ರಷ್ಯಾದ ಸೇನೆಯಲ್ಲಿ ಒಟ್ಟು 91 ಭಾರತೀಯರ ಸೇರ್ಪಡೆ : ಅವರಲ್ಲಿ 8 ಜನರ ಸಾವು

ನವದೆಹಲಿ – ರಷ್ಯಾ ಸೇನೆಯಲ್ಲಿ ಒಟ್ಟು 91 ಭಾರತೀಯರು ನೇಮಕಗೊಂಡಿದ್ದು, ಅದರಲ್ಲಿ 8 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, 14 ಜನರನ್ನು ರಷ್ಯಾ ವಾಪಸ್ ಕಳುಹಿಸಿದೆ. ಅವರಲ್ಲಿ ಕೆಲವರು ಭಾರತ ತಲುಪಿದ್ದರೆ, ಇನ್ನು ಕೆಲವು ಜನರು ಆಗಮಿಸುವ ಹಂತದಲ್ಲಿದೆ. 69 ಭಾರತೀಯರ ಬಿಡುಗಡೆಗಾಗಿ ಸರಕಾರ ಇನ್ನೂ ಕಾಯುತ್ತಿದೆ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಲೋಕಸಭೆಯಲ್ಲಿ ಎಂ.ಐ.ಎಂ. ಸಂಸದ ಅಸಾದುದ್ದೀನ್ ಓವೈಸಿ ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.
1. ಓವೈಸಿ ಯವರು, ಭಾರತೀಯರನ್ನು ಮೋಸಗೊಳಿಸಿ ರಷ್ಯಾಕ್ಕೆ ಕಳುಹಿಸಿದ ಆರೋಪಿಗಳ ವಿರುದ್ಧ ಏನು ಕ್ರಮ ಕೈಗೊಳ್ಳಲಾಗುತ್ತಿದೆ ? ರಷ್ಯಾದ ಸೇನೆ ಭಾರತೀಯರನ್ನು ವಾಪಸ್ ಕಳುಹಿಸದಿದ್ದರೆ ಭಾರತ ಈ ವಿಷಯವನ್ನು ವಿರೋಧಿಸುತ್ತದೆಯೇ? ಎಂದು ಕೇಳಿದ್ದರು.
2. ಈ ಪ್ರಶ್ನೆಗಳಿಗೆ ಉತ್ತರಿಸುತ್ತಾ ಡಾ. ಜೈಶಂಕರ್ ಇವರು, ಹಲವಾರು ಪ್ರಕರಣಗಳಲ್ಲಿ ಭಾರತೀಯ ನಾಗರಿಕರಿಗೆ ರಷ್ಯಾದ ಸೇನೆಗೆ ಸೇರುವಂತೆ ದಾರಿ ತಪ್ಪಿಸಲಾಗಿದೆ ಭಾರತೀಯರನ್ನು ವಿದೇಶಕ್ಕೆ ಕಳುಹಿಸಿದ ಪ್ರಕರಣದಲ್ಲಿ 19 ಆರೋಪಿಗಳ ವಿರುದ್ಧ ಅಪರಾಧ ದಾಖಲಿಸಿದೆ. ಈ ಪ್ರಕರಣದಲ್ಲಿ ಮಾನವ ಕಳ್ಳಸಾಗಾಣಿಕೆಯ ಸಾಕ್ಷ್ಯವೂ ಬೆಳಕಿಗೆ ಬಂದಿದೆ ಎಂದರು.
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬೇಡಿ! : Trump Vs Lula
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದದ ಮಧ್ಯವರ್ತಿಯಾಗಿ ಶ್ರೇಯಸ್ಸು ಪಡೆದ ಪಾಕಿಸ್ತಾನ ! : US Iran Peace Deal
ಐ.ಎಸ್.ಐ.ಗೆ ಸಂಬಂಧಿಸಿದ ಭಯೋತ್ಪಾದಕ ಗುಂಪಿನ ಇನ್ನೂ 5 ಜನರನ್ನು ಬಂಧನ : ISI Terrorist Arrested
ಅಮೆರಿಕ-ಇರಾನ್ ನಡುವೆ ಅಂತಿಮವಾಗಿ ಕದನ ವಿರಾಮ ಒಪ್ಪಂದ! : US-Iran Peace Deal
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ಸಿಗಬೇಕು! – ಫ್ರಾನ್ಸ್