|
ಕೋಲ್ಲಾಪುರ, ಆಗಸ್ಟ 17(ಸುದ್ದಿ) – ವಿಶಾಲಗಡದ(ಕೋಟೆ) ಮೇಲೆ ಹಿಂದುಗಳು ಉದ್ರೇಕಗೊಂಡ ಕೆಲವು ರಾಜಕೀಯ ಜನರಿಗೆ ಅಲ್ಪಸಂಖ್ಯಾತರ ಬಗ್ಗೆ ಸ್ವಲ್ಪ ಹೆಚ್ಚು ಪ್ರೀತಿ ಉಕ್ಕಿತು ಮತ್ತು ಅವರು ತಕ್ಷಣವೇ ಅವರಿಗೆ ಸಹಾಯ ಮಾಡಲು ಕೋಟೆಯ ಮೇಲೆ ಹೋದರು. ಇದಕ್ಕೆ ವ್ಯತಿರಿಕ್ಷವಾಗಿ ಕೋಲ್ಲಾಪುರ ನಗರದಲ್ಲಿ `ಜಯ ಶ್ರೀರಾಮ’ ಘೋಷಣೆ ಕೂಗಿದಾಗ ಅಲ್ಲಿನ ಹಿಂದೂ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಯಾರೂ ಹೋಗಲಿಲ್ಲ. ಚಲನಚಿತ್ರೋದ್ಯಮದ ಮೂಲಕ ಹಿಂದೂ ಸಂಸ್ಕೃತಿಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ ಮತ್ತು ಶೈಕ್ಷಣಿಕ ಮಟ್ಟದಲ್ಲಿ ಹಿಂದೂಗಳಿಗೆ ಧರ್ಮ ಶಿಕ್ಷಣವನ್ನು ನೀಡುತ್ತಿಲ್ಲ. ಈ ಕಾರ್ಯಕ್ರಮದ ಆಯೋಜನೆಯು ಹಿಂದೂ ಸಮಾಜ ಜಾಗೃತಗೊಳ್ಳುತ್ತಿರುವುದರ ಸಂಕೇತವಾಗಿದೆ. ಇದೇ ರೀತಿ ಹಿಂದೂಗಳು ಹಿಂದೂ ಧರ್ಮದ ಮೇಲೆ ಆಗುವ ದಾಳಿಗಳ ವಿರುದ್ಧ ಒಗ್ಗೂಡಬೇಕು. ಇನ್ನು ಮುಂದೆ ಹಿಂದೂಗಳು ಮತ್ತು ಹಿಂದೂ ಧರ್ಮದ ಮೇಲೆ ದಾಳಿ ನಡೆದರೆ, ಅದನ್ನು ಸಹಿಸುವುದಿಲ್ಲ ಹಾಗೆಯೇ ಹಿಂದೂಗಳ ಕೂದಲಿಗೂ ಧಕ್ಕೆಯಾಗಲು ಬಿಡುವುದಿಲ್ಲ, ಎಂದು ಭಾಜಪ ಸಂಸದ ಶ್ರೀ. ಧನಂಜಯ ಮಹಾಡಿಕ ಇವರು ಎಚ್ಚರಿಕೆ ನೀಡಿದರು. ಅವರು ಆಗಸ್ಟ 17 ರಂದು ಶಾಹೂ ಸ್ಮಾರಕ ಇಲ್ಲಿ ನಡೆದ ಹಿಂದೂ ಧರ್ಮ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು.
ಈ ಪರಿಷತ್ತಿನಲ್ಲಿ ದೇವರು, ದೇಶ, ಧರ್ಮದ ಹಿತದೃಷ್ಟಿಯಿಂದ ಮಂಡಿಸಲಾದ 15 ಠರಾವುಗಳನ್ನು ಎಲ್ಲರೂ ಅನುಮೋದಿಸಿದರು. ಹಾಗೆಯೇ ಅಲ್ಲಿದ್ದವರು ಧರ್ಮ ರಕ್ಷಣೆಯ ಪ್ರಮಾಣ ವಚನವನ್ನೂ ಸ್ವೀಕರಿಸಿದರು. ಪರಿಷತ್ತಿನ ಪ್ರಸ್ತಾವನೆಯನ್ನು ಶ್ರೀ. ಅಂಕುಶ ನಿಪಾಣಿಕರ ಮಾಡಿದರು. ಹಾಗೆಯೇ ಹಿಂದೂ ಏಕತಾ ಚಳುವಳಿಯ ನಗರಾಧ್ಯಕ್ಷ ಶ್ರೀ. ಗಜಾನನ ತೋಡಕರ ಇವರು ಪರಿಷತ್ತಿನ ಉದ್ದೇಶವನ್ನು ಹೇಳಿದರು. ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಬಾಬಾಸಾಹೇಬ ಭೋಪಳೆ ಮತ್ತು ‘ಶಿವಶಾಹಿ ಫೌಂಡೇಶ’ನ ಸಂಸ್ಥಾಪಕ ಶ್ರೀ ಸುನೀಲ ಸಾಮಂತ ಇವರು ಸೂತ್ರಸಂಚಾಲನೆ ಮಾಡಿದರು. ಈ ಪರಿಷತ್ತಿನಲ್ಲಿ 1 ಸಾವಿರಕ್ಕಿಂತ ಅಧಿಕ ಹಿಂದೂ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.