ಯಾಂಗೋನ್ (ಮ್ಯಾನ್ಮಾರ್) – ಕಳೆದ ಕೆಲವು ವರ್ಷಗಳಿಂದ ಮ್ಯಾನ್ಮಾರ್ ನಲ್ಲಿ ಅರಾಜಕತೆ ನಿರ್ಮಾಣವಾಗಿದೆ. ಅಲ್ಲಿನ ರೋಹಿಂಗ್ಯಾ ಮುಸಲ್ಮಾನರು ಈ ಮೊದಲೇ ದೇಶ ಬಿಟ್ಟು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದಾರೆ. ಪ್ರಸ್ತುತ ಬಾಂಗ್ಲಾದೇಶದಲ್ಲಿ 9 ಲಕ್ಷ ರೋಹಿಂಗ್ಯಾ ನಿರಾಶ್ರಿತ ಮುಸಲ್ಮಾನರಿದ್ದಾರೆ. ಇದೀಗ ಮತ್ತೆ ಬಾಂಗ್ಲಾದೇಶದ ಗಡಿಯಲ್ಲಿ ಪಲಾಯನಗೈಯುತ್ತಿರುವ ದೊಡ್ಡ ಸಂಖ್ಯೆಯ ರೋಹಿಂಗ್ಯಾಗಳ ಮೇಲೆ ಡ್ರೋನ್ ಮೂಲಕ ದಾಳಿ ನಡೆದಿದೆ. ಇದರಲ್ಲಿ 200ಕ್ಕೂ ಹೆಚ್ಚು ರೋಹಿಂಗ್ಯಾಗಳು ಸಾವನ್ನಪ್ಪಿದ್ದಾರೆ. ಕಳೆದ ವಾರ ಆಗಸ್ಟ್ 5 ರಂದು ಈ ದಾಳಿ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಇಲ್ಲಿನ ಸೇನಾಪಡೆ ಹಾಗೂ ಮ್ಯಾನ್ಮಾರ್ ಸೇನೆ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದಾರೆ.
At least 200 Rohigyas killed in “Unknown” drone strike, when they were fleeing Rakhine in Myanmar to Bangladesh. #WorldNews
Image credit:@WorldNewsApp1 pic.twitter.com/kdn6CFSzpF— Sanatan Prabhat (@SanatanPrabhat) August 11, 2024