವ್ಯಾಖ್ಯಾನವನ್ನು ಬದಲಾಯಿಸಿದೆ. ಅದರ ಪ್ರಕಾರ ರಾಷ್ಟ್ರಾಭಿಮಾನಿ ಎಂದರೆ ‘ಭಯೋತ್ಪಾದಕ’ ಮತ್ತು ರಾಷ್ಟ್ರದ್ರೋಹಿ ಅಥವಾ ಭಾರತ ವಿಭಜನೆಯ ಬಗ್ಗೆ ಮಾತನಾಡುವವರು ‘ದೇಶಭಕ್ತರು’ ಆಗಿದೆ. ಈ ಕಾಂಗ್ರೆಸ್ ನೀತಿಯನ್ನು ಗಾಂಧಿಯವರು ಅಂದು ಅರಿತುಕೊಂಡರು ಮತ್ತು ಆದ್ದರಿಂದ ಅವರು ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅನ್ನು ವಿಸರ್ಜಿಸಲು ಶಿಫಾರಸ್ಸು ಮಾಡಿದ್ದರು ! – ಸಂಪಾದಕರು)