Insult Indian Flag: ಮಾಲಾಡ್ (ಮುಂಬಯಿ): ರಾಷ್ಟ್ರಧ್ವಜ ಕಿತ್ತ ನಾಝಿಯ ಅನ್ಸಾರಿ ವಿರುದ್ಧ ಪೊಲೀಸರಿಗೆ ದೂರು !

ಅಕ್ಕ-ಪಕ್ಕದವರಿಗೆ ಬೆದರಿಕೆ, ಬೈಗುಳ

ಮುಂಬಯಿ – ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜ ಹಾರಿಸಿದ್ದಕ್ಕೆ, ಸಿಟ್ಟಿಗೆದ್ದು ರಾಷ್ಟ್ರಧ್ವಜವನ್ನು ಕಿತ್ತು ಹಾಕುವ ಪ್ರಯತ್ನ ಮಾಡಿದ್ದ ನಾಝಿಯ ಅನ್ಸಾರಿ ಎಂಬ ಮಹಿಳೆಯ ವಿರುದ್ಧ ಸ್ಥಳಿಯ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

೧. ೨೦೧೬ರಿಂದ ಮಲಾಡ್ ನ ನಿವಾಸಿಗಳು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದ್ದಾರೆ. ಕೆಲವು ಕಾಲ ಅಬ್ದುಲ್ ಕಾದಿರ್ ಅನ್ಸಾರಿ ಎಂಬಾತ ಇಲ್ಲಿಯ ಸಮಿತಿಯ ಅಧ್ಯಕ್ಷನಾಗಿದ್ದನು. ಆಗ ಅವನ ಕುಟುಂಬದವರು ವಿವಿಧ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮ ವರ್ಚಸ್ಸನ್ನು ತೋರಿಸಲು ಪ್ರಯತ್ನ ಮಾಡುತ್ತಿದ್ದರು. ಅಲ್ಲದೇ, ಈ ಎರಡು ರಾಷ್ಟ್ರೀಯ ದಿನಾಚರಣೆ ವೇಳೆ ಸ್ಥಳೀಯ ನಿವಾಸಿಗಳಿಗೆ ಅವರು ಅಡಚಣೆ ನಿರ್ಮಾಣ ಮಾಡುತ್ತಿದ್ದರು.

೨. ಆಗಸ್ಟ್ ೧೫ ರಂದು ಅನ್ಸಾರಿ ಕುಟುಂಬದವರು ಅಲ್ಲಿನ ನಿವಾಸಿಗಳಿಗೆ ಬೈಗುಳ ಬೈಯುತ್ತಾ ಬೆದರಿಕೆ ಹಾಕಿದರು. ಅನ್ಸಾರಿ ಅವರ ಸೊಸೆ ನಾಝಿಯ ಅನ್ಸಾರಿ (ನಂದು) ಮತ್ತು ಮಗ ರಹಮಾನ್ ಅನ್ಸಾರಿ ಇವರು ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

೩. ‘ನಿಮ್ಮ ಮನೆಯಲ್ಲಿ ಧ್ವಜ ಹಾರಿಸಿ’ ಎಂದು ಹೇಳಿದ ನಾಝಿಯಾ ಕೆಟ್ಟ ಪದಗಳ ಪ್ರಯೋಗ ಮಾಡಿ ಬೈಯುತ್ತಾ ಅಲ್ಲಿ ಉಪಸ್ಥಿತರಿದ್ದ ಜನರನ್ನು ಬೈದಳು. ಪೊಲೀಸರು ನಾಝಿಯಾ ವಿರುದ್ಧ ಯೋಗ್ಯ ಕ್ರಮ ಕೈಗೊಳ್ಳಬೇಕೆಂದು, ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ .(ಕೇವಲ ಆಗ್ರಹ ಬೇಡ, ಆ ಮಹಿಳೆಯ ಮೇಲೆ ಕ್ರಮ ಕೈಗೊಳ್ಳುವವರೆಗೆ ಸರಕಾರವನ್ನು ಬೆಂಬೆತ್ತಬೇಕು ! – ಸಂಪಾದಕರು).

 

ಸಂಪಾದಕೀಯ ನಿಲುವು

ರಾಷ್ಟ್ರಧ್ವಜ ಕಿತ್ತಾಹಾಕಲು ಇದೇನು ಪಾಕಿಸ್ತಾನವೇ ? ರಾಷ್ಟ್ರ ಪ್ರೇಮಿಗಳು ಸಂಘಟಿತರಾಗಿ ಇಂತಹ ರಾಷ್ಟ್ರ ವಿರೋಧಿ ಕೃತ್ಯ ಮಾಡುವವರನ್ನು ತರಾಟೆಗೆ ತೆಗೆದುಕೊಳ್ಳಬೇಕು, ಹಾಗೂ ಅವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳುವುದಕ್ಕಾಗಿ ಪ್ರಯತ್ನಿಸಬೇಕು !