Rokeya Prachi Attacked : ಢಾಕಾದಲ್ಲಿ ಬಾಂಗ್ಲಾದೇಶಿ ಹಿಂದೂ ನಟಿ ರೋಕೆಯಾ ಪ್ರಾಚಿ ಮೇಲೆ ದಾಳಿ !

ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಸಾವನ್ನಪ್ಪಿರುವ ವಿದ್ಯಾರ್ಥಿಗಳಿಗಾಗಿ ಶ್ರದ್ಧಾಂಜಲಿಯ ಕಾರ್ಯಕ್ರಮದ ಆಯೋಜನೆ !

ಢಾಕಾ (ಬಾಂಗ್ಲಾದೇಶ) – ಢಾಕಾದಲ್ಲಿ ಬಾಂಗ್ಲಾದೇಶಿ ನಟಿ ರೋಕೆಯಾ ಪ್ರಾಚಿ ಇವರ ಮೇಲೆ ದಾಳಿ ನಡೆಸಲಾಗಿದೆ. ಅವರು ಬಾಂಗ್ಲಾದೇಶದ ರಾಷ್ಟ್ರಪಿತ ಎಂದು ಗುರುತಿಸಲಾಗುವ ‘ಬಂಗಬಂಧು’ ಇವರ ಢಾಕಾದಲ್ಲಿನ ಐತಿಹಾಸಿಕ ನಿವಾಸಸ್ಥಾನದಲ್ಲಿ ಮೇಣದಬತ್ತಿ ಹಚ್ಚಿ ನಿಷೇಧ ವ್ಯಕ್ತಪಡಿಸುತ್ತಿದ್ದರು. ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಸಾವನ್ನಪ್ಪಿರುವ ವಿದ್ಯಾರ್ಥಿಗಳಿಗಾಗಿ ಶ್ರದ್ಧಾಂಜಲಿಯ ಕಾರ್ಯಕ್ರಮ ಆಯೋಜಿಸಿ ಮೌನ ಪ್ರತಿಭಟನೆಯ ಸಮಯದಲ್ಲಿ ೩೦ – ೪೦ ಜನರು ಅಲ್ಲಿಗೆ ಬಂದು ಅಲ್ಲಿ ನೆರೆದಿದ್ದವರ ಮೇಲೆ ದಾಳಿ ನಡೆಸಿದರು. ಈ ಪ್ರತಿಭಟನೆಯ ಆಯೋಜನೆ ಪ್ರಾಚೀ ಅವರು ಸ್ವತಃ ಮಾಡಿದ್ದರು. ಈ ಘಟನೆ ಆಗಸ್ಟ್ ೧೪ ರಂದು ರಾತ್ರಿ ನಡೆದಿದೆ. ಭಾರತದ ಪ್ರಸಾರ ಮಾಧ್ಯಮಗಳಿಗೆ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ರೋಕೆಯಾ ಪ್ರಾಚಿ ಇವರು ಮಾಹಿತಿ ನೀಡುವಾಗ, ದಾಳಿಕೋರರು ನನಗಾಗಿಯೇ ಬಂದಿದ್ದರು. ನನ್ನನ್ನು ಕೊಲ್ಲಲು ಬಂದಿದ್ದರು. ನಾನು ಮೊದಲು ಆವಾಮಿ ಲೀಗ್ ನ ಸದಸ್ಯೆ ಆಗಿದ್ದೆ. ಆದ್ದರಿಂದ ಅವರು ನನ್ನ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಿದರು.

ಆವಾಮಿ ಲೀಗ್ ಪಕ್ಷದ ಕಾರ್ಯಕರ್ತರ ಮೇಲೆ ಕೂಡ ದಾಳಿ !

ಆಗಸ್ಟ್ ೧೭ ರಂದು ಬೆಳಿಗ್ಗೆ ಢಾಕಾದಲ್ಲಿನ ೩೨ ಧಾನಮಂಡಿ ಮಾರ್ಗದಲ್ಲಿನ ಆವಾಮಿ ಲೀಗ್ ಕಾರ್ಯಕರ್ತರಿಗೆ ಥಳಿಸಲಾಯಿತು. ಅವರಿಗೆ ಶ್ರದ್ಧಾಂಜಲಿ ನೀಡುವುದಕ್ಕಾಗಿ ಅವರು ಬಂಗಬಂಧು ಶೇಖ ಮುಜಿಬೂರ್ ರಹಮಾನ್ ಇವರ ನಿವಾಸಸ್ಥಳಕ್ಕೆ ಹೋಗುತ್ತಿದ್ದರು. ಈ ಎಲ್ಲಾ ದಾಳಿಗಳ ಹಿಂದೆ ವಿರೋಧ ಪಕ್ಷ ಬಿ.ಎನ್‌.ಪಿ., ಜಮಾತ್ ಎ ಇಸ್ಲಾಮಿ ಹಾಗೂ ಇತರ ಅನೇಕ ವಿದ್ಯಾರ್ಥಿ ಸಂಘಟನೆಗಳು ಇರುವುದಾಗಿ ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಅಭಿವ್ಯಕ್ತಿ ಸ್ವಾತಂತ್ರ್ಯದ ಜಯಕಾರ ಮಾಡುವ ಹಿಂದುಗಳನ್ನು ದ್ವೇಷಿಸುವ ಭಾರತೀಯ ಚಿತ್ರರಂಗದವರು ಈಗ ಚಕಾರವೂ ಎತ್ತುವುದಿಲ್ಲ ಎಂಬುದು ಗಮನದಲ್ಲಿಟ್ಟುಕೊಳ್ಳಿ !