ಮುಂಬಯಿ – ‘ಸೆಂಟ್ರಲ್ ಪ್ರಾವಿಷನ್ ರೈಲ್ವೇ ಕಂಪನಿ’ ಈ ಖಾಸಗಿ ಬ್ರಿಟಿಷ್ ಸಂಸ್ಥೆಯು ಮಹಾರಾಷ್ಟ್ರದ ಅಮರಾವತಿಯಿಂದ ಮುರ್ತಜಾಪುರ ವರೆಗೆ 190 ಕಿಮೀ ಉದ್ದದ ರೈಲು ಮಾರ್ಗವನ್ನು 1916 ರಲ್ಲಿ ನಿರ್ಮಿಸಿತ್ತು. ಆಂಗ್ಲರು ಭಾರತದಿಂದ ಹೋದ ಬಳಿಕ ಅಂದರೆ ಭಾರತವು ಸ್ವತಂತ್ರವಾದ ನಂತರವೂ ಈ ಸಂಸ್ಥೆಗೆ ಹಲವಾರು ದಶಕಗಳವರೆಗೆ 1 ಕೋಟಿ 20 ಲಕ್ಷ ರೂಪಾಯಿಗಳನ್ನು ಬಾಡಿಗೆಯೆಂದು ನೀಡಲಾಗುತ್ತಿತ್ತು. 1951 ರಲ್ಲಿ ಭಾರತೀಯ ರೈಲ್ವೆಯ ರಾಷ್ಟ್ರೀಕರಣದ ನಂತರ, ಭಾರತವು ಅನೇಕ ಪ್ರಯತ್ನಗಳನ್ನು ಮಾಡಿದರೂ ಬ್ರಿಟಶರು ಈ ರೇಲ್ವೆ ಮಾರ್ಗವನ್ನು ಭಾರತಕ್ಕೆ ಬಿಟ್ಟುಕೊಡಲಿಲ್ಲ. ಅಮರಾವತಿಯಿಂದ ಹತ್ತಿಯನ್ನು ಮುಂಬಯಿಗೆ ತರಲು ಆಂಗ್ಲರು ಈ ರೈಲು ಮಾರ್ಗವನ್ನು ನಿರ್ಮಿಸಿದ್ದರು.
ಈ ಮಾರ್ಗದಲ್ಲಿ ಅಚಲಪೂರದಿಂದ ಯವತಮಾಳ ಶಕುಂತಲಾ ಎಕ್ಸಪ್ರೆಸ ರೈಲು ಓಡುತ್ತಿತ್ತು. 70 ವರ್ಷಗಳ ವರೆಗೆ ಈ ರೈಲು ಉಗಿಯ ಇಂಜಿನ ಮೇಲೆ ನಡೆದಿತ್ತು. 1994 ರಲ್ಲಿ, ಡೀಸೆಲ್ ಎಂಜಿನ್ ಸೇರಿಸಲಾಯಿತು. ಸಧ್ಯಕ್ಕೆ ಈ ರೈಲನ್ನು ಸ್ಥಗಿತಗೊಳಿಸಲಾಗಿದ್ದು, ಅದನ್ನು ಪ್ರಾರಂಭಿಸುವಂತೆ ನಾಗರಿಕರ ಆಗ್ರಹವಿದೆ. 5 ಬೋಗಿಗಳ ಈ ರೈಲಿನಿಂದ ಪ್ರತಿದಿನ 1 ಸಾವಿರ ಪ್ರಯಾಣಿಕರು ಪ್ರವಾಸ ಮಾಡುತ್ತಿದ್ದರು. ಸಧ್ಯಕ್ಕೆ ಈ ಬಾಡಿಗೆ ಕೊಡಬೇಕಾಗುತ್ತಿಲ್ಲ ಎಂದು ತಿಳಿದು ಬಂದಿದೆ.