ಇನ್ನುಮುಂದೆ ವಿದ್ಯಾರ್ಥಿಗಳು ‘ಗುಡ್ ಮಾರ್ನಿಂಗ್’ ಬದಲು ‘ಜೈ ಹಿಂದ್’ ಎಂದು ಹೇಳಬೇಕು !

ಹರಿಯಾಣ: ಬಿಜೆಪಿ ಸರಕಾರದಿಂದ ಸೂಚನೆ

ಚಂಡೀಗಢ – ಹರಿಯಾಣ ಸರಕಾರಿ ರಾಜ್ಯದ ಶಾಲೆಗಳಲ್ಲಿ ಆಗಸ್ಟ್ 15 ರಿಂದ ‘ಗುಡ್ ಮಾರ್ನಿಂಗ್’ ಎಂದು ಹೇಳಿ ಶುಭಾಶಯ ಹೇಳುವ ಇಂಗ್ಲಿಷ್ ಪದ್ಧತಿಯನ್ನು ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಬದಲಾಗಿ ವಿದ್ಯಾರ್ಥಿಗಳು ಪರಸ್ಪರ ಅಥವಾ ಶಿಕ್ಷಕರಿಗೆ ಶುಭಾಶಯ ಹೇಳುವಾಗ ‘ಜೈ ಹಿಂದ್’ ಎಂದು ಹೇಳಬೇಕು ಎಂದು ಸರಕಾರಿ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ರಾಷ್ಟ್ರಾಭಿಮಾನ ಮೂಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ದೇಶದ ರಾಷ್ಟ್ರೀಯ ಏಕತೆ ಹಾಗೂ ದೇಶದ ಜ್ವಲಂತ ಇತಿಹಾಸದ ಬಗ್ಗೆ ಅಭಿಮಾನ ಮೂಡಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

1. ಈ ಆದೇಶಗಳ ಪತ್ರಗಳನ್ನು ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ, ವಿಭಾಗೀಯ ಶಿಕ್ಷಣಾಧಿಕಾರಿಗಳಿಗೆ, ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಕಳುಹಿಸಲಾಗಿದೆ; ಆದರೆ ಈ ಆದೇಶಗಳನ್ನು ಪಾಲಿಸುವಂತೆ ಶಾಲೆಗಳನ್ನು ಕಡ್ಡಾಯಗೊಳಿಸಲಾಗಿಲ್ಲ.

2.ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಮೊದಲ ಬಾರಿಗೆ ಶುಭಾಶಯಕ್ಕಾಗಿ ‘ಜೈ ಹಿಂದ್’ ಎಂದು ಹೇಳಲು ಪ್ರಾರಂಭಿಸಿದರು ಎಂದು ನಂಬಲಾಗಿದೆ. ಅದೇ ಪದ್ಧತಿಯನ್ನು ಸ್ವಾತಂತ್ರ್ಯದ ನಂತರ ಭಾರತೀಯ ಸೇನೆಯು ಅಳವಡಿಸಿಕೊಂಡಿತು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

3. ‘ಜೈ ಹಿಂದ್’ ಪದಗಳು ಪ್ರಾದೇಶಿಕ, ಭಾಷಾ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮಸುಕುಗೊಳಿಸುತ್ತವೆ ಮತ್ತು ವಿವಿಧ ಹಿನ್ನೆಲೆಯ ವಿದ್ಯಾರ್ಥಿಗಳ ನಡುವೆ ಏಕತೆಯನ್ನು ಬೆಳೆಸುತ್ತವೆ. ಇದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತಿನ ಜೊತೆಗೆ ಏಕತೆಯ ಭಾವನೆ ಮೂಡುತ್ತದೆ ಎಂದು ಸೊತ್ತೋಲೆಯಲ್ಲಿ ತಿಳಿಸಲಾಗಿದೆ.

ಸಂಪಾದಕೀಯ ನಿಲುವು

ಬೇರೆ ರಾಜ್ಯಗಳು ಕೂಡ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕು !