ಶ್ರೀಲಂಕಾ ನೌಕಾಪಡೆಯಿಂದ 8 ಭಾರತೀಯ ಮೀನುಗಾರರ ಬಂಧನ

ಚೆನ್ನ್ನೈ (ತಮಿಳುನಾಡು) – ಶ್ರೀಲಂಕಾದ ಕಡಲ ಗಡಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ 8 ಭಾರತೀಯ ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆಯು ಬಂಧಿಸಿದೆ. ಧನುಷ್ಕೋಡಿ ಮತ್ತು ತಲೈಮನ್ನಾರನಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಶ್ರೀಲಂಕಾದ ನೌಕಾಪಡೆಯು ಗಸ್ತು ತಿರುಗುತ್ತಿದ್ದ ಹಡಗು ಅವರನ್ನು ಬಂಧಿಸಿದೆ. ಅವರು ಮೀನುಗಾರರ ದೋಣಿಯನ್ನು ತಡೆದು 8 ಮೀನುಗಾರರನ್ನು ಬಂಧಿಸಿದರು.

1. ಅಂತರರಾಷ್ಟ್ರೀಯ ಕಡಲ ಗಡಿಯನ್ನು ದಾಟಿರುವ ಕಾರಣ ಹೇಳುತ್ತಾ, ಶ್ರೀಲಂಕೆಯ ನೌಕಾಪಡೆಯು 72 ದಿನಗಳಲ್ಲಿ 163 ಭಾರತೀಯ ಮೀನುಗಾರರನ್ನು ಇಲ್ಲಿಯವರೆಗೆ ಬಂಧಿಸಿದೆ. ಉಭಯ ದೇಶಗಳ ನಡುವಿನ ರಾಜಕೀಯ ಚರ್ಚೆಯ ನಂತರ ಬಂಧಿಸಲ್ಪಟ್ಟಿರುವ ಎಲ್ಲ ಮೀನುಗಾರರನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಲಾಗುತ್ತಿದೆ.

2. ಮೀನುಗಾರರನ್ನು ಬಂಧಿಸಿರುವುದರಿಂದ ತಮಿಳುನಾಡಿನ ರಾಮನಾಥಪುರಂ, ನಾಗಾಪಟ್ಟಣಂ ಮತ್ತು ಪುದುಕೊಟ್ಟೈನಲ್ಲಿ ಮೀನುಗಾರಿಕೆ ಉದ್ಯಮಕ್ಕೆ ದೊಡ್ಡ ಆಘಾತವಾಗಿದೆ. ಈ ಪ್ರಕರಣದಲ್ಲಿ ಶ್ರೀಲಂಕಾ ಮತ್ತು ಭಾರತ ರಾಜಕೀಯ ಚರ್ಚೆಗಳ ಮೂಲಕ ಶಾಶ್ವತವಾಗಿ ಇದಕ್ಕೆ ಒಂದು ಪರಿಹಾರವನ್ನು ಕಂಡು ಹಿಡಿಯುವಂತೆ ಮೀನುಗಾರರು ಮನವಿ ಮಾಡುತ್ತಿದ್ದಾರೆ.

ಸಂಪಾದಕೀಯ ನಿಲುವು

ಭಾರತದ ಕಡಲ ಗಡಿ ಎಲ್ಲಿಯವರೆಗೆ ಇದೆ, ಎನ್ನುವುದು ಮೀನುಗಾರರಿಗೆ ತಿಳಿಯಲು ಭಾರತ ಸರಕಾರ ಏಕೆ ಪ್ರಯತ್ನಿಸುವುದಿಲ್ಲ. ಭಾರತ ಇನ್ನೂ ಎಷ್ಟು ವರ್ಷಗಳ ವರೆಗೆ ಭಾರತೀಯ ಮೀನುಗಾರರನ್ನು ಈ ರೀತಿ ಬಂಧನಕ್ಕೆ ಒಳಗಾಗಲು ಬಿಡುತ್ತದೆ ?