ಆಕ್ರೋಶಿತ ಜನರಿಂದ ಶಾಲೆಗೆ ಬೆಂಕಿ !
ಗುವಾಹಾಟಿ (ಅಸ್ಸಾಂ) – ಕರೀಮಗಂಜ ಜಿಲ್ಲೆಯ ಸರಕಾರಿ ಶಾಲೆಯೊಂದರಲ್ಲಿ ಶಾಲೆಯ ಮುಖ್ಯೋಪಾಧ್ಯಕನು ವಿದ್ಯಾರ್ಥಿನಿಯೊಬ್ಬಳಿಗೆ ಅಶ್ಲೀಲ ವಿಡಿಯೋ (ಪಾರ್ನ್) ತೋರಿಸಿ, ಆಕೆಯನ್ನು ಅನುಚಿತ ರೀತಿಯಲ್ಲಿ ಸ್ಪರ್ಶಿಸಿದ ಪ್ರಕರಣದಲ್ಲಿ ಮುಖ್ಯೋಪಾಧ್ಯಾಪಕನ ವಿರುದ್ಧ ‘ಪೋಕ್ಸೊ’ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆಗಸ್ಟ್ 12 ರಂದು ಈ ಘಟನೆ ನಡೆದಿತ್ತು. ಪೊಲೀಸರು ಈ ಕುರಿತು ಮಾತನಾಡುತ್ತಾ, ಸಂತ್ರಸ್ತ ವಿದ್ಯಾರ್ಥಿನಿಯ ತನ್ನ ಕುಟುಂಬದವರಿಗೆ ಈ ಘಟನೆ ಬಗ್ಗೆ ತಿಳಿಸಿದಾಗ, ಕುಟುಂಬದವರು ಮುಖ್ಯೋಪಾಧ್ಯಾಪಕನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದರು. ಆದರೆ ಅವನು ಶಾಲೆಯಿಂದ ಪರಾರಿಯಾದನು. ತದನಂತರ ಸ್ಥಳೀಯರು ಶಾಲೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು ಎಂದು ತಿಳಿಸಿದರು. ಸ್ಥಳೀಯರು ಈ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಮಕ್ಕಳು ಶಿಕ್ಷಣ ಪಡೆದು ಒಳ್ಳೆಯ ವ್ಯಕ್ತಿಯಾಗಬೇಕೆಂಬ ಆಶಯದಿಂದ ನಾವು ಅವರನ್ನು ಶಾಲೆಗೆ ಕಳುಹಿಸುತ್ತೇವೆ. ಆದರೆ ಇಂತಹ ಶಿಕ್ಷಕರಿಂದ ನಮ್ಮ ಮಕ್ಕಳು ಏನು ಕಲಿಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Case registered against a headmaster In Karimganj (Assam) for showing an obscene video to a student.
Angry locals vandalize and set the school on fire!
What example will such a principal set before the children? Such people should be severely punished!#Parents pic.twitter.com/HatXVjRZlA
— Sanatan Prabhat (@SanatanPrabhat) August 19, 2024
ಸಂಪಾದಕೀಯ ನಿಲುವುಇಂತಹ ಮುಖ್ಯೋಪಾಧ್ಯಾಯರು ಮಕ್ಕಳೆದುರು ಯಾವ ಆದರ್ಶ ನಿರ್ಮಾಣ ಮಾಡುವರು? ಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕು. |