ಭಾರತದ ಅಂದಿನ ಇಬ್ಬರು ಪ್ರಧಾನಮಂತ್ರಿಗಳು ಪಾಕಿಸ್ತಾನಕ್ಕೆ ಮತ್ತು ಇರಾನ್‌ಗೆ ಆಯಾ ದೇಶದಲ್ಲಿದ್ದ ಭಾರತದ ಗುಪ್ತಚರರ ಸಂಪೂರ್ಣ ಮಾಹಿತಿ ನೀಡಿದ್ದರು !

ಇಂಡಿಯಾ ಟಿವಿ’ಯಲ್ಲಿನ ಕಾರ್ಯಕ್ರಮದಲ್ಲಿ ಪತ್ರಕರ್ತ, ನಿವೃತ್ತ ಸೈನ್ಯ ಅಧಿಕಾರಿ ಮತ್ತು ತಜ್ಞರ ಗಂಭೀರ ಆರೋಪ !

ನವ ದೆಹಲಿ – ಭಾರತದ ಇಬ್ಬರು ಪ್ರಧಾನಿ ಮತ್ತು ಓರ್ವ ರಾಯಭಾರಿ ಇವರ ಕಾರ್ಯಕಾಲದ ಸಮಯದಲ್ಲಿ ಭಾರತದ ಗುಪ್ತಚರ ವ್ಯವಸ್ಥೆ ‘ರಾ’ ದ ಅಧಿಕಾರಿಗಳ ಹೆಸರನ್ನು ಪಾಕಿಸ್ತಾನಕ್ಕೆ ನಿಡಿದ್ದರಿಂದ ಪಾಕಿಸ್ತಾನ ಮತ್ತು ಇರಾನ್ ದೇಶದಲ್ಲಿನ ‘ರಾ’ದ ಅಧಿಕಾರಿಗಳ ಹತ್ಯೆ ಮಾಡಲಾಯಿತು, ಎಂದು ಇಂಡಿಯಾ ಟಿವಿ ಈ ಹಿಂದಿ ಸಮಾಚಾರ ವಾಹಿನಿಯಲ್ಲಿನ ‘ಕಾಫಿ ಪರ್ ಕುರುಕ್ಷೇತ್ರ’ ಈ ಕಾರ್ಯಕ್ರಮದಲ್ಲಿ ಮೇಜರ್ ಗೌರವ ಆರ್ಯ (ನಿವೃತ್ತ), ಪತ್ರಕರ್ತ ಪ್ರದೀಪ ಸಿಂಹ ಮತ್ತು ವಿದೇಶಾಂಗ ನೀತಿ ತಜ್ಞ ವೈಭವ ಸಿಂಹ ಇವರು ಮಾತನಾಡುವಾಗ ದಾವೆ ಮಾಡಿದರು.

ಈ ಚರ್ಚೆಯಲ್ಲಿ ಈ ಮೂವರು ಮಾಹಿತಿ ನೀಡುವಾಗ ಮಾಡಿದ ದಾವೆ,

೧. ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಮಾಜಿ ಪ್ರಧಾನಮಂತ್ರಿ ಇಂದ್ರಕುಮಾರ್ ಗುಜರಾಲ್ ಇವರಿಬ್ಬರು ಇರಾನ್ ಮತ್ತು ಪಾಕಿಸ್ತಾನದಲ್ಲಿ ಕಾರ್ಯನಿರತವಾಗಿರುವ ಭಾರತೀಯ ಗುಪ್ತಚರರ ಹೆಸರುಗಳು ಮತ್ತು ವಿಳಾಸ ಸಹಿತ ಸಂಪೂರ್ಣ ಮಾಹಿತಿ ಆ ದೇಶಕ್ಕೆ ನೀಡಿದ್ದರು, ಪರಿಣಾಮವಾಗಿ ಎಲ್ಲಾ ಗುಪ್ತಚರರು ಸಾವನ್ನಪ್ಪಿದರು. ಭಾರತೀಯ ಗುಪ್ತಚರ ವ್ಯವಸ್ಥೆ ಇಲ್ಲಿಯವರೆಗೆ ಈ ಆಘಾತದಿಂದ ಸಂಪೂರ್ಣವಾಗಿ ಹೊರಬಂದಿಲ್ಲ.

೨. ಗುಜರಾಲ ಪ್ರಧಾನಮಂತ್ರಿ ಆಗಿರುವಾಗ ಅವರು ಪಾಕಿಸ್ತಾನಕ್ಕೆ ಪತ್ರ ಬರೆದು ಅಲ್ಲಿಯ ಭಾರತೀಯ ಗುಪ್ತಚರರ ಹೆಸರುಗಳು ಮತ್ತು ವಿಳಾಸ ಪಾಕಿಸ್ತಾನಕ್ಕೆ ನೀಡಿದ್ದರು. ಆದ್ದರಿಂದ ಅವರೆಲ್ಲರನ್ನೂ ಕೊಲ್ಲಲಾಯಿತು.

೩. ಹಮೀದ್ ಅನ್ಸಾರಿ ಇವರು ಇರಾನದ ರಾಯಭಾರಿ ಆಗಿರುವಾಗ ಅಲ್ಲಿಯ ಭಾರತೀಯ ಏಜೆಂಟರ ಮಾಹಿತಿ ಇರಾನಿಗೆ ನೀಡಿದ್ದರು. ಆದ್ದರಿಂದ ಅವರೆಲ್ಲರನ್ನೂ ಕೊಲ್ಲಲಾಯಿತು.

೪. ಮಾಜಿ ಪ್ರಧಾನಮಂತ್ರಿ ಮುರಾರ್ಜಿ ದೇಸಾಯಿ ಇವರು ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಕುರಿತು ಭಾರತೀಯ ಗುಪ್ತಚರರು ಬಹಳ ಕಷ್ಟದಿಂದ ಸಂಗ್ರಹಿಸಿರುವ ಸೂಕ್ಷ್ಮ ಮಾಹಿತಿ ಪಾಕಿಸ್ತಾನದ ರಾಜಕಾರಣಿಗಳಿಗೆ ಹೇಳಿದ್ದರು. ಅದರ ಪರಿಣಾಮ ಪಾಕಿಸ್ತಾನದಲ್ಲಿರುವ ಭಾರತೀಯ ಏಜೆಂಟ್ ಗಳನ್ನು ಪಾಕಿಸ್ತಾನ ಕೊಲೆ ಮಾಡಿತು, ಹೀಗೆ ಆಗದಿದ್ದರೆ ಆಗ ಪಾಕಿಸ್ತಾನ ಪರಮಾಣು ಬಾಂಬ್ ತಯಾರಿಸಲು ಸಾಧ್ಯವಿರಲಿಲ್ಲ.

೫. ಇದಲ್ಲದೆ ೨೦೦೯ ರಲ್ಲಿ ಈಜಿಪ್ಟ್ ನಲ್ಲಿ ಶರ್ಮ ಅಲ್ ಶೇಖ್ ನಗರದಲ್ಲಿ ಅಂದಿನ ಪ್ರಧಾನಮಂತ್ರಿ ಮನಮೋಹನ ಸಿಂಹ ಇವರು ಭಾರತ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಹಸ್ತಕ್ಷೇಪ ಮಾಡುತ್ತಿದೆ’, ಎಂದು ಸ್ವೀಕೃತಿ ನೀಡಿದ್ದರು. ಆದ್ದರಿಂದಲೇ ಪಾಕಿಸ್ತಾನವು ‘ನೀವು (ಭಾರತ) ನಮ್ಮ ಮೇಲೆ ಕಾಶ್ಮೀರದಲ್ಲಿನ ಅಶಾಂತತೆಯ ಕುರಿತು ಆರೋಪಿಸುತ್ತಾ ಮತ್ತು ಬಲೂಚಿಸ್ತಾನದಲ್ಲಿ ನೀವು ಅದನ್ನೇ ಮಾಡುತ್ತೀರಾ.’ ಸ್ವಾತಂತ್ರ್ಯದ ನಂತರ ಇದಕ್ಕಿಂತಲೂ ದೊಡ್ಡ ತಪ್ಪು ಬಹುಷಃ ಇನ್ನೊಂದು ಆಗಿರಲಿಕ್ಕಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಈ ಆರೋಪ ಹಿಂದೆ ಕೂಡ ಬೇರೆ ಬೇರೆ ವ್ಯಕ್ತಿಗಳಿಂದ ಮಾಡಲಾಗಿತ್ತು. ಇದನ್ನು ಗಮನಿಸಿ ಸರಕಾರ ಎಲ್ಲಾ ಸಾಕ್ಷಿಗಳು ಜನರ ಎದುರಿಗೆ ತರಬೇಕು. ಸರಕಾರವು ಈ ಮೂವರನ್ನು ದೇಶದ್ರೋಹಿಗಳೆಂದು ಘೋಷಿಸಿ ಅದನ್ನು ಇತಿಹಾಸದಲ್ಲಿ ನಮೂದಿಸಬೇಕು, ಅದರಿಂದ ಮುಂದಿನ ಪೀಳಿಗೆಗೆ ಅದರ ಮಾಹಿತಿ ದೊರೆಯುವುದು ಇಲ್ಲವಾದರೆ ಇಂತಹ ಜನರನ್ನು ಗಣ್ಯರೆಂದು ತಿಳಿದುಕೊಳ್ಳುವರು !