ಕನ್ನೌಜ್ (ಉತ್ತರ ಪ್ರದೇಶ) – ಇಲ್ಲಿನ ಸಮಾಜವಾದಿ ಪಕ್ಷದ ನಾಯಕ ನವಾಬ್‌ಸಿಂಗ್ ಯಾದವ್ (50 ವರ್ಷ)ನನ್ನು ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ 15 ವರ್ಷದ ಹುಡುಗಿಯು ತನ್ನ ಚಿಕ್ಕಮ್ಮನೊಂದಿಗೆ ಯಾದವ ನಡೆಸುತ್ತಿದ್ದ ಕಾಲೇಜಿನಲ್ಲಿ ನೌಕರಿಯನ್ನು ಕೇಳಲು ಹೋಗಿದ್ದಳು. ಚಿಕ್ಕಮ್ಮ ಶೌಚಾಲಯಕ್ಕೆ ಹೋದಾಗ ಯಾದವ ಅಪ್ರಾಪ್ತ ಹುಡುಗಿಯ ಬಟ್ಟೆಗಳನ್ನು ಬಲವಂತವಾಗಿ ತೆಗೆದನು ಮತ್ತು ಅವಳ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದನು.
ಅಪ್ರಾಪ್ತ ಹುಡುಗಿಗೆ ನೌಕರಿ ಕೊಡುವ ಹೆಸರಿನಲ್ಲಿ ಕರೆಸಿದನು !
ಪೊಲೀಸರು ಮಾತನಾಡಿ, ಯಾದವ ನೌಕರಿ ನೀಡುವ ಹೆಸರಿನಡಿಯಲ್ಲಿ ಅಪ್ರಾಪ್ತ ಹುಡುಗಿಯನ್ನು ಮತ್ತು ಅವಳ ಚಿಕ್ಕಮ್ಮನನ್ನು ಕಾಲೇಜಿಗೆ ಕರೆಸಿದನು. ತಡರಾತ್ರಿಯವರೆಗೆ ಇಬ್ಬರನ್ನೂ ಕಾಲೇಜಿನಲ್ಲಿ ಕುಳ್ಳಿರಿಸಿಕೊಂಡನು. ಕಾಲೇಜಿನಲ್ಲಿಯೇ ಅವನು ಹುಡುಗಿಯ ಮೇಲೆ ಲೈಂಗಿಕ ಅತ್ಯಾಚಾರ ಮಾಡಲು ಪ್ರಯತ್ನಿಸಿದನು. ಅಷ್ಟರಲ್ಲಿ ಹೊರಗೆ ಹೋಗಿದ್ದ ಚಿಕ್ಕಮ್ಮ ಕೋಣೆಯೊಳಗೆ ಬಂದಳು. ಚಿಕ್ಕಮ್ಮ ತಿಳಿಸಿದಂತೆ ಅಪ್ರಾಪ್ತ ಹುಡುಗಿಯು 112 ಮೇಲೆ ಪೊಲೀಸರನ್ನು ಸಂಪರ್ಕಿಸಿದಳು. ಪೊಲೀಸರು ಕಾಲೇಜಿಗೆ ಧಾವಿಸಿ, ಆರೋಪಿಯನ್ನು ಆಕ್ಷೇಪಾರ್ಹ ಸ್ಥಿತಿಯಲ್ಲೇ ಬಂಧಿಸಿದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಪೊಲೀಸರು ಅವನನ್ನು ಜೈಲಿಗೆ ಕಳುಹಿಸಿದ್ದಾರೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಲೋಕಸಭಾ ಚುನಾವಣೆ ಸಮಯದಲ್ಲಿ ಯಾದವ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಖಿಲೇಶ ಯಾದವ ಅವರೊಂದಿಗೆ ಸಭಾಂಗಣದ ಮಂಚ್ ಮೇಲೆ ಛಾಯಾಚಿತ್ರಗಳು ಬಹಿರಂಗವಾಗಿವೆ. (ಇದರಿಂದ ಯಾದವರ ಬಿಡುಗಡೆಗಾಗಿ ರಾಜಕೀಯ ಹಸ್ತಕ್ಷೇಪಗಳಾದರೆ ಆಶ್ಚರ್ಯವೇನಿಲ್ಲ ! – ಸಂಪಾದಕರು)
ಸಂಪಾದಕೀಯ ನಿಲುವುಕಾಮುಕ ಮುಖಂಡರಿಂದ ತುಂಬಿರುವ ಸಮಾಜವಾದಿ ಪಕ್ಷ ! ಈ ಮುಖಂಡನ ಮೇಲೆ ಪಕ್ಷದ ಹಿರಿಯ ನಾಯಕರು ಯಾವ ಕ್ರಮ ಕೈಗೊಳ್ಳುತ್ತಾರೆ ? |