ದೇಶದಲ್ಲಿ 30 ವರ್ಷಗಳನಂತರ ಗೃಹಯುದ್ಧ ಆರಂಭವಾದರೆ ಹಿಂದೂಗಳಿಗೆ ಬದುಕಲು ಸಾಧ್ಯವಾಗದು ! – ಭಾಜಪ ಸಚಿವ ವಿಜಯವರ್ಗಿಯ

ನಿವೃತ್ತ ಸೇನಾ ಅಧಿಕಾರಿಯ ಕುರಿತು ಮಧ್ಯಪ್ರದೇಶದ ಭಾಜಪ ಸಚಿವ ವಿಜಯವರ್ಗಿಯ ಹೇಳಿಕೆ !

ಭಾಜಪ ಸಚಿವ ಕೈಲಾಸ್ ವಿಜಯವರ್ಗಿಯ

ಇಂದೋರ್ (ಮಧ್ಯಪ್ರದೇಶ) – ಇಂದಿನ ಕಾಲದಲ್ಲಿ ಸಾಮಾಜಿಕ ಸಾಮರಸ್ಯ ಅತಿಮುಖ್ಯವಾಗಿದೆ. ನಿನ್ನೆ ನಾನು ನಿವೃತ್ತ ಸೇನಾ ಅಧಿಕಾರಿಯೊಬ್ಬರನ್ನು ಭೇಟಿಯಾಗಿದ್ದೆ. ಅವರು ಸಾಮಾಜಿಕ ಕಾರ್ಯಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. 30 ವರ್ಷಗಳ ನಂತರ ಭಾರತದಲ್ಲಿ ಗೃಹಯುದ್ಧ ಪ್ರಾರಂಭವಾಗಲಿದೆ ಮತ್ತು 30 ವರ್ಷಗಳ ನಂತರ ನೀವು ಈ ರೀತಿ ಬದುಕಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ನಾವು ಈ ವಿಷಯದ ಬಗ್ಗೆ ಚಿಂತನ ಮನನ ಮಾಡಬೇಕು. ಹಿಂದೂ ಪದವನ್ನು ಬಲಪಡಿಸುವ ಕೆಲಸ ಮಾಡಬೇಕು ಎಂದು ಮಧ್ಯಪ್ರದೇಶದ ಭಾಜಪ ಸಚಿವ ಕೈಲಾಸ್ ವಿಜಯವರ್ಗಿಯ ಅವರು ಹೇಳಿದರು. ‘ಸಾಮಾಜಿಕ ಸಾಮರಸ್ಯ ರಕ್ಷಾಬಂಧನ ಉತ್ಸವ’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಕೈಲಾಸ್ ವಿಜಯವರ್ಗಿಯ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಬ್ರಿಟಿಷರ ಒಡೆದು ಆಳುವ ನೀತಿಯಂತೆ ಕೆಲವರು ಹಿಂದೂ ಸಮಾಜವನ್ನು ಜಾತಿ ಆಧಾರದ ಮೇಲೆ ವಿಭಜಿಸಲು ಬಯಸುತ್ತಿದ್ದಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹೀಗಿದ್ದರೆ, ಕೇಂದ್ರ ಮತ್ತು ಭಾಜಪ ಸರ್ಕಾರದ ರಾಜ್ಯಗಳು ಈಗಲೇ ಯೋಗ್ಯ ಕ್ರಮ ಕೈಗೊಳ್ಳಬೇಕು !

‘ವಿಜಯವರ್ಗೀಯ ಅವರ ಹೇಳಿಕೆ ಬೇಜವಾಬ್ದಾರಿತನದ್ದಾಗಿದೆ !’ – ಕಾಂಗ್ರೆಸ್ ಟೀಕೆ

ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ನೀಲಾಭ್ ಶುಕ್ಲಾ ಅವರು ವಿಜಯವರ್ಗಿಯ ಅವರ ಹೇಳಿಕೆ ಸಂಪೂರ್ಣ ಬೇಜವಾಬ್ದಾರಿಯಿಂದ ಕೂಡಿದೆ ಎಂದು ಟೀಕಿಸಿದ್ದಾರೆ. ಈ ಹೇಳಿಕೆಯು ದೇಶದಲ್ಲಿ ಅಸ್ಥಿರತೆ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಶಾಂತಿ ಮತ್ತು ಸಹೋದರತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದಕ್ಕೆ ವಿಜಯವರ್ಗಿಯವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. 30 ವರ್ಷಗಳ ನಂತರ ದೇಶದಲ್ಲಿ ಗೃಹಯುದ್ಧದ ಭೀತಿಯನ್ನು ಯಾವ ನಿವೃತ್ತ ಸೇನಾಧಿಕಾರಿ ವ್ಯಕ್ತಪಡಿಸಿದ್ದಾರೆ ಮತ್ತು ಅದಕ್ಕೆ ಆಧಾರವೇನು ಎಂಬುದನ್ನು ವಿಜಯವರ್ಗಿಯವರು ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ದೇಶದಲ್ಲಿ ಹಿಂದೂಗಳ ಜನಸಂಖ್ಯೆಯು ಕಡಿಮೆಯಾಗುತ್ತಿದೆ ಮತ್ತು ಮುಸ್ಲಿಮರ ಜನಸಂಖ್ಯೆಯು ಹೆಚ್ಚುತ್ತಿದೆ ಮತ್ತು ಮುಂದಿನ 30 ವರ್ಷಗಳ ನಂತರ ಇದು ಇನ್ನೂ ಹೆಚ್ಚಾದಾಗ ಏನಾಗುತ್ತದೆ ಎಂಬುದನ್ನೇ ವಿಜಯವರ್ಗಿಯ ಹೇಳಿದ್ದಾರೆ. ಕಾಂಗ್ರೆಸಿಗೂ ಹಿಂದೂಗಳಿಗೂ ಯಾವುದೇ ಸಂಬಂಧವಿಲ್ಲ ಹಾಗಾಗಿ ಅವರು ಈ ರೀತಿ ಟೀಕೆ ಮಾಡುತ್ತಾರೆ. ಹಿಂದೂಗಳ ಉಳಿವಿಗಾಗಿ ಭಾರತವನ್ನು ಕಾಂಗ್ರೆಸ್‌ ಮುಕ್ತಗೊಳಿಸುವುದು ಅಗತ್ಯ !