ನಾಸಿಕ್‌ನಲ್ಲಿ ಹಿಂದೂಗಳ ಮೆರವಣಿಗೆ ಮೇಲೆ ಮುಸಲ್ಮಾನರಿಂದ ಕಲ್ಲು ತೂರಾಟ ಮತ್ತು ಹಿಂಸಾಚಾರ

  • ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಪ್ರತಿಭಟಿಸಲು ಮೆರವಣಿಗೆಯನ್ನು ಆಯೋಜಿಸಲಾಗಿತ್ತು

  • ಹಿಂದೂಗಳು ಮತ್ತು ಪೊಲೀಸರಿಗೆ ಗಾಯ!

  • ಗಲಭೆ ಪೂರ್ವ ನಿಯೋಜಿತ !

  • ವಾಹನಗಳು ಮತ್ತು ಗಾಜು ಧ್ವಂಸ !

ನಾಸಿಕ – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಗುವ ದೌರ್ಜನ್ಯದ ವಿರುದ್ಧ `ಸಕಲ ಹಿಂದು ಸಮಾಜ’ದ ವತಿಯಿಂದ ಇಲ್ಲಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಹಿಂದೂಗಳ ಮೆರವಣಿಗೆ ಹಾಲಿನ ಮಾರುಕಟ್ಟೆಗೆ ಬಂದಾಗ, ಅಲ್ಲಿ ಮುಸ್ಲಿಮರೊಂದಿಗೆ ಹಿಂದೂಗಳ ವಾಕ್ಸಮರ ನಡೆಯಿತು. ಅಲ್ಲಿ ಮುಸಲ್ಮಾನರು ಘೋಷಣೆ ಕೂಗಿದರು. ತದನಂತರ ಹಿಂದೂಗಳು ಕೂಡ ಘೋಷಣೆ ಕೂಗಿದರು. ತದನಂತರ ಮುಸಲ್ಮಾನರಿಂದ ಆಕಸ್ಮಿಕವಾಗಿ ದೊಡ್ಡ ಪ್ರಮಾಣದಲ್ಲಿ ಕಲ್ಲು ತೂರಾಟ ಪ್ರಾರಂಭವಾಯಿತು. (ಹಿಂದೂಗಳ ಮೆರವಣಿಯಾಗಿರುವುದರಿಂದ ಮುಸಲ್ಮಾನರು ಮೊದಲೇ ಕಲ್ಲುಗಳನ್ನು ಸಂಗ್ರಹಿಸಿಟ್ಟುಕೊಂಡು, ಪೂರ್ವ ನಿಯೋಜಿತ ಗಲಭೆಯನ್ನು ನಡೆಸಿದರು ಎನ್ನುವುದೇ ಇದರಿಂದ ಗಮನಕ್ಕೆ ಬರುತ್ತದೆ ! – ಸಂಪಾದಕರು) ಮುಸ್ಲಿಮರು ನಡೆಸಿದ ಕಲ್ಲು ತೂರಾಟದಲ್ಲಿ ಹಿಂದೂಗಳು ಮತ್ತು ಪೊಲೀಸರು ಗಾಯಗೊಂಡರು.

ನಾಶಿಕನಲ್ಲಿ ಹಳೆ ನಾಶಿಕ, ಸಾಕ್ಷಿ ಗಣೇಶ ಪರಿಸರ, ಮುಖ್ಯ ರಸ್ತೆ ಪರಿಸರ ಮತ್ತು ಪಿಂಪಳ ಚೌಕ ಪರಿಸರ ಸೇರಿದಂತೆ ಇತರ ಪ್ರದೇಶಗಳಲ್ಲಿ ಸಾಯಂಕಾಲ ಕೆಲವು ಗಂಟೆಗಳ ಕಾಲ ಬಹಳ ಬಿಗುವಿನ ವಾತಾವರಣವಿತ್ತು. ಪ್ರತಿಯೊಂದು ಗಲ್ಲಿಯಲ್ಲಿಯೂ 10 ರಿಂದ 20 ಪೊಲೀಸರು ಇದ್ದರು. ಒಟ್ಟು 600 ಪೊಲೀಸರು ಜಮಾಯಿಸಿದ್ದರು. ಈ ಘಟನೆಯ ನಂತರ, ಹಳೆಯ ನಾಶಿಕ ಪ್ರದೇಶದಲ್ಲಿ ಹಿಂದೂ ಸಂಘಟನೆಗಳ ಪದಾಧಿಕಾರಿಗಳು ಜಮಾಯಿಸಿದರು. ಈ ಸಮಯದಲ್ಲಿ ಮುಸಲ್ಮಾನರು ವಾಹನಗಳ ಮೇಲೆ ಕಲ್ಲು ತೂರಾಟ ಮಾಡುತ್ತಾ ವಾಹನಗಳ ಗಾಜುಗಳನ್ನು ಒಡೆದರು.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಪ್ರತಿಭಟಿಸಲು, ಹಿಂದೂ ಸಮಾಜದಿಂದ ಇಲ್ಲಿ ಬಂದ್ ಗೆ ಕರೆ ನೀಡಲಾಗಿತ್ತು. ಹಿಂದೂಗಳು ಅಂಗಡಿಗಳನ್ನು ಮುಚ್ಚಲು ಕರೆ ನೀಡಿದ್ದರು. ಭದ್ರಕಾಳಿ ಪ್ರದೇಶದಲ್ಲಿ ಸಕಲ ಹಿಂದೂ ಸಮಾಜದ ಮೆರವಣಿಗೆಗೆ ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ.

ಆಂದೋಲನದಿಂದಾಗಿ ಯಾರಿಗೆ ಅಸೂಯೆಯುಂಟಾಗುತ್ತದೆ, ಅವರ ಚರ್ಮ ಸುಲಿಯಿರಿ ! – ಆಶಿಶ್ ಶೇಲಾರ, ಭಾಜಪ ನಾಯಕ

ಯಾರೂ ಕಾನೂನು ಸುವ್ಯವಸ್ಥೆಯನ್ನು ಕೈಗೆತ್ತಿಕೊಳ್ಳಬಾರದು. ಕಲ್ಲು ತೂರಾಟ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಿಂದೂಗಳು ಆಂದೋಲನ ನಡೆಸಿದರೆ, ಯಾರಿಗೆ ಅಸೂಯೆಯುಂಟಾಗಿದ್ದರೆ, ಅವರ ಚರ್ಮ ಸುಲಿಯಬೇಕು ಎಂದು ನಾವು ಪೊಲೀಸರಿಗೆ ಹೇಳುತ್ತೇವೆ. ಹಿಂದೂಗಳು ಇಲ್ಲಿ ಮೆರವಣಿಗೆ ನಡೆಸದಿದ್ದರೆ, ಎಲ್ಲಿ ನಡೆಸಬೇಕು ?

ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಕೇವಲ ಹಿಂದೂಗಳದ್ದಲ್ಲ ! – ಶಾಸಕ ನಿತೇಶ್ ರಾಣೆ, ಭಾಜಪ

ಜಿಹಾದಿಗಳು ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ಲ್ಯಾಂಡ್ ಮತ್ತು ಲವ್ ಜಿಹಾದ್, ದೇವತೆಗಳ ವಿಡಂಬನೆ ಇತ್ಯಾದಿಗಳು ನಿರಾತಂಕವಾಗಿ ನಡೆಯುತ್ತಿವೆ. ಒಂದೆಡೆ ಹಿಂದೂಗಳಿಗೆ ಅನ್ಯಾಯ ಮಾಡುವುದು, ಅತಿಕ್ರಮಣ ಮಾಡುವುದು ಮತ್ತು ಹಿಂದೂಗಳು ತಮ್ಮ ಹಕ್ಕುಗಳಿಗಾಗಿ ರಸ್ತೆಗೂ ಇಳಿಯುವಂತಿಲ್ಲವೇ ? ಮಹಾರಾಷ್ಟ್ರದಲ್ಲಿ ಹಿಂದೂ ಸಿದ್ಧಾಂತದ ಸರಕಾರವಿದೆ. ಸ್ವ ರಕ್ಷಣೆಗಾಗಿ ಕ್ರಿಯೆಗೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಕೇವಲ ಹಿಂದೂಗಳದ್ದು ಮಾತ್ರವಲ್ಲ. ಜಿಹಾದಿಗಳು ನಿಯಮಗಳನ್ನು ಪಾಲಿಸುವುದಿಲ್ಲ. ಅವರಿಗೆ ಶರಿಯಾ ಕಾನೂನು ಬೇಕಾಗಿದೆ. ಹಿಂದೂಗಳಿಗೆ ಸಹೋದರತ್ವಭಾವದ ಉಪದೇಶ ನೀಡಲಾಗುತ್ತದೆ. ಆದರೆ ಅವರು ಮಾತ್ರ ನಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಮುಗಿಸುತ್ತಿದ್ದಾರೆ. ಯಾವ ನಿಯಮಗಳು ಹಿಂದೂಗಳಿಗೆ ಅನ್ವಯವಾಗುತ್ತದೆಯೋ, ಅದೇ ಅವರಿಗೂ ಅನ್ವಯವಾಗಬೇಕು ಎಂದು ಭಾಜಪ ಶಾಸಕ ನಿತೇಶ ರಾಣೆಯವರು ಈ ಪ್ರಕರಣದ ಕುರಿತು ಮಾತನಾಡುವಾಗ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ‘ಹಿಂದೂಗಳಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಏನು ಹೇಳುತ್ತೀರಿ? ಎಂದು ‘ಎಬಿಪಿ ಮಾಜಾ’ ಈ ಸುದ್ದಿವಾಹಿನಿ ಪ್ರಶ್ನಿಸಿದಾಗ ಅವರು ಮೇಲಿನಂತೆ ಉತ್ತರ ನೀಡಿದರು. (ಎಲ್ಲಾ ಹಿಂದೂ ನಾಯಕರು ಮತ್ತು ಹಿಂದೂಗಳ ಬೆಂಬಲಕ್ಕೆ ದೃಢವಾಗಿ ನಿಲ್ಲಬೇಕು ! – ಸಂಪಾದಕರು)

‘ಎಬಿಪಿ ಮಾಜಾ’ದಲ್ಲಿ ಸುದ್ದಿವಾಹಿನಿಯಲ್ಲಿ ಪೊಲೀಸರು ಹಿಂದೂಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದು, ಹಿಂದೂಗಳು ಓಡುತ್ತಿರುವ ದೃಶ್ಯಗಳನ್ನು ಕೆಲವು ಸೆಕೆಂಡುಗಳ ಕಾಲ ತೋರಿಸಲಾಗಿತ್ತು. ಇದರಿಂದಲೇ ಹಿಂದೂಗಳು ಗಲಭೆ ನಡೆಸಿದರು, ಎಂದು ಯಾರಿಗಾದರೂ ಅನಿಸಬಹುದು. ಪ್ರತ್ಯಕ್ಷದಲ್ಲಿ ಕಲ್ಲು ತೂರಾಟವನ್ನು ಮುಸಲ್ಮಾನರರು ನಡೆಸಿದ್ದರು.

ಸಂಪಾದಕೀಯ ನಿಲುವು

  • ‘ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಹಿಂದೂ ಬಹುಸಂಖ್ಯಾತವಿರುವ ಭಾರತದಲ್ಲಿಯೂ ಏನೂ ಮಾತನಾಡಬಾರದು ಮತ್ತು ಮಾತನಾಡಿದರೆ ಗಲಭೆ ನಡೆಸುತ್ತೇವೆ’, ಎನ್ನುವ ವೃತ್ತಿಯ ಮತಾಂಧ ಮುಸಲ್ಮಾನರು. ಇಂತಹ ಬಾಂಗ್ಲಾದೇಶಿ ಪ್ರೇಮಿಗಳಿಗೆ ಶಾಶ್ವತವಾಗಿ ಜೈಲಿನಲ್ಲಿಯೇ ಸ್ಥಾನ ನೀಡಬೇಕು !
  • ಇಂತಹ ಮತಾಂಧ ಮುಸಲ್ಮಾನರನ್ನು ಈಗ ಯಾರಾದರೂ ‘ಹಿಂಸಕರು’ ಅಥವಾ ‘ಅಸಹಿಷ್ಣು’ ಎಂದು ಕರೆಯುವುದಿಲ್ಲ ಎನ್ನುವುದನ್ನು ಗಮನಿಸಿ !
  • ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗದ ಪೋಲೀಸರು ಹಿಂದೂಗಳನ್ನು ರಕ್ಷಿಸಲು ಸಾಧ್ಯವೇ? ಆದ್ದರಿಂದ, ಹಿಂದೂಗಳು ಬಿಕ್ಕಟ್ಟಿನ ಸಮಯದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಲಿಯಬೇಕು !