ಮುಂಬಯಿ – ನಾಯಕ ಸೈಫ್ ಅಲಿ ಖಾನ್ ಇವರ ಮಗಳು ನಟಿ ಸಾರಾ ಅಲಿ ಖಾನ್ ಪ್ರತಿ ವರ್ಷದಂತೆ ಈ ವರ್ಷ ಕೂಡ ಗಣೇಶ ಚತುರ್ಥಿ ಆಚರಿಸಿದರು. ಅವರ ಮನೆಯಲ್ಲಿ ಶ್ರೀ ಗಣೇಶನ ಮೂರ್ತಿ ಸ್ಥಾಪನೆ ಮಾಡಿದರು. ಅವರು ಈ ಕುರಿತ ಛಾಯಾ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದರು. ಅದರ ನಂತರ ಮುಸಲ್ಮಾನರಿಂದ ವಿರೋಧ ವ್ಯಕ್ತವಾಯಿತು ಹಾಗೂ ಹಿಂದೂಗಳು ಶ್ಲಾಘಿಸಿದರು.
ಸಾಮಾಜಿಕ ಮಾಧ್ಯಮದಿಂದ ಅವರನ್ನು ‘ಕಾಫಿರ’ (ಇಸ್ಲಾಂಅನ್ನು ಒಪ್ಪದಿರುವವರು, ಮೂರ್ತಿ ಪೂಜಕರು) ಎಂದು ಹೇಳಲಾಗುತ್ತದೆ. ‘ನಾವು ಆಕೆಯನ್ನು ಮುಸಲ್ಮಾನನೆಂದು ನಂಬುವುದಿಲ್ಲ. ಆಕೆ ಕೇವಲ ಹೆಸರು ಮುಸಲ್ಮಾನರದ್ದಾಗಿದೆ’, ‘ನಮಗೆ ನಾಚಿಕೆ ಅನಿಸುತ್ತದೆ, ನೀನು ಮುಸಲ್ಮಾನನಾಗಿರುವೆ, ಈ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಲಾಯಿತು.
ಸಂಪಾದಕೀಯ ನಿಲುವುಹಿಂದೂ ನಾಯಕರು, ನಟಿಯರು ಹಾಗೂ ಗಣ್ಯರು ಅಜಮೇರದ ದರ್ಗಾದ ಮೇಲೆ ಚಾದರ ಹೊದಿಸಲು ಹೋಗುತ್ತಾರೆ ಅಥವಾ ಇಫ್ತಾರದಲ್ಲಿ ರಾಜಕೀಯ ನಾಯಕರು ಗೋಲು ಟೋಪಿ ಧರಿಸುತ್ತಾರೆ ಅದು ಯೋಗ್ಯ ಮತ್ತು ಅದೇ ಒಂದು ಮುಸಲ್ಮಾನ ನಟಿ ಮನೆಯಲ್ಲಿ ಶ್ರೀ ಗಣೇಶನ ಮೂರ್ತಿ ಸ್ಥಾಪನೆ ಮಾಡಿದರೆ ಅದು ತಪ್ಪು, ಇದೇ ಮತಾಂಧ ಮುಸಲ್ಮಾನರ ‘ಸರ್ವಧರ್ಮ ಸಮಭಾವ’ವಾಗಿದೆ, ಇದನ್ನು ತಿಳಿದುಕೊಳ್ಳಿ ! |