
ಮೌಲಾನಾ ಹಸನ್ ಜಮೀಲ್ ಕಟ್ಟಾ ಹಿಂದೂ ವಿರೋಧಿ ಇಸ್ಲಾಮಿಕ್ ಧರ್ಮಗುರು ಆಗಿದ್ದು ಭಾರತದ ವಿರುದ್ಧ ವಿಷಕಾರುತ್ತಿದ್ದಾನೆ. ಮೌಲಾನಾ ಹಸನ್ ಜಮೀಲ್ ಭಾರತದ ವಿರುದ್ಧ ಯುದ್ಧ ಸಾರುವ ಮತ್ತು ಕೆಂಪು ಕೋಟೆಯ ಮೇಲೆ ಇಸ್ಲಾಮಿಕ್ ಧ್ವಜವನ್ನು ಹಾರಿಸುವ ಕನಸು ಕಾಣುತ್ತಾನೆ. ಬಾಂಗ್ಲಾದೇಶದ ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಹಸನ್ ಜಮಿಲ್, ನೀವು ಗಾಬರಿಪಡುವ ಅಗತ್ಯವಿಲ್ಲ. ನಿಮ್ಮ ಶತ್ರುಗಳು ನಾಶವಾಗುತ್ತಾರೆ ಎಂದು ಅಲ್ಲಾಹನು ಹೇಳಿದ್ದಾನೆ ಎಂದು ಹೇಳಿದ್ದಾನೆ. ಭಾರತ ಮತ್ತು ಇಸ್ರೇಲ್ ನಾಶವಾಗುವುದು ನಿಶ್ಚಿತ ಎಂಬುದು ನಾವು ನಂಬುತ್ತೇವೆ. ನಮಗೆ ಶಸ್ತ್ರಾಸ್ತ್ರಗಳ ಅಗತ್ಯವಿಲ್ಲ. ನಾವು ಅಲ್ಲಾಹನ ಮೇಲೆ ಪ್ರಮಾಣ ಮಾಡುತ್ತೇವೆ. ಮುಂದೊಂದು ದಿನ ದೆಹಲಿಯ ಕೆಂಪು ಕೋಟೆಯ ಮೇಲೆ ಇಸ್ಲಾಮಿಕ್ ಧ್ವಜವನ್ನು ಹಾರಿಸುತ್ತೇವೆ ಎಂದು ನಾವು ಯಾವಾಗಲೂ ಕನಸು ಕಾಣುತ್ತೇವೆ. ಮುಸ್ಲಿಮರು ಯಾರ ಪರಮಾಣು ಶಸ್ತ್ರಾಸ್ತ್ರಗಳನ್ನು ನಂಬುವುದಿಲ್ಲ, ಅವರು ಅಲ್ಲಾನನ್ನು ಮಾತ್ರ ನಂಬುತ್ತಾರೆ. ನಾವು ಹೋರಾಡುತ್ತೇವೆ ಮತ್ತು ನಾವು ಭಾರತವನ್ನು ವಶಪಡಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾನೆ.
2040 ರ ನಂತರ, ಬಾಂಗ್ಲಾದೇಶದಲ್ಲಿ ಮುಸ್ಲಿಮರನ್ನು ಹೊರತುಪಡಿಸಿ ಬೇರೆ ಯಾರೂ ಇರುವುದಿಲ್ಲ !
ಹಿಂದೂ ವಿರೋಧಿ ವಿಷಕಾರುವವರಲ್ಲಿ ಹಸನ್ ಜಮೀಲ್ ಒಬ್ಬನೇ ಅಲ್ಲ. ಮೌಲಾನಾ ನೂರ್ ಹಸನ್ ಕೂಡ ಬಾಂಗ್ಲಾದೇಶದಿಂದ ಹಿಂದೂಗಳನ್ನು ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡುತ್ತಿದ್ದಾನೆ. ಬಾಂಗ್ಲಾದೇಶದಲ್ಲಿ ಮುಸ್ಲಿಮರನ್ನು ಹೊರತುಪಡಿಸಿ ಬೇರೆ ಯಾರೂ ವಾಸಿಸಲು ಅವಕಾಶ ನೀಡಬಾರದು ಎಂಬ ಯೋಜನೆಯಿದೆ. 2040ರ ನಂತರ ಬಾಂಗ್ಲಾದೇಶದಲ್ಲಿ ಇಸ್ಲಾಂ ಹೊರತುಪಡಿಸಿ ಬೇರೆ ಯಾರೂ ಉಳಿಯುವುದಿಲ್ಲ ಎಂದು ನೂರ್ ಹಸನ್ ಹೇಳಿದ್ದಾನೆ. ನಿಮ್ಮ ಧರ್ಮವನ್ನು ಬದಲಿಸಿ. ಅಲ್ಲಾ ಇಚ್ಛಿಸಿದರೆ ಬಾಂಗ್ಲಾದೇಶ ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರವಾಗಲಿದೆ ಎಂದಿದ್ದಾನೆ.
‘ಮುಸ್ಲಿಂ ಹಬ್ಬಗಳಲ್ಲಿ ಹಿಂದೂಗಳು ಭಾಗವಹಿಸದಿರುವಾಗ ದುರ್ಗಾಪೂಜೆಗೆ ನೀವೇಕೆ ಹೋಗುತ್ತೀರಿ?’
ಮೌಲಾನಾ ಜುನೈದ್ ಅಲ್ ಹಬೀಬ್ ಮಾತನಾಡಿ, ಇಲ್ಲಿಯವರೆಗೂ ಮುಸ್ಲಿಮರ ಹಬ್ಬ ಹರಿದಿನಗಳಲ್ಲಿ ಒಬ್ಬನೇ ಒಬ್ಬ ಹಿಂದುವೂ ಕಾಣಿಸಿಕೊಂಡಿಲ್ಲ. ನಿಮ್ಮೊಂದಿಗೆ ಯಾವ ಹಿಂದೂವೂ ಉಪವಾಸ ಮಾಡಿಲ್ಲ. ಒಬ್ಬನೇ ಒಬ್ಬ ಹಿಂದೂ ಈದ್ ನಮಾಜಿಗೆ ಬರಲಿಲ್ಲ. ಒಬ್ಬನೇ ಒಬ್ಬ ಹಿಂದೂ ನಿನ್ನೊಂದಿಗೆ ಶುಕ್ರವಾರದ ನಮಾಜ್ ಗೆ ಬಂದಿಲ್ಲ; ಏಕೆಂದರೆ ಹಿಂದೂಗಳು ‘ಇವೆಲ್ಲ ಮುಸ್ಲಿಮರದ್ದು’ ಎಂದು ನಂಬುತ್ತಾರೆ; ಆದರೆ ಮುಸಲ್ಮಾನರಾಗಿದ್ದರೂ ಸಹ ನೀವು ಹಿಂದೂ ದುರ್ಗಾಪೂಜೆಗೆ ಏಕೆ ಹೋಗುತ್ತೀರಿ?, ನಿಮಗೆ ನಾಚಿಕೆ ಇಲ್ಲವೇ? ನಾವು ಭಾರತದ ಕೆಂಪು ಕೋಟೆಯನ್ನು ನಿರ್ಮಿಸಿದ್ದೇವೆ. ಭಾರತದ ಸ್ವಾತಂತ್ರ್ಯಕ್ಕಾಗಿ ನಾವು ನಮ್ಮ ರಕ್ತವನ್ನು ಹರಿಸಿದ್ದೇವೆ. ಭಾರತ ನಮ್ಮ ದೇಶವಾಗಿದೆ. ನೀವು ದೇಶಭಕ್ತಿಯ ಘೋಷಣೆಗಳನ್ನು ನೀಡುತ್ತೀರಿ. ರಾಜಕೀಯ ನಾಯಕರಿಗೆ ನಮ್ಮ ಕೂಗು ಕೇಳಿಸಲಿಲ್ಲ. ಸರಕಾರ ಉರುಳಿಸಲು ನಮಗೆ ಹೆಚ್ಚು ಸಮಯ ಬೇಕಾಗುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.
ಕೆನಡಾದಲ್ಲಿ ಭಾರತೀಯ ಯುವತಿಯ ಗುಂಡಿಕ್ಕಿ ಹತ್ಯೆ
ನೇಪಾಳ: ಮುಸ್ಲಿಂರಿಂದ ಹಿಂದೂಗಳ ಮೇಲೆ ದಾಳಿ! – ಪೊಲೀಸರ ಗುಂಡೇಟಿಗೆ ಓರ್ವ ಹಿಂದೂ ಯುವಕ ಬಲಿ
2030 ರ ವೇಳೆಗೆ ವಿದೇಶಿ ರೋಗಿಗಳಿಗೆ ಭಾರತವು ಒಂದೂವರೆ ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆಯಾಗಲಿದೆ !
ಜಿಹಾದಿ ಅಬ್ದುಲ್ ಬಲ್ಲೌಟ್ ನನ್ನು ೨೪ ಗಂಟೆಗಳಲ್ಲಿ ಮುಗಿಸಿದ ಪೊಲೀಸರು!
ಸಿಯಾಟಲ್ (ಅಮೆರಿಕ) ಇಲ್ಲಿನ ಆಹಾರ ಮೇಳದಲ್ಲಿ ಗುಂಡಿನ ದಾಳಿ: ೨ ಜನರು ಸಾವು
ಕೆನಡಾ-ಅಮೆರಿಕ ಗಡಿಯಲ್ಲಿ (1,700 ಕಿಲೋಗ್ರಾಂ) ಮಾದಕ ಪದಾರ್ಥ ಜಪ್ತಿ