|
ಅಲವರ (ರಾಜಸ್ಥಾನ) – ಜಿಲ್ಲೆಯ ಭಿವಾಡಿಯಲ್ಲಿ ಅಲ್-ಕಾಯ್ದಾ ತರಬೇತಿ ಶಿಬಿರ ನಡೆಯುತ್ತಿರುವ ಬಗ್ಗೆ ಮಾಹಿತಿ ಇತ್ತೀಚೆಗೆ ಬಹಿರಂಗವಾಗಿದೆ. ಆಗಸ್ಟ್ 22 ರಂದು ದೆಹಲಿ ಪೊಲೀಸರು ದೊಡ್ಡ ಕಾರ್ಯಾಚರಣೆ ನಡೆಸಿ, 6 ಶಂಕಿತರನ್ನು ಬಂಧಿಸಿದ್ದರು. ವಿಶೇಷವೇನೆಂದರೆ, ಸಂಕಿತ ವ್ಯಕ್ತಿಗಳು ಅಡಗಿ ಕುಳಿತುಕೊಂಡಿದ್ದ ಸ್ಥಳವು ಪೊಲೀಸ ಠಾಣೆಯಿಂದ ಕೇವಲ 700 ಮೀಟರ ಅಂತರದಲ್ಲಿದೆ. ಸಂಶಯಿತರು ಅರಣ್ಯದ ಗುಡ್ಡದ ಮೇಲೆ ಶಸ್ತ್ರಾಸ್ತ್ರಗಳನ್ನು ಬಳಸುವ ತರಬೇತಿ ಪಡೆಯುತ್ತಿದ್ದರು.
ಇಂತಹುದರಲ್ಲಿಯೇ ರಾಜಸ್ಥಾನ ಪೊಲೀಸರಿಗೆ ಈ ಭಯೋತ್ಪಾದಕ ಕೃತ್ಯದ ಬಗ್ಗೆ ಯಾವುದೇ ಸುಳಿವು ಸಿಗದಿರುವುದು ಅನೇಕ ದೊಡ್ಡ ಪ್ರಶ್ನೆಗಳು ಉದ್ಭವಿಸುತ್ತವೆ. ದೆಹಲಿ ಪೊಲೀಸರು ಕ್ರಮ ಕೈಗೊಂಡ ನಂತರವಷ್ಟೇ, ರಾಜಸ್ಥಾನ ಪೊಲೀಸರಿಗೆ ಅಲ್ ಕಾಯ್ದಾದಂತಹ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿರುವ ಬಗ್ಗೆ ಮಾಹಿತಿ ಸಿಕ್ಕಿತು. ಇದನ್ನು ಸ್ವತಃ ರಾಜ್ಯದ ಪೊಲೀಸ ಮಹಾನಿರ್ದೇಶಕರು ಒಪ್ಪಿಕೊಂಡಿದ್ದಾರೆ. ಅವರು ಮಾತನಾಡಿ, ಶಂಕಿತ ವ್ಯಕ್ತಿಗೂ ರಾಜಸ್ಥಾನಕ್ಕೂ ಏನು ಸಂಬಂಧವಿದೆ ?, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಭಿವಡಿಯಲ್ಲಿನ ಭಯೋತ್ಪಾದಕ ನೆಲೆಗೆ ಸಂಬಂಧಿಸಿದಂತೆ ಅನೇಕ ಆಘಾತಕಾರಿ ವಿಷಯಗಳು ಬಹಿರಂಗವಾಗಿದ್ದು, ಶಂಕಿತ ವ್ಯಕ್ತಿ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದನು; ಆ ಕೋಣೆಯಿಂದ ಪೊಲೀಸರಿಗೆ ಅಕ್ರಮ ಶಸ್ತ್ರಾಸ್ತ್ರಗಳು, ಗುಂಡು ಮತ್ತು ಭಯೋತ್ಪಾದಕ ವಿಚಾರಸರಣಿಯ ಪುಸ್ತಕಗಳು ಪತ್ತೆಯಾಗಿದೆ. ಅಕ್ಕಪಕ್ಕದಲ್ಲಿ ನಿವಾಸಿಗಳು, ಇಲ್ಲಿಗೆ ಯಾರು ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಪೊಲೀಸ ಠಾಣೆಯಿಂದ ಕೆಲವೇ ಅಂತರದಲ್ಲಿ ನಡೆಯುವ ಅಪರಾಧದ ಸುಳಿವನ್ನು ಕಂಡು ಹಿಡಿಯಲು ಸಾಧ್ಯವಾಗದಿರುವ ಪೊಲೀಸರಿಗೆ ದುರ್ಗಮ ಪ್ರದೇಶದಲ್ಲಿರುವ ಅಪರಾಧಗಳ ಸುಳಿವನ್ನು ಎಂದಾದರೂ ಕಂಡು ಹಿಡಿಯುವರೇ? ಇದು ಪೊಲೀಸರಿಗೆ ನಾಚಿಕೆಗೇಡು ! ಇಂತಹ ಪೊಲೀಸರು ಜನರ ರಕ್ಷಣೆ ಮಾಡುವರೆ ? |