ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಲಿಸ್ತಾನಿ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಿ ! – ಭಾರತ

ನವ ದೆಹಲಿ – ಕೆನಡಾವು ಭಾರತದ ವಿರುದ್ಧ ನಿಷ್ಪ್ರಯೋಜಕ ಹೇಳಿಕೆ ನೀಡುವ ಬದಲು, ಭಾರತದ ಮೇಲೆ ಮಾಡಿರುವ ಆರೋಪಗಳ ಪುರಾವೆಗಳನ್ನು ಹಸ್ತಾಂತರಿಸುವುದರೊಂದಿಗೆ ಭಾರತ ವಿರೋಧಿ ಖಲಿಸ್ತಾನಿಗಳನ್ನು ಹದ್ದುಬಸ್ತಿನಲ್ಲಿಡಬೇಕು ಎಂದು ಕೆನಡಾಕ್ಕೆ ಭಾರತ ಹೇಳಿದೆ. ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಹೇಳಿಕೆ ಮತ್ತು ತನಿಖಾ ತಂಡದ ಆರೋಪ ಇವೆರಡೂ ವಿಭಿನ್ನ ವಿಷಯಗಳಾಗಿವೆ ಎಂದು ಭಾರತ ಹೇಳಿದೆ. ಭಾರತವು, ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಲಿಸ್ತಾನಿ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಬೇಕು. ಭಾರತವು ಇತ್ತೀಚೆಗೆ ಉನ್ನತ ಭದ್ರತಾ ಅಧಿಕಾರಿ ಮತ್ತು ಟ್ರೂಡೊ ಸರಕಾರದ ರಾಯಭಾರಿಗೆ ಭಾರತದ ನಿಲುವಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದೆ.

1. ಭಾರತವು ಕೆನಡಾಕ್ಕೆ ನಿಯಮ ಮತ್ತು ಅಂತರರಾಷ್ಟ್ರೀಯ ನಿಯಮಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಪ್ರಧಾನಿ ಜಸ್ಟಿನ ಟ್ರುಡೋ ಇವರು ಯಾವುದೇ ಪುರಾವೆಗಳನ್ನು ಹಾಜರು ಪಡಿಸದೇ, ಭಯೋತ್ಪಾದಕ ಹರದೀಪಸಿಂಗ ನಿಜ್ಜರ ಹತ್ಯೆ ಬಗ್ಗೆ ಭಾರತದ ಮೇಲೆ ಹುರುಳಿಲ್ಲದ ಆರೋಪ ಮಾಡಲು ಸಾಧ್ಯವಿಲ್ಲ ಅಥವಾ ಅವರು ಭಾರತವನ್ನು ತಥಾಕಥಿತ ‘ಅಪರಾಧಿಗಳು’ ಎಂದು ದೂಷಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

2. ಖಲಿಸ್ತಾನಿ ಭಯೋತ್ಪಾದಕರ ಹತ್ಯೆಯ ತನಿಖೆ ನಡೆಸುತ್ತಿರುವ ಭಾರತೀಯ ತನಿಖಾ ಅಧಿಕಾರಿಗಳಿಗೆ ಕೆನಡಾದಿಂದ ನಿರಂತರವಾಗಿ ನೀಡುತ್ತಿರುವ ರಾಜಕೀಯ ಮಾರ್ಗದರ್ಶನದ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ ಮತ್ತು ಅದು ತಪ್ಪು ಎಂದು ಹೇಳಿದೆ.

3. ಜೂನ್ 18, 2023 ರಂದು ನಿಜ್ಜರ್ ಹತ್ಯೆಯ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಉದ್ವಿಗ್ನವಾಗಿವೆ.

4. ಅಕ್ಟೋಬರ್ 11, 2024 ರಂದು, `ಆಸಿಯಾನ್ ಶೃಂಗಸಭೆ’ಯ ಹಿನ್ನೆಲೆಯಲ್ಲಿ ಭೋಜನದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಸ್ಟಿನ್ ಟ್ರುಡೊ ಎದುರುಬದುರಾಗಿದ್ದರು; ಆದರೆ ಉಭಯ ನಾಯಕರ ನಡುವೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಭಾರತ ಹೇಳಿದೆ.

ಸಂಪಾದಕೀಯ ನಿಲುವು

ಇಸ್ರೇಲ್ ಮತ್ತು ಅಮೇರಿಕಾ ಯಾವ ರೀತಿ ತನ್ನ ಶತ್ರುಗಳನ್ನು ಬೇರೆ ದೇಶಗಳಿಗೆ ನುಗ್ಗಿ ಕೊಲ್ಲುತ್ತಾರೆಯೋ, ಅದೇ ರೀತಿ ಈಗ ಭಾರತವು ಕೆನಡಾಕ್ಕೆ ಈ ರೀತಿ ಮನವಿ ಮಾಡುವುದಕ್ಕಿಂತ ಕೆನಡಾದೊಳಗೆ ನುಗ್ಗಿ ಅಲ್ಲಿನ ಖಲಿಸ್ತಾನಿಗಳ ಹತ್ಯೆ ಮಾಡಬೇಕು ಎಂದೇ ರಾಷ್ಟ್ರಪ್ರೇಮಿ ಭಾರತೀಯರಿಗೆ ಅನಿಸುತ್ತದೆ !