ಪ್ರಯಾಗರಾಜ್ – ಯಾರಿಗೆ ಧರ್ಮದ ಮೇಲೆ ಶ್ರದ್ಧೆಯಿದೆ, ವೇದ-ಮಂತ್ರಗಳ ಜ್ಞಾನವಿದೆ, ಅಂತವರ ನಿಯಂತ್ರಣದಲ್ಲಿಯೇ ದೇವಸ್ಥಾನವಿರಬೇಕು. ದೇವಸ್ಥಾನಗಳ ಮತ್ತು ಧಾರ್ಮಿಕ ಟ್ರಸ್ಟ್‌ಗಳ ವ್ಯವಸ್ಥಾಪನೆ ಹಾಗೂ ದೇವರ ಬಗ್ಗೆ ಶ್ರದ್ಧೆ ಇರುವವರನ್ನು ಹೊರತುಪಡಿಸಿ ಬೇರೆಯವರು ಇದನ್ನು ನಿರ್ವಹಿಸಿದರೆ, ಜನರ ಶ್ರದ್ಧೆ ನಾಶವಾಗುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಅಲಹಾಬಾದ್ ಹೈಕೋರ್ಟ್, ಮಥುರಾದ ದೇವಸ್ಥಾನಗಳ ನಿರ್ವಹಣೆಯಿಂದ ವಕೀಲರು ಮತ್ತು ಜಿಲ್ಲಾಡಳಿತವನ್ನು ದೂರ ಇಡಬೇಕು. ಮಥುರಾದಲ್ಲಿ ದೇವಸ್ಥಾನದ ವಕೀಲರು ಮತ್ತು ಜಿಲ್ಲಾಡಳಿತದಿಂದ ಮುಕ್ತಗೊಳಿಸುವ ಸಮಯ ಬಂದಿದೆ ಎಂದು ಹೇಳಿದೆ.
1. ದೇವೇಂದ್ರ ಕುಮಾರ ಶರ್ಮಾ ಮತ್ತು ಇತರರ ವಿರುದ್ಧ ರುಚಿ ತಿವಾರಿ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು, ದೇವಾಲಯಗಳಿಗೆ ಸಂಬಂಧಿಸಿದ ವಿವಾದಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಲು ಪ್ರಯತ್ನಿಸಬೇಕು ಎಂದು ಹೇಳಿದರು. ಮಥುರಾದಲ್ಲಿ ದೇವಸ್ಥಾನ ಮತ್ತು ಟ್ರಸ್ಟ್‌ಗಳ ನಿರ್ವಹಣೆಯ ‘ರಿಸೀವರ್’ ಆಗಲು ವಕೀಲರ ನಡುವೆ ಪೈಪೋಟಿ ನಡೆಯುತ್ತಿದೆ. ದೇವಸ್ಥಾನದ ಆಸ್ತಿ ಮತ್ತು ನಿಧಿಯ ನಿರ್ವಹಣೆಯನ್ನು ನೋಡಿಕೊಳ್ಳುವ ವ್ಯಕ್ತಿಯನ್ನು ‘ರಿಸೀವರ್’ ಎಂದು ಕರೆಯಲಾಗುತ್ತದೆ.
2. ಮಥುರಾ ನ್ಯಾಯಾಲಯದ ವಕೀಲರನ್ನು ದೇವಾಲಯಗಳ ‘ರಿಸೀವರ್’ ಹುದ್ದೆಯಿಂದ ಮುಕ್ತಗೊಳಿಸುವ ಸಮಯ ಬಂದಿದೆ ಎಂದು ನ್ಯಾಯಾಧೀಶರು ಹೇಳಿದರು. ವೇದಗಳ ಜ್ಞಾನವಿರುವ, ದೇವಸ್ಥಾನದ ನಿರ್ವಹಣೆಯೊಂದಿಗೆ ಸಂಬಂಧ ಹೊಂದಿರುವ ಮತ್ತು ದೇವರಲ್ಲಿ ಶ್ರದ್ಧೆ ಇರುವವರನ್ನು ‘ರಿಸೀವರ್’ ಆಗಿ ನೇಮಿಸಲು ನ್ಯಾಯಾಲಯ ಸಾಧ್ಯವಾದಷ್ಟು ಪ್ರಯತ್ನಿಸಬೇಕು.
3. ಮಥುರಾದ ವಿವಿಧ ದೇವಸ್ಥಾನಗಳಿಗೆ ಸಂಬಂಧಿಸಿದ ಒಟ್ಟು 197 ಸಿವಿಲ್ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. 197 ದೇವಸ್ಥಾನಗಳ ಪೈಕಿ ವೃಂದಾವನ, ಗೋವರ್ಧನ, ಬಲದೇವ, ಗೋಕುಲ, ಬರ್ಸಾನಾ ಮತ್ತು ಮಠಗಳಲ್ಲಿನ ದೇವಾಲಯಗಳಿಗೆ ಸಂಬಂಧಿಸಿದ ಪ್ರಕರಣಗಳು 1923 ರಿಂದ 2024 ರವರೆಗೆ ಬಾಕಿ ಇವೆ. (ಈ ಪ್ರಕರಣಗಳನ್ನು ಇಲ್ಲಿಯವರೆಗೂ ಇತ್ಯರ್ಥಗೊಳಿಸದ ಎಲ್ಲ ಪಕ್ಷಗಳ ಸರಕಾರಗಳಿಗೆ ನಾಚಿಕೆಗೇಡು ! – ಸಂಪಾದಕರು)
4. ದೇವಸ್ಥಾನದ ನಿರ್ವಹಣೆಯನ್ನು ನೋಡಿಕೊಳ್ಳುವವರಲ್ಲಿ ನೈಪುಣ್ಯತೆಯೊಂಗಿದೆ ಸಂಪೂರ್ಣ ಸಮರ್ಪಣೆ ಮತ್ತು ನಿಷ್ಠೆ ಇರಬೇಕೆಂದು ಹೈಕೋರ್ಟ್ ನ್ಯಾಯಾಧೀಶರು ಹೇಳಿದರು. ಪ್ರಕರಣಗಳ ಸುದೀರ್ಘ ವಿಚಾರಣೆಯಿಂದಾಗಿ ದೇವಸ್ಥಾನಗಳ ನಡುವೆ ವಿವಾದಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ದೇವಸ್ಥಾನಗಳಲ್ಲಿ ವಕೀಲರು ಮತ್ತು ಜಿಲ್ಲಾಡಳಿತದ ನಡುವೆ ಪರೋಕ್ಷ ಪಾಲುದಾರಿಕೆ ಹೆಚ್ಚಾಗುತ್ತಿದೆ. ಇದು ಹಿಂದೂ ಧರ್ಮದ ಮೇಲೆ ಶ್ರದ್ಧೆಯಿರುವವರ ಒಳಿತಿನಲ್ಲಿಲ್ಲ ಎಂದು ಹೇಳಿದೆ.
ಸಂಪಾದಕೀಯ ನಿಲುವುನ್ಯಾಯಾಲಯದ ಇದೇ ಅಭಿಪ್ರಾಯವಿರುವಾಗ ದೇವಸ್ಥಾನಗಳ ಸರಕಾರಿಕರಣವನ್ನು ರದ್ದು ಪಡಿಸಲು ಸರಕಾರ ಈಗ ಯಾವ ಕ್ರಮಗಳನ್ನು ತೆಗೆದುಕೊಳ್ಳುವುದು ? |