ಬಾಂಬ್ ಎಸೆದು ನಂತರ ಚಾಕುವಿನಿಂದ ಹಲ್ಲೆ; ಆರೋಗ್ಯ ಚಿಂತಾಜನಕ
ಭಾಗಲಪುರ (ಬಿಹಾರ) – ಭಾಜಪ ನಾಯಕ ಹಾಗೂ ಜಿಲ್ಲಾ ವಕ್ತಾರರಾದ ಶಶಿ ಮೋದಿ ಅವರ ಮೇಲೆ ಗೂಂಡಾಗಳು ಬಾಂಬ್ ದಾಳಿ ನಡೆಸಿರುವುದು ವರದಿಯಾಗಿದೆ. ಬಾಂಬ್ ದಾಳಿಯಿಂದ ಶಶಿ ಅವರು ಗಾಯಗೊಂಡು ಕೆಳಗೆ ಬಿದ್ದರು, ಆಗಲೂ ನಿಲ್ಲದ ರೌಡಿಗಳು ಅವರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾರೆ. ಶಶಿ ಅವರ ಜೊತೆಯಲ್ಲಿದ್ದ ಅವರ ಸಹಚರನ ಮೇಲೆ ಕೂಡ ದಾಳಿ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡ ಶಶಿ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು ಅವರ ಆರೋಗ್ಯ ಚಿಂತಾಜನಕವಾಗಿದೆ.
ಕಿರುಕುಳ ನೀಡುವವರನ್ನು ಬೈದ ಕಾರಣ ದಾಳಿ ನಡೆದಿರುವ ಸಾಧ್ಯತೆ !
ಈ ದಾಳಿಯ ಕುರಿತು ಅಲ್ಲಿನ ಸ್ಥಳೀಯ ಜನರು ಮಾಹಿತಿ ನೀಡಿದ್ದು, ಈ ದಾಳಿಯು ಸಪ್ಟೆಂಬರ್ ೯ ರ ರಾತ್ರಿ ಸುಮಾರು ೧೨ ಗಂಟೆಗೆ ನಡೆದಿದೆ. ಕುತುಬಗಂಜ ಪ್ರದೇಶದ ಗಣೇಶ ಪೂಜಾ ಪಂಡಾಲ್ ನಲ್ಲಿ ಜನಜಂಗುಳಿ ಇತ್ತು. ಮದ್ಯದ ನಶೆಯಲ್ಲಿದ್ದ ಕೆಲ ಯುವಕರು ಅಲ್ಲಿನ ಮಹಿಳೆಯರನ್ನು ಚುಡಾಯಿಸಿದರು ಹಾಗೂ ಓರ್ವ ಯುವಕನ ಮೊಬೈಲ್ ಕಸಿದುಕೊಂಡರು. ಆಗ ಅಲ್ಲಿ ಉಪಸ್ಥಿತರಿದ್ದ ಶಶಿ ಮೋದಿ ಅವರು ಆ ಯುವಕರನ್ನು ಗದರಿಸಿದರು. ಆಗ ಓರ್ವ ಯುವಕನ ಜೊತೆಗೆ ಅವರ ಮಾರಾಮಾರಿ ಕೂಡ ನಡೆದಿತ್ತು. ಶಶಿ ಅವರ ಮೇಲೆ ದಾಳಿ ನಡೆಯಲು ಈ ಘಟನೆಯೇ ಕಾರಣ ಇರಬಹುದು ಎಂದು ಹೇಳಲಾಗಿದೆ.
ಸಂಪಾದಕೀಯ ನಿಲುವುಬಿಹಾರದಲ್ಲಿ ಭಾಜಪ ಅಧಿಕಾರದಲ್ಲಿರುವಾಗ ಇಂತಹ ಘಟನೆ ನಡೆಯುವುದು ಅಪೇಕ್ಷಿತವಲ್ಲ ! |