ಕರ್ಣಾವತಿ (ಗುಜರಾತ್) – ಇಲ್ಲಿನ ‘ವಂದೇ ಭಾರತ್’ ರೈಲಿನಲ್ಲಿ ಕಳ್ಳತನ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿದ್ದ ಮೇಜರ್ ಹರ್ಷಿತ್ ಚೌಧರಿ ಇವನ ವಿಚಾರಣೆಯಿಂದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 5 ರಂದು ಕರ್ಣಾವತಿಯಿಂದ ಬಂಧನಕ್ಕೊಳಗಾಗಿದ್ದ ಮೇಜರ್ ಹರ್ಷಿತ್ ಚೌಧರಿ ಶೆಹಬಾಜ್ ಮುಷ್ತಾಕ್ ಅಲಿ ಖಾನ್ ಆಗಿರುವುದು ಬಹಿರಂಗವಾಗಿದೆ. ಈತ ನಕಲಿ ಆಧಾರ್ ಕಾರ್ಡ್ ಮಾಡಿಸಿ ಹರ್ಷಿತ್ ಚೌಧರಿ ಹೆಸರಿನಲ್ಲೇ ರೈಲ್ವೇ ರಿಸರ್ವೇಶನ್ ಮಾಡಿಸಿದ್ದ.
1. ಈ ಗುರುತಿನ ಪತ್ರವನ್ನು (ಆಧಾರ್ ಕಾರ್ಡ್)ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಗುರುತಿನ ಚೀಟಿಯಲ್ಲಿ ಶೆಹಬಾಜ್ ನ ಚಿತ್ರವಿದೆ; ಆದರೆ ಹೆಸರನ್ನು ಹರ್ಷಿತ್ ಚೌಧರಿ ಎಂದು ಬರೆಯಲಾಗಿದೆ. ಹಾಗೆಯೇ ಅವನು ಸೇನಾ ಅಧಿಕಾರಿ ಮತ್ತು ಅವನ (ಪದವಿಯು) ಶ್ರೇಣಿಯು ಮೇಜರ್ ಎಂದು ಇದೆ.
2. ಆತನ ನಕಲಿ ಆಧಾರ್ ಕಾರ್ಡ್ ನಲ್ಲಿ ಆತ ರಾಜಸ್ಥಾನದ ನಿವಾಸಿ ಎಂದು ಬರೆಯಲಾಗಿದೆ, ಆದರೆ ಆತ ಮೂಲತಃ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯವನಾಗಿದ್ದಾನೆ.
3. ಶಹಬಾಜ್ ಮುಷ್ತಾಕ್ ಅಲಿ ಖಾನ್ ಈ ನಕಲಿ ಗುರುತಿನ ಚೀಟಿಯ ಮೇಲೆ ದೇಶೀಯ ವಿಮಾನದಲ್ಲಿ 3 ಬಾರಿ ಮತ್ತು ರೈಲ್ವೆನಲ್ಲೂ ಪ್ರಯಾಣಿಸಿದ್ದಾನೆ. ಶೆಹಬಾಜ್ ಮುಷ್ತಾಕ್ ಅಲಿ ಖಾನ್ ವಿವಾಹಿತನಾಗಿದ್ದು ಆತನಿಗೆ 2 ಮಕ್ಕಳಿದ್ದಾರೆ.
4. ಶಹಬಾಜ್ ಅವರ ತಂದೆ ಮುಷ್ತಾಕ್ ಅಲಿ ಖಾನ್ ಭಾರತೀಯ ಸೇನೆಯಿಂದ ನಿವೃತ್ತರಾಗಿದ್ದಾರೆ ಹಾಗೂ ಒಬ್ಬ ಸಹೋದರ ಭಾರತೀಯ ವಾಯುಪಡೆಯಲ್ಲಿದ್ದಾನೆ. ಈ ಪ್ರಕರಣದಲ್ಲಿ ಆರೋಪಿ ಶಹಬಾಜ್ ನನ್ನು ವಿಚಾರಣೆಗಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಂಪಾದಕೀಯ ನಿಲುವು
|