ಆಕ್ರೋಶಿತ ಮಧ್ಯಪ್ರದೇಶ ಹೈಕೋರ್ಟ್ ನ ನ್ಯಾಯಾಧೀಶರಿಂದ ವಕೀಲರಿಗೆ ಛೀಮಾರಿ !
ಭೋಪಾಲ್ (ಮಧ್ಯಪ್ರದೇಶ) – ವಕ್ಫ್ ಬೋರ್ಡ್‌ಗೆ ಸೇರಿದ ಮಧ್ಯಪ್ರದೇಶ ರಾಜ್ಯದಲ್ಲಿನ ಆಸ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಚಾರಣೆಯಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ ಗುರ್ಪಾಲಸಿಂಗ್ ಅಹ್ಲುವಾಲಿಯಾ ಅವರು ವಕ್ಫ್ ಬೋರ್ಡ್‌ನ ವಕೀಲರನ್ನು ಛೀಮಾರಿ ಹಾಕಿದರು. ‘ವಕ್ಫ್ ಬೋರ್ಡ್ ಹೆಸರಿನಲ್ಲಿ ಆಸ್ತಿ ಘೋಷಣೆಯಾಗಿದ್ದು ಹೇಗೆ?’’ಎಂದು ವಕೀಲರನ್ನು ಪ್ರಶ್ನಿಸಿದರು. ಇದಕ್ಕೆ ವಕೀಲರಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಆಗ ನ್ಯಾಯಾಧೀಶರು ಕೋಪಗೊಂಡು, “ನಾಳೆ ಕೆಂಪು ಕೋಟೆ, ತಾಜ ಮಹಲ್ ಸೇರಿದಂತೆ ಇಡೀ ಭಾರತವನ್ನು ವಕ್ಫ್ ಬೋರ್ಡ್‌ನ ಆಸ್ತಿ ಎಂದು ಘೋಷಿಸುತ್ತೀರಿ!” ಎಂದು ಕಿಡಿ ಕಾರಿದರು.
1. ನ್ಯಾಯಮೂರ್ತಿ ಅಹ್ಲುವಾಲಿಯಾ ವಕೀಲರನ್ನು ಪ್ರಶ್ನಿಸುತ್ತಾ, ‘ನಾಳೆ ವಕ್ಫ್ ಬೋರ್ಡ್ ಯಾವುದೇ ಸರಕಾರಿ ಕಚೇರಿಗೆ, ಅದು ವಕ್ಫ್ ಆಸ್ತಿಯಾಗುತ್ತದೆಯೇ ?. ನೀವು ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸುತ್ತೀರಾ ? ಇಡೀ ಭಾರತವನ್ನು ವಕ್ಫ್ ಆಸ್ತಿ ಎಂದು ಘೋಷಿಸಲು ಹೇಗೆ ಸಾಧ್ಯ ಎಂದು ಕೇಳಿದರು’.
2. ‘ವಕ್ಫ್ ಬೋರ್ಡ್‌ಗೆ ಸೇರಿದ ಈ ಆಸ್ತಿ ಐತಿಹಾಸಿಕ ಸ್ಮಾರಕ ಎಂದು ಅಧಿಸೂಚನೆ ಹೊರಡಿಸಲಾಗಿದೆಯೇ ?’ ಇದಕ್ಕೆ ನಿಮ್ಮ ಉತ್ತರ ಏನು ಎಂದೂ ನ್ಯಾಯಾಧೀಶರು ಪ್ರಶ್ನಿಸಿದರು.
3. ಈ ಬಗ್ಗೆ ವಕೀಲರು, ಪ್ರಾಚೀನ ಸ್ಮಾರಕಗಳ ಕಾಯಿದೆಯಡಿ ಆಸ್ತಿಯನ್ನು ಕೇಂದ್ರ ಸರಕಾರದ ಸಂಬಂಧಪಟ್ಟ ಇಲಾಖೆ ರಕ್ಷಿಸಬಹುದು; ಆದರೆ ಮಾಲೀಕತ್ವ ವಕ್ಫ್ ಮಂಡಳಿಯಲ್ಲೇ ಇರುತ್ತದೆ. ಈ ಆಸ್ತಿಯನ್ನು 1989 ರಲ್ಲಿ ವಕ್ಫ್ ಬೋರ್ಡ್‌ಗೆ ನೀಡಲಾಯಿತು ಎಂದು ಹೇಳಿದರು.
4. ಈ ಕುರಿತು ನ್ಯಾಯಾಧೀಶರು, ‘1989ರಲ್ಲಿ ವಕ್ಫ್ ಬೋರ್ಡ್‌ಗೆ ತನ್ನ ಮಾಲೀಕತ್ವವನ್ನು ಹೇಗೆ ಘೋಷಿಸಿತು? 1989ರ ಅಧಿಸೂಚನೆಗೂ ಮುನ್ನ ಈ ಆಸ್ತಿ ಯಾರ ಬಳಿ ಇತ್ತು ಎಂಬುದು ಯಾರಿಗೂ ತಿಳಿದಿಲ್ಲ. ಯಾರೋ ಹೇಳಿ ವಕ್ಫ್ ಆಸ್ತಿ ಎಂದು ಘೋಷಿಸಿದರು.’ ಎಂದು ಹೇಳಿದರು.
ಸಂಪಾದಕೀಯ ನಿಲುವುಹಿಂದೂಗಳೇ, ಹೈಕೋರ್ಟ ನ ನ್ಯಾಯಾಧೀಶರೊಬ್ಬರು ಇಂತಹ ಗಂಭೀರ ಹೇಳಿಕೆಯನ್ನು ನೀಡುತ್ತಾ ವಕ್ಫ್ ಬೋರ್ಡ್ ನಿಂದ ನಡೆಯುತ್ತಿರುವ ‘ಲ್ಯಾಂಡ್ ಜಿಹಾದ್’ ನ ಭೀಕರತೆಯನ್ನು ಊಹಿಸಿಕೊಳ್ಳಿ ! ನಿಮ್ಮ ಸ್ಥಳೀಯ ಸಂಸದರನ್ನು ಸಂಪರ್ಕಿಸಿ ವಕ್ಫ್ ಕಾಯಿದೆಯನ್ನು ರದ್ದುಗೊಳಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವಂತೆ ಹೇಳಿ ! |