|

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಘಟನೆ ರಾಜ್ಯದ ರಾಂಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಜಿಲ್ಲೆಯ ಹೆಸರಾಂತ ಆಸ್ಪತ್ರೆಯೊಂದರ ನಿರ್ದೇಶಕನಾದ ಸಾಜಿದ್ ಪಾಷಾ ಅತ್ಯಾಚಾರ ಎಸಗಿದ್ದಾನೆಂದು ಹೇಳಲಾಗಿದೆ. ಆಗಸ್ಟ್ 31 ರಂದು ಸಂತ್ರಸ್ತೆಯನ್ನು ಟ್ಯೂಶನ್‌ಗೆ ಕರೆದೊಯ್ಯುವ ನೆಪದಲ್ಲಿ ಅಪಹರಿಸಿದ್ದ. 5 ದಿನಗಳ ಕಾಲ ಆಕೆಯ ಮೇಲೆ ಸಾಜಿದ್ ಅತ್ಯಾಚಾರ ಮಾಡಿದ್ದಾನೆ. ಈ ಪ್ರಕರಣದಲ್ಲಿ ಸಾಜಿದ್ ನ ಸ್ನೇಹಿತ ಮುದಾಸಿರ್ ನನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಸಾಜಿದ್ ಬಗ್ಗೆ ತಿಳಿಸಿದವರಿಗೆ 25 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿದೆ ಮತ್ತು ಅವನ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ರಾಂಪುರ ಜಿಲ್ಲೆಯ ಸ್ವಾರ್ ಪ್ರದೇಶದಲ್ಲಿ ವಾಸಿಸುವ ಸಾಜಿದ್ ಪಾಷಾ ‘ಗ್ರೀನ್ ಸಿಟಿ’ ಎಂಬ ಆಸ್ಪತ್ರೆಯನ್ನು ನಡೆಸುತ್ತಿದ್ದ. ಆಗಸ್ಟ್ 31 ರಂದು, ಸಾಜಿದ್ 11ನೇ ತರಗತಿಯ ಅಪ್ರಾಪ್ತ ಬಾಲಕಿಯನ್ನು ತನ್ನ ಕಾರಿನಲ್ಲಿ ಕರೆದೊಯ್ದು ‘ನಿನ್ನನ್ನು ಟ್ಯೂಶನ್ ತನಕ ಡ್ರಾಪ್ ಮಾಡುತ್ತೇನೆ, ನಿನ್ನ ಗೆಳತಿಯರು ಸ್ವಲ್ಪ ದೂರದಲ್ಲಿದ್ದಾರೆ’ ಎಂದು ಹೇಳಿ ಆಕೆಯನ್ನು ಅಪಹರಿಸಿದ್ದ. ನಂತರ ಆಕೆಯನ್ನು ಉತ್ತರಾಖಂಡ ರಾಜ್ಯದ ರಾಮನಗರದ ಹೋಟೆಲ್‌ಗೆ ಕರೆದೊಯ್ದು ಮೂರು ದಿನಗಳ ಕಾಲ ಅತ್ಯಾಚಾರವೆಸಗಿದ್ದಾನೆ. ಇದಾದ ಬಳಿಕ ಹಲ್ದ್ವಾನಿ ಮತ್ತು ರುದ್ರಪುರಕ್ಕೆ ಕರೆದುಕೊಂಡು ಹೋಗಿ ಮತ್ತೆ ಅತ್ಯಾಚಾರ ಎಸಗಿದ್ದಾನೆ ಅಲ್ಲದೇ ಆಕೆಗೆ ಬಂದೂಕು ತೋರಿಸಿ ಬೆದರಿಸಿದ್ದಾನೆ. 5 ದಿನಗಳ ನಂತರ ಆಕೆಯನ್ನು ರಾಂಪುರಕ್ಕೆ ಕರೆತರಲಾಯಿತು. ಪೊಲೀಸರಿಂದ ಹೆಚ್ಚುತ್ತಿರುವ ಒತ್ತಡವನ್ನು ಕಂಡ ಸಾಜಿದ್ ಸಂತ್ರಸ್ತೆಯನ್ನು ತನ್ನ ಸ್ನೇಹಿತ ಮುದಾಸಿರ್‌ಗೆ ಒಪ್ಪಿಸಿ ಪರಾರಿಯಾದ. ಪೊಲೀಸರು ಸಂತ್ರಸ್ತೆಯನ್ನು ವಶಕ್ಕೆ ಪಡೆದು ಮುದಾಸಿರ್‌ನನ್ನು ಬಂಧಿಸಿದರು.
ಸಂತ್ರಸ್ತೆಯ ತಂದೆ ಸಾಜಿದ್ ನನ್ನು ‘ಖಾನ್ ಮಾಫಿಯಾ’ ಎಂದು ಬಣ್ಣಿಸಿದ್ದಾರೆ. ಅವನು ರಿಯಲ್ ಎಸ್ಟೇಟ್ ಸಂಬಂಧಿತ ವ್ಯವಹಾರದಲ್ಲಿದ್ದಾನೆ. ಅವನಿಗೆ ಇಬ್ಬರು ಪತ್ನಿಯರಿದ್ದು, ಒಬ್ಬ ಪತ್ನಿ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತೆಯ ತಂದೆಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತಲೆಮರೆಸಿಕೊಂಡಿರುವ ಸಾಜಿದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸಂಪಾದಕೀಯ ನಿಲುವುಇಂತಹ ಕಾಮುಕ ಮುಸಲ್ಮಾನನನ್ನು ಶರಿಯಾ ಕಾನೂನಿನ ಪ್ರಕಾರ ನೆಲದಲ್ಲಿ ಹೂತುಹಾಕಿ ಕಲ್ಲಿನಿಂದ ಹೊಡೆದು ಸಾಯಿಸುವ ಶಿಕ್ಷೆ ವಿಧಿಸಬೇಕೆಂದು ಯಾವೊಬ್ಬ ಧರ್ಮಪ್ರೇಮಿ ಮುಸಲ್ಮಾನ ಒತ್ತಾಯಿಸುವುದಿಲ್ಲವೇಕೆ? |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ