ದೇವಸ್ಥಾನವಿರುವ ಗ್ರಾಮದ ಮೇಲೆಯೂ ತನ್ನದೆಂದು ದಾವೆ !
ನವದೆಹಲಿ – ಕೇಂದ್ರ ಸರಕಾರ ವಕ್ಫ್ ಬೋರ್ಡ್‌ನ ಹಕ್ಕುಗಳ ಮೇಲೆ ನಿರ್ಬಂಧ ಹೇರಲು ನಿಯಮಗಳನ್ನು ರೂಪಿಸುತ್ತಿದೆ. ಶೀಘ್ರದಲ್ಲೇ ವಕ್ಫ್ ಬೋರ್ಡ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು. ಈ ಹೊಸ ಮಸೂದೆಯಲ್ಲಿ ಯಾವುದೇ ಭೂಮಿಯನ್ನು ತನ್ನ ಆಸ್ತಿ ಎಂದು ಘೋಷಿಸುವ ವಕ್ಫ್ ಬೋರ್ಡ್‌ನ ಅಧಿಕಾರದಲ್ಲಿ ಅಂಕುಶವಿಡಲಾಗುವುದು. ಕಳೆದ ಕೆಲವು ವರ್ಷಗಳಲ್ಲಿ ವಕ್ಫ್ ಕಾಯ್ದೆ ದುರುಪಯೋಗ ಪಡಿಸಿಕೊಃಡಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಇಂತಹುದೇ ಒಂದು ಪ್ರಕರಣವು ತಮಿಳುನಾಡಿನಲ್ಲಿ ನಡೆದಿದೆ, ಅಲ್ಲಿ ಗ್ರಾಮವೊಂದರ ಮೇಲೆ ವಕ್ಫ್ ಮಂಡಳಿ ತನ್ನ ದಾವೆ ಮಾಡಿದೆ.
1. ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ತಿರುಚೆಂತುರೈ ಗ್ರಾಮದಲ್ಲಿರುವ 1 ಸಾವಿರ 500 ವರ್ಷಗಳಷ್ಟು ಹಳೆಯದಾದ ಮಾನೆಂದಿಯಾವಲ್ಲಿ ಚಂದ್ರಶೇಖರ ಸ್ವಾಮಿ ದೇವಸ್ಥಾನದ ಭೂಮಿಯ ಮಾಲೀಕತ್ವವನ್ನು ವಕ್ಫ್ ಬೋರ್ಡ್ ತನ್ನದೆಂದು ಹೇಳಿಕೊಂಡಿದೆ. ದೇವಸ್ಥಾನವು ಈ ಪರಿಸರದಲ್ಲಿ 369 ಎಕರೆ ಭೂಮಿಯನ್ನು ಹೊಂದಿದೆ. ಇಸ್ಲಾಂ ಉದಯದ ಮೊದಲು 1 ಸಾವಿರ 400 ವರ್ಷಗಳಾಗಿವೆ.
2. ಈ ದಾವೆಯಿಂದ ರೈತರು ಮತ್ತು ಇತರ ಗ್ರಾಮಸ್ಥರು ಆಶ್ಚರ್ಯಗೊಂಡಿದ್ದಾರೆ.
3. ಗ್ರಾಮದ ರೈತ ರಾಜಗೋಪಾಲ ಅವರು ಮಾತನಾಡಿ ಸೇಲ್ ಡೀಡ್ಸ್ ಇಲಾಖೆಯ ರಿಜಿಸ್ಟ್ರಾರ್ ಅವರು ತಮಿಳುನಾಡು ವಕ್ಫ್ ಬೋರ್ಡ್ ಅವರಿಗೆ 250 ಪುಟಗಳ ಪತ್ರವನ್ನು ಕಳುಹಿಸಿದೆ ಎಂದು ತಿಳಿಸಿದ್ದು, ಅದರಲ್ಲಿ ತಿರುಚೆಂದೂರಾಯಿ ಗ್ರಾಮದ ಜಮೀನು ವಿಷಯದ ವ್ಯವಹಾರವನ್ನು `ನೊ ಒಬ್ಜೆಕ್ಷನ್’ ಪ್ರಮಾಣಪತ್ರದಿಂದಲೇ ಮಾಡಬೇಕು ಎಂದು ಅದರಲ್ಲಿ ಹೇಳಲಾಗಿದೆ ಎಂದು ತಿಳಿಸಿದ್ದಾರೆ.
4. ಇದಲ್ಲದೇ ವಕ್ಫ್ ಬೋರ್ಡ್ ತಮಿಳುನಾಡಿನ 18 ಹಳ್ಳಿಗಳ ಭೂಮಿಯ ಮೇಲೆ ತನ್ನ ಹಕ್ಕು ಸ್ಥಾಪಿಸಿದೆ. 1954ರ ಸರ್ವೆ ಪ್ರಕಾರ ಸರಕಾರ ಅವರಿಗೆ ಈ ಜಮೀನು ನೀಡಿದೆ ಎಂದು ಬೋರ್ಡ್ ನವರು ಹೇಳುತ್ತಿದ್ದಾರೆ.
5. ಹರಿಯಾಣದ ಯಮುನಾನಗರ ಜಿಲ್ಲೆಯ ಜಥಲಾನಾ ಗ್ರಾಮದ ಗುರುದ್ವಾರದ ಭೂಮಿಯನ್ನು ವಕ್ಫಗೆ ವರ್ಗಾಯಿಸಲಾಗಿದೆ.
6. ಗುಜರಾತ್‌ನ ಸೂರತ್ ಮಹಾನಗರ ಪಾಲಿಕೆಯ ಪ್ರಧಾನ ಕಚೇರಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿತ್ತು. ಷಹಜಹಾನ ಬಾದಶಹ ಈ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ತನ್ನ ಪುತ್ರಿಗೆ ದಾನ ಮಾಡಿದ್ದಾನೆ ಎಂದು ಬೋರ್ಡ್ ಹೇಳುತ್ತದೆ.
7. ಸುನ್ನಿ ವಕ್ಫ್ ಬೋರ್ಡ ಅಂತೂ ತಾಜ್ ಮಹಲ ಮೇಲೆಯೇ ದಾವೆ ಮಾಡಿತ್ತು. ಅದೇ ರೀತಿ ಸುನ್ನಿ ವಕ್ಫ್ ಬೋರ್ಡ್ ಆಸ್ತಿಯನ್ನಾಗಿ ಘೋಷಿಸಬೇಕೆಂದು ಸರ್ವೋಚ್ಚ ನ್ಯಾಯಾಲಯದ ಆಗ್ರಹಿಸಿತ್ತು. ಆಗ ಸರ್ವೋಚ್ಚ ನ್ಯಾಯಾಲಯವು ಶಹಜಹಾನ್ ಸಹಿ ಇರುವ ದಾಖಲೆಗಳನ್ನು ಸಲ್ಲಿಸುವಂತೆ ಹೇಳಿತ್ತು.