ರೈಲು ಪ್ರಯಾಣಿಕನಿಗೆ ಸಸ್ಯಹಾರದ ಬದಲು ಮಾಂಸಹಾರ ನೀಡಿದ ಘಟನೆ !

  • ಮುಸ್ಲಿಂ ಅಂಗಡಿಯಿಂದ ಮಾಂಸಾಹಾರ ಪೂರೈಕೆ ಬಹಿರಂಗ

  • ರೇಲ್ವೆ ಇಲಾಖೆಯಿಂದ ಕ್ರಮ ಕೈಗೊಳ್ಳುವ ಬದಲು ಎಚ್ಚರಿಕೆ ನೀಡಿತು

ನವ ದೆಹಲಿ – ನವ ದೆಹಲಿಯ ರೈಲು ಜಂಕ್ಷನ್ ನಲ್ಲಿ ನಿಂತಿದ್ದ ರೈಲಿನಲ್ಲಿನ ಓರ್ವ ಹಿಂದೂ ಪ್ರಯಾಣಿಕರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಘಟನೆ ಬೆಳಕಿಗೆ ಬಂದಿದೆ. ಪಲ್ಲವ ಸಿಂಹ ಎಂಬ ಪ್ರಯಾಣಿಕರು ಶ್ರಾವಣ ಮಾಸ ನಡೆಯುತ್ತಿರುವುದರಿಂದ ಸಸ್ಯಹಾರಿ ಸ್ಪೆಷಲ್ ಥಾಲಿಗೆ ಆನ್ಲೈನ್ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ‘ಸಸ್ಯಹಾರಿ ಸ್ಪೆಷಲ್ ಥಾಲಿ’ ಎಂದು ಸ್ಟಿಕ್ಕರ್ ಅಂಟಿಸಿರುವ ಡಬ್ಬಿಯಲ್ಲಿ ಮಾಂಸಾಹಾರ ನೀಡಲಾಗಿತ್ತು. ಅದರ ನಂತರ ಈ ಪ್ರಯಾಣಿಕರು ರೈಲ್ವೆ ಬಳಿ ಆನ್ಲೈನ್ ದೂರು ದಾಖಲಿಸಿದರು.

ಈ ಪ್ರಕರಣದಲ್ಲಿ ಉಪಹಾರ ಗೃಹದ ಮಾಲೀಕನ ಹೆಸರು ಫೈಜ ಎಂದಾಗಿದ್ದೂ ಆಹಾರ ಪೂರೈಸಿರುವ ವ್ಯಕ್ತಿಯ ಹೆಸರು ಶಹಬುದ್ದೀನ್ ಕುರೇಶಿ ಆಗಿದೆ. ‘ರೈಲು ಇಲಾಖೆಯಿಂದ ಇಬ್ಬರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಅವರಿಗೆ ಕೇವಲ ಎಚ್ಚರಿಕೆ ನೀಡಲಾಗಿದೆ ಎಂದು ಈ ಪ್ರಯಾಣಿಕರು ಹೇಳಿದರು.

ಭಾರತೀಯ ರೈಲ್ವೆಯು, ಆಹಾರ ಪದಾರ್ಥದಲ್ಲಿನ ವ್ಯತ್ಯಾಸದಿಂದಾಗಿ ಸಂಪೂರ್ಣ ಹಣ ಹಿಂತಿರುಗಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು ಮಾರಾಟಗಾರನಿಗೆ ಆಹಾರ ಪದಾರ್ಥ ಪ್ಯಾಕಿಂಗ್ ಮಾಡುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕೆಂದು ಮತ್ತು ಭವಿಷ್ಯದಲ್ಲಿ ಈ ರೀತಿಯ ದೂರು ಬರಬಾರದು ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.

ಹಿಂದುಗಳಿಗೆ ಸಸ್ಯಹಾರದ ಬದಲು ಮಾಂಸಾಹಾರ ನೀಡಿರುವ ಕೆಲವು ಘಟನೆಗಳು

ಅ. ಆಗಸ್ಟ್ ೪, ೨೦೨೪ ರಂದು ಹರಿದ್ವಾರದಿಂದ ಕಾಂಧಲಾ ಮಾರ್ಗವಾಗಿ ಗಂಗಾಜಲ ತೆಗೆದುಕೊಂಡು ದೆಹಲಿಗೆ ಹಿಂತಿರುಗುವ ಪ್ರಯಾಣಿಕರಿಗೆ ಒಂದು ಉಪಹಾರ ಗೃಹದಲ್ಲಿ ಸಸ್ಯಹಾರದ ಬದಲು ಮಾಂಸಹಾರಿ ಬಿರಿಯಾನಿ ನೀಡಲಾಗಿತ್ತು. ಈ ಪ್ರಕರಣದಲ್ಲಿ ತನ್ವೀರ ಎಂಬ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿತ್ತು.

ಆ. ಏಪ್ರಿಲ್ ೨೦೨೪ ರಲ್ಲಿ ಗುಜರಾತ್ ಪೊಲೀಸರು ವಡೋದರಾದಲ್ಲಿನ ಸಮೋಸಾ ಅಂಗಡಿಯ ‘ಹುಸೇನಿ ಸಮೋಸಾ ಸೆಂಟರ್ ಮೇಲೆ ದಾಳಿ ನಡೆಸಿದ್ದು ಮತ್ತು ಗೋಮಾಂಸ ಕೂಡಿರುವ ಸಮೋಸಾ ಮಾರಾಟ ಮಾಡಿರುವುದರಿಂದ ಸೆಂಟರ್ ನ ಮಾಲೀಕ ಯೂಸುಫ್ ಮತ್ತು ನಯೀಮ್ ಶೇಖ್ ಇವರ ಜೊತೆಗೆ ಆರು ಜನರನ್ನು ಬಂಧಿಸಲಾಗಿತ್ತು.

ಇ. ಪುಣೆಯ ಟಾಟಾ ಮೋಟರ್ ಕ್ಯಾಂಟೀನ್ ನಲ್ಲಿ ನಿರೋಧ, ಕಲ್ಲು ಮತ್ತು ತಂಬಾಕು ತುಂಬಿರುವ ಸಮೋಸಾ ಪತ್ತೆಯಾಗಿದ್ದವು. ಈ ಪ್ರಕರಣದಲ್ಲಿ ಪೊಲೀಸರು ರಹಿಮ ಶೇಖ್, ಆಝರ್ ಶೇಖ್, ಮಜಾರ್ ಶೇಖ್, ಅಝರ್ ಶೇಖ್ ಮತ್ತು ವಿಕೀ ಶೇಖ್ ಇವರ ವಿರುದ್ಧ ದೂರು ದಾಖಲಿಸಲಾಗಿತ್ತು.

ಈ. ಜನವರಿ ೨೦೨೪ ರಲ್ಲಿ ಜೈನ ಸಮಾಜದ ಓರ್ವ ಸಸ್ಯಹಾರಿ ಪ್ರಯಾಣಿಕನಿಗೆ ಏರ್ ಇಂಡಿಯದ ವಿಮಾನದಲ್ಲಿ ಸಸ್ಯಹಾರಿ ಆಹಾರದಲ್ಲಿ ಚಿಕನ್ ಪೀಸಗಳು ನೀಡಲಾಗಿದ್ದವು. ಆಕ್ರೋಶಗೊಂಡಿರುವ ಮಹಿಳೆಯು ಸಿಬ್ಬಂದಿಗೆ ದೂರು ನೀಡಿದಳು; ಆದರೆ ಅದರ ಕುರಿತು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಉ. ಜುಲೈ ೨೦೨೨ ರಲ್ಲಿ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕಾಲೇಜಿನ ಕ್ಯಾಂಟೀನ್ ನಲ್ಲಿ ಓರ್ವ ಸಸ್ಯಹಾರಿ ವಿದ್ಯಾರ್ಥಿಗೆ ಮಾಂಸಾಹಾರಿ ಸ್ಯಾಂಡ್ ವಿಚ್ ನೀಡಲಾಗಿತ್ತು. ಅವನು ಕ್ಯಾಂಟೀನ್ ಸಿಬ್ಬಂದಿಯ ಬಳಿ ದೂರು ನೀಡಿದಾಗ ವಿದ್ಯಾರ್ಥಿಗೆ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದರು.

ಊ. ಡಿಸೆಂಬರ್ ೨೦೧೮ ರಲ್ಲಿ ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದ ಮಾಂಸಾಹಾರಿ ಪದಾರ್ಥ ತಯಾರಿಸಲು ಉಪಯೋಗಿಸುವ ಎಣ್ಣೆಯಲ್ಲಿ ಬೇಯಿಸಿರುವ ಸಸ್ಯಹಾರಿ ಆಹಾರ ನೀಡಲಾಗಿರುವುದರ ಬಗ್ಗೆ ಆರೋಪಿಸಲಾಗಿತ್ತು.

ಸಂಪಾದಕೀಯ ನಿಲುವು

ರೈಲಿನಲ್ಲಿ ಈ ರೀತಿಯ ಘಟನೆ ನಡೆದ ನಂತರ ರೈಲ್ವೆ ಕ್ರಮ ಏಕೆ ಕೈಗೊಳ್ಳುವುದಿಲ್ಲ ? ರೈಲಿನ ಅಧಿಕಾರಿಗಳು ಆರೋಪಿಗಳ ಜೊತೆಗೆ ಕೈಜೋಡಿಸಿದ್ದಾರೆಯೇ ?