ಇಚಲಕರಂಜಿ (ಜಿಲ್ಲೆ ಕೊಲ್ಲಾಪುರ) – ಸರಕಾರ ಆಗಸ್ಟ್ 13, 14 ಮತ್ತು 15 ರಂದು ಎಲ್ಲಾ ಸರಕಾರಿ ಮತ್ತು ಅರೆ ಸರಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ಮಾಡಲು ಸರಕಾರ ಆದೇಶಿಸಿತ್ತು. ಹೀಗಿರುವಾಗ ಹಾತಕಣಂಗಲೆ ತಾಲೂಕಿನ ಚಂದೂರಿನ ತಲಾಟಿ ಕಚೇರಿಯಲ್ಲಿ ಆಗಸ್ಟ 13 ಮತ್ತು 14ರಂದು ಧ್ವಜಾರೋಹಣ ನಡೆಸಲಾಗಿಲ್ಲ. ಇದು ಗಮನಕ್ಕೆ ಬಂದಾಗ ಸರಪಂಚ ಹಾಗೂ ಗ್ರಾಮಪಂಚಾಯತ ಸದಸ್ಯರು ಗ್ರಾಮ ಚಾವಡಿ ಹತ್ತಿರ ತಲುಪಿದರು. ಅಲ್ಲಿ ಪರಿಶೀಲಿಸಿದ ಸರಪಂಚ ಸ್ನೆಹಲ್ ಕಾಂಬಳೆ ಇವರು ತಲಾಟಿ ರಾಹತ್ ಶೇಖ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ, ಅವರು ‘ಮೇಲಿನ ಕಚೇರಿಯಿಂದ ಯಾವುದೇ ಸೂಚನೆ ಬಂದಿಲ್ಲ, ನನ್ನ ಆರೋಗ್ಯ ಸರಿಯಾಗಿಲ್ಲ. ಗ್ರಾಮದಲ್ಲಿ ನೆರೆ ಬಂದಿದೆ’ ಎಂದು ಹಾರಿಕೆಯ ಉತ್ತರ ನೀಡಿದರು. ಇದರಿಂದ ಗ್ರಾಮಪಂಚಾಯತಿ ಸದಸ್ಯರು ಮತ್ತು ಗ್ರಾಮಸ್ಥರು ವಿಭಾಗಾಧಿಕಾರಿ ಮೌಸಮಿ ಚೌಗುಲೆಯವರಿಗೆ ತಲಾಟಿ ರಾಹತ ಶೇಕ ವಿರುದ್ಧ ದೇಶದ್ರೋಹದ ಅಪರಾಧವನ್ನು ದಾಖಲಿಸಬೇಕು ಎಂದು ಕೋರುವ ಮನವಿಯನ್ನು ಸಲ್ಲಿಸಿದರು. (ಇಂತಹ ಮನವಿಯನ್ನು ಏಕೆ ನೀಡಬೇಕಾಗುತ್ತದೆ ? ಪೊಲೀಸರು ಸ್ವತಃ ಏಕೆ ಕ್ರಮ ಕೈಕೊಳ್ಳುವುದಿಲ್ಲ ! – ಸಂಪಾದಕರು)
ಈ ಸಂದರ್ಭದಲ್ಲಿ ಸದರಿ ಗ್ರಾಮ ಪಂಚಾಯಿತಿಯು ನಿಷೇಧದ ಫಲಕವನ್ನು ಅಳವಡಿಸಿತ್ತು. ಈ ಸಮಯದಲ್ಲಿ ಪಂಚಾಯಿತಿ ಸಮಿತಿ ಮಾಜಿ ಸಭಾಪತಿ ಮಹೇಶ ಪಾಟೀಲ, ಉಪ ಸರಪಂಚ ಸ್ವಾತಿ ಕದಂ, ಸಂದೀಪ ಕಾಂಬಳೆ, ಸಂಜಯ ಜಿಂದೆ, ಅತುಲ್ ಕಾಂಬಳೆ, ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹೆಚ್ಚಿನ ಮಾಹಿತಿ ಪಡೆದಿರುವಾಗ, ತಲಾಟಿ ರಾಹತ ಶೇಖ ವಿರುದ್ಧ ಇದುವರೆಗೂ ಅಪರಾಧ ದಾಖಲಿಸಲಾಗಿಲ್ಲವೆಂದು ತಿಳಿದುಬಂದಿದೆ.