
ಬೆಂಗಳೂರು: ಜೆಪಿ ನಗರದ ‘ಪ್ರಸನ್ನ ಜ್ಯೋತಿ’ ಹೋಂ ಫಾರ್ ಹೋಂ ಲೆಸ್ ಗರ್ಲ್ಸ್ ಆಶ್ರಮದ ಹೆಣ್ಣು ಮಕ್ಕಳಿಗೆ ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿ ವತಿಯಿಂದ ‘ಸಮಾಜ ಸಹಾಯ’ ಅಭಿಯಾನದ ಅಡಿಯಲ್ಲಿ ಸಂಸ್ಕಾರ ನೋಟ್ ಬುಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿಯ ಕಾರ್ಯಕರ್ತರಾದ ಸೌ. ಕೋಮಲ ಕಾಶಿ ಇವರು ಮಕ್ಕಳಿಗೆ ಸಂಸ್ಕಾರ ವಹಿಗಳ ಮಹತ್ವ ಮತ್ತು ಉದ್ದೇಶಗಳ ಬಗ್ಗೆ ತಿಳಿಸಿದರು ಹಾಗೂ ರಾಷ್ಟ್ರ ಪ್ರೇಮದ ವಿಷಯ, ಸನಾತನ ಧರ್ಮದ ಸಂಸ್ಕಾರಗಳ ಬಗ್ಗೆ ಮಾಹಿತಿ ನೀಡಿದರು. ಭಗವಂತನ ನಾಮಜಪ ಮಾಡುವುದರಿಂದ ಓದಿನಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಇನ್ನೂ ಹಲವಾರು ವಿಷಯಗಳನ್ನು ಮಕ್ಕಳಿಗೆ ತಿಳಿಸಿದರು. ಈ ವೇಳೆ ಸಮಿತಿಯ ಕಾರ್ಯಕರ್ತರಾದ ಸೌ. ಪಲ್ಲವಿ, ಸೌ. ಪುಣ್ಯವತಿ ಹಾಗೂ ಆಶ್ರಮದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!