‘ಭಾರತೀಯ ಸೇನೆಗೂ ಮತ್ತು ಭಯೋತ್ಪಾದಕರಿಗೂ ನಂಟಿದೆಯಂತೆ ! – ಫಾರೂಕ್ ಅಬ್ದುಲ್ಲ

ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ ಇವರ ಖೇದಕರ ಹೇಳಿಕೆ !

ಶ್ರೀನಗರ – ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ ಇವರು ಭಾರತೀಯ ಸೇನೆಯ ಬಗ್ಗೆ ನೀಡಿರುವ ಖೇದಕರ ಹೇಳಿಕೆಯಿಂದ ಹೊಸ ವಿವಾದ ಸೃಷ್ಟಿಯಾಗಿದೆ. ದೇಶದ ಗಡಿಯಲ್ಲಿ ನೇಮಕಗೊಂಡಿರುವ ಭದ್ರತಾ ಪಡೆ ಮತ್ತು ಭಯೋತ್ಪಾದಕರಲ್ಲಿ ಒಳಸಂಚು ಇರುವುದಾಗಿ ಫಾರೂಕ್ ಅಬ್ದುಲ್ಲ ಗಂಭೀರ ಆರೋಪ ಮಾಡಿದ್ದಾರೆ. ಅವರ ಈ ಹೇಳಿಕೆಯಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ದೇಶದ ಗಡಿಯಲ್ಲಿನ ಭದ್ರತಾ ಪಡೆಯ ಯೋಧರ ನೇಮಕಾತಿ ಇರುವಾಗ ಕೂಡ ನುಸುಳುವಿಕೆ ಹೇಗೆ ನಡೆಯುತ್ತದೆ ? ಎಂದು ಫಾರೂಕ್ ಅಬ್ದುಲ್ಲ ಪ್ರಶ್ನೆ ಕೇಳಿದ್ದಾರೆ. ಗಡಿಯಲ್ಲಿ ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆ ಕೂಡ ನಡೆಯುತ್ತದೆ. ಸೇನೆ ಮತ್ತು ಭಯೋತ್ಪಾದಕರಲ್ಲಿ ಒಳಸಂಚು ಇದೆ, ಎಂದು ಫಾರೂಕ್ ಅಬ್ದುಲ್ಲಾ ಇವರು ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿನ ಕಿಶ್ತವಾಡ ಜಿಲ್ಲೆಯಲ್ಲಿ ಫಾರೂಕ್ ಅಬ್ದುಲ್ಲ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಫಾರೂಕ್ ಅಬ್ದುಲ್ಲಾ ಇವರು, ನೂರಾರು ಸಂಖ್ಯೆಯಲ್ಲಿ ಭಯೋತ್ಪಾದಕರು ದೇಶದಲ್ಲಿ ಹೇಗೆ ಪ್ರವೇಶಿಸುತ್ತಾರೆ ? ಇದರ ಉತ್ತರ ದೊರೆಯಬೇಕು. (ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರೇಮಿಗಳ ಸಂಖ್ಯೆ ಕಡಿಮೆ ಏನೂ ಇಲ್ಲ. ಆದ್ದರಿಂದ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುವುದು ಪಾಕಿಸ್ತಾನ ಪೋಷಿತ ಭಯೋತ್ಪಾದಕರಿಗೆ ಸುಲಭವಾಗುತ್ತದೆ, ಇದರ ಅನೇಕ ಉದಾಹರಣೆಗಳು ಇವೆ ! – ಸಂಪಾದಕರು) ಇದರ ಬಗ್ಗೆ ಯಾರಿಗಾದರೂ ಜವಾಬ್ದಾರಿ ನಿಶ್ಚಿತಗೊಳಿಸಬೇಕು. ಗಡಿ ಇದು ಕೇಂದ್ರ ಸರಕಾರದ ವಿಷಯವಾಗಿದೆ ಮತ್ತು ದೇಶದ ಗೃಹ ಸಚಿವರು ಮತ್ತು ರಕ್ಷಣಾ ಸಚಿವರು ಇದರ ಸಂದರ್ಭದಲ್ಲಿ ಮಾತನಾಡಬೇಕು ಎಂದು ಹೇಳಿದರು.

ಫಾರೂಕ್ ಅಬ್ದುಲ್ಲಾ ಇವರ ಆರೋಪ ದುರದೃಷ್ಟಕರ ! – ಗುಲಾಂ ನಬಿ ಆಜಾದ್

ಫಾರೂಕ್ ಅಬ್ದುಲ್ಲಾ ಇವರ ಖೇದಕರ ಹೇಳಿಕೆಯ ಬಗ್ಗೆ ಗುಲಾಮ್ ನಬಿ ಆಜಾದ್ ಇವರ ನೇತೃತ್ವದ ‘ಡೆಮೊಕ್ರಟಿಕ್ ಪ್ರೋಗ್ರೆಸ್ಸಿವ್ ಆಜಾದ್ ಪಾರ್ಟಿ’ (ಡಿಪಿಎಪಿ ಇಂದ) ಆಕ್ಷೇಪ ವ್ಯಕ್ತಪಡಿಸಲಾಗಿದೆ. ಫಾರೂಕ್ ಅಬ್ದುಲ್ಲಾ ಇವರು ಭಾರತೀಯ ಸೇನೆಯ ಶೌರ್ಯದ ಮೇಲೆ ಪ್ರಶ್ನ ಚಿನ್ಹೆ ಉಪಸ್ಥಿತಗೊಳಿಸಿದ್ದಾರೆ, ಇದು ದುರದೃಷ್ಟಕರವಾಗಿದೆ ಎಂದು ಡಿಪಿಎಪಿ ಹೇಳಿದೆ. ಫಾರೂಕ್ ಅಬ್ದುಲ್ಲಾ ಇವರ ಈ ಹೇಳಿಕೆ ಎಂದರೆ ದೇಶಕ್ಕಾಗಿ ಬಲಿದಾನ ನೀಡುವ ಭಾರತೀಯ ಸೇನೆಯ ಶೌರ್ಯದ ಮೇಲೆ ಪ್ರಶ್ನ ಚಿನ್ಹೆ ಉಪಸ್ಥಿತಗೊಳಿಸುವ ಹಾಗೆ ಇದೆ, ಎಂದು ಡಿಪಿಎಪಿಯ ವಕ್ತಾರರು ಶ್ರೀ ಅಶ್ವಿನಿ ಹಾಂಡಾ ಇವರು ಹೇಳಿದರು.

ಸಂಪಾದಕೀಯ ನಿಲುವು

ಭಾರತೀಯ ಸೇನೆಯ ಕುರಿತು ನಿರಾಧಾರ ಆರೋಪ ಮಾಡಿ ಅವರ ಮನೋಸ್ಥೈರ್ಯ ಹಾಳು ಮಾಡುವ ರಾಜಕಾರಣಿಗಳ ವಿರುದ್ಧ ದೇಶದ್ರೋಹದ ಮೊಕದ್ದಮೆ ನಡೆಸಿ ಅವರನ್ನು ಜೈಲಿಗೆ ಅಟ್ಟುವುದಕ್ಕೆ ರಾಷ್ಟ್ರ ಪ್ರೇಮಿಗಳು ಆಗ್ರಹಿಸಿದರೆ ಆಶ್ಚರ್ಯ ಅನ್ನಿಸಲಾಗದು !