ಇನ್ ಸ್ಟಾಗ್ರಾಮ್ ನಲ್ಲಿ ವೀಡಿಯೊಗಳನ್ನು ತಯಾರಿಸುವವರ ಬಟ್ಟೆಗಳನ್ನು ನೋಡಿದರೆ ನಾಚಿಕೆಯಿಂದ ತಲೆ ತಗ್ಗಿಸಬೇಕಾಗುತ್ತದೆ !

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲತೆಯ ಬಗ್ಗೆ ಸಮಾಜವಾದಿ ಪಕ್ಷದ ಸಂಸದ ರಾಮ ಗೋಪಾಲ್ ಯಾದವ ಅವರಿಂದ ರಾಜ್ಯ ಸಭೆಯಲ್ಲಿ ಟೀಕೆ !

ನವ ದೆಹಲಿ – ಇನ್‌ಸ್ಟಾಗ್ರಾಮ್‌ನಲ್ಲಿ `ರೀಲ್’ (ವಿಡಿಯೋ) ತಯಾರಿಸುವವರ ಬಟ್ಟೆಗಳನ್ನು ನೋಡಿದರೆ ನಾಚಿಕೆಯಿಂದ ತಲೆ ತಗ್ಗಿಸಬೇಕಾಗುತ್ತದೆ ಎಂದು ಸಮಾಜವಾದಿ ಪಕ್ಷದ ಸಂಸದ ರಾಮಗೋಪಾಲ ಯಾದವ ಇವರು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಸಂಸದ ಯಾದವ ಮಾತನಾಡಿ,

1. ನಮ್ಮ ಕಾಲದಲ್ಲಿ ನಮಗೆ, ‘ಚಾರಿತ್ರ್ಯ ಮಹತ್ವದ್ದಾಗಿತ್ತು. ಅದು ನಷ್ಟವಾದರೆ ಎಲ್ಲವೂ ನಾಶವಾದಂತೆ’ ಎಂದು ಕಲಿಸುತ್ತಿದ್ದರು.

2. ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಎಂತಹ ಸ್ಥಿತಿಯಿದೆಯೆಂದರೆ, ಅಲ್ಲಿ ಅಶ್ಲೀಲತೆ ಮತ್ತು ನಗ್ನತೆಯನ್ನು ಉತ್ತೇಜಿಸುವ ವಿಚಾರಗಳು ನಡೆಯುತ್ತಿವೆ. ನಾನು ವಿಶೇಷವಾಗಿ ಇನಸ್ಟಾಗ್ರಾಮ್ ‘ರೀಲ್ಸ್’ ವಿಷಯದಲ್ಲಿ ಹೇಳುತ್ತಿದ್ದೇನೆ. ಇಂತಹ ರೀಲ್ಸ ಮತ್ತು ಅದನ್ನು ಮಾಡುವವರು ಸಮಾಜವನ್ನು ಕೆಡಿಸುತ್ತಿದ್ದಾರೆ.

3. ವರದಿ ಬಹಿರಂಗವಾಗಿರುವ ಪ್ರಕಾರ, ದೇಶದ ಯುವಕರು ದಿನಕ್ಕೆ 3 ಗಂಟೆಗಳ ಕಾಲ ರೀಲ್ಸಗಳನ್ನು ನೋಡುವುದರಲ್ಲಿ ಕಳೆಯುತ್ತಾರೆ. ಅಶ್ಲೀಲತೆ, ನಗ್ನತೆಯನ್ನು ಹರಡುವ ರೀಲ್ಸಗಳನ್ನು ಭಾರತದಲ್ಲಿರುವ ಯುವಕರು ಪ್ರತಿದಿನ ಸರಾಸರಿ 3 ಗಂಟೆ ನೋಡುತ್ತಾನೆ ಎಂದೇ ಅರ್ಥವಾಗುತ್ತದೆ.

4. ಯುವಕರ ಕುಟುಂಬದೊಂದಿಗೆ ಸಂವಾದ ಕಡಿಮೆಯಾಗುತ್ತಿದೆ. ಒಟ್ಟಿಗೆ ಕುಳಿತು ಊಟ ಮಾಡುವುದು, ಹರಟೆ ಹೊಡೆಯುವುದು ಇದರಿಂದ ಕುಟುಂಬದವ ನಡುವೆ ಪ್ರೀತಿ ಮತ್ತು ವಾತ್ಸಲ್ಯವನ್ನು ಹೆಚ್ಚಿಸುತ್ತದೆ; ಆದರೆ ಇತ್ತೀಚಿನ ದಿನಗಳಲ್ಲಿ ಜನರು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಒಟ್ಟಿಗೆ ಕುಳಿತುಕೊಳ್ಳುತ್ತಾರೆ. ಪರಸ್ಪರರ ಮೇಲೆ ಗಮನ ಇರುವುದಿಲ್ಲ.

5. ಇತ್ತೀಚಿನ ದಿನಗಳಲ್ಲಿ, ನಾವು ಓದುತ್ತಿದ್ದೇವೆ, ಇನಸ್ಟಾಗ್ರಾಮ್ ನಲ್ಲಿ ಪರಿಚಯವಾಯಿತು, ಸ್ನೇಹಿತರಾದರು ಮತ್ತು ಬಳಿಕ ವಿವಾಹವಾದರು. ತದನಂತರ ಹುಡುಗ ಹುಡುಗಿಯನ್ನು ಹತ್ಯೆ ಮಾಡಿದನು. ಈ ರೀತಿಯ ಘಟನೆಗಳು ಈ ರೀಲ್ಸಗಳಿಂದ ಆಗುತ್ತಿವೆ. ಸಮಾಜದಲ್ಲಿ ಮದ್ಯ ಸೇವನೆಯ ಪ್ರಮಾಣವೂ ಈ ರೀಲ್ಸಗಳಿಂದಾಗಿ ಹೆಚ್ಚಾಗಿದೆ.

ಆನ್‌ಲೈನ್ ಆಟಗಳಿಂದ ಮಕ್ಕಳ ಮಾನಸಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ! – ಫೌಜಿಯಾ ಖಾನ್

ರಾಷ್ಟ್ರವಾದಿ ಕಾಂಗ್ರೆಸ್ ಸಂಸದೆ ಫೌಜಿಯಾ ಖಾನ್ ಇವರೂ ಈ ವಿಷಯದ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಆನ್‌ಲೈನ್ ಆಟಗಳು ಮಕ್ಕಳ ಮಾನಸ್ಸಿನ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿವೆ ಎಂದು ಹೇಳಿದರು. ಪುಣೆಯ ಹುಡುಗನೊಬ್ಬ ಆನ್‌ಲೈನ್ ಆಟದ ಚಟದಿಂದ ಆತ್ಮಹತ್ಯೆ ಮಾಡಿಕೊಂಡನು. ಆದ್ದರಿಂದ ಸರಕಾರ ಆನ್‌ಲೈನ್ ಗೇಮ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ಘೋಷಿಸಬೇಕು ಎಂದು ಹೇಳಿದರು.

ಸಾಮಾಜಿಕ ಮಾಧ್ಯಮದಲ್ಲಿ ಎಲ್ಲಿಯೂ ನಿರ್ಬಂಧವಿಲ್ಲ ! – ಸಂಸದ ವಿಕ್ರಮಜೀತ ಸಿಂಗ

ಆಮ ಆದ್ಮಿ ಪಕ್ಷದ ಸಂಸದ ವಿಕ್ರಮಜಿತ ಸಿಂಗ ಮಾತನಾಡಿ, ಸಧ್ಯಕ್ಕೆ ಸಾಮಾಜಿಕ ಮಾಧ್ಯಮಗಳ ಮೇಲೆ ಯಾವುದೇ ನಿರ್ಬಂಧವಿಲ್ಲ. ಸಾಮಾಜಿಕ ಮಾಧ್ಯಮಗಳ ಮೇಲೆ ಏನು ಬೇಕಾದರೂ ಬರೆದರೂ ಮತ್ತು ಹೇಳಿದರೂ ನಡೆಯುತ್ತದೆ. ಪ್ರಧಾನಿ ಮೋದಿಯಿರಲಿ, ಕಾಂಗ್ರೆಸ್ಸಿನ ನಾಯಕನಿರಲಿ ಅಥವಾ ಬೇರೆ ಯಾವುದೇ ಮಹಾನ್ ವ್ಯಕ್ತಿಯಿರಲಿ ಯಾರ ಮೇಲೆ ಬೇಕಾದರೂ ವ್ಯಂಗೋಕ್ತಿಯನ್ನು ಬಳಸುತ್ತಾರೆ. ಇದಕ್ಕಾಗಿ ಅತ್ಯಂತ ಕೀಳುಮಟ್ಟದ ಭಾಷೆಯನ್ನು ಬಳಸುತ್ತಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ತಿರಸ್ಕಾರವನ್ನು ಹರಡಲಾಗುತ್ತಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಸಮಾಜದ ನೈತಿಕತೆ ಅಧೋಗತಿಯಾಗುತ್ತಿದೆ. ಇದಕ್ಕೆ ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರು ಜವಾಬ್ದಾರರಾಗಿದ್ದಾರೆ. ಅವರು ಜನತೆಗೆ ಸಾಧನೆಯನ್ನು ಕಲಿಸಿ ಧರ್ಮಾಚರಣಿಗಳನ್ನಾಗಿ ಮಾಡಿದ್ದರೆ, ಇಂದು ಈ ಸ್ಥಿತಿ ಬರುತ್ತಿರಲಿಲ್ಲ !