ನವ ದೆಹಲಿ – ಭಾರತೀಯ ಪೌರತ್ವ ತೊರೆದು ವಿದೇಶಕ್ಕೆ ಹೋಗುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಾಗುತ್ತಿದೆ, ಎಂದು ವಿದೇಶಾಂಗ ಸಚಿವಾಲಯವು ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ರಾಘವ ಚಡ್ಡಾ ಅವರ ಪ್ರಶ್ನೆಗೆ ಉತ್ತರಿಸಿದೆ. ಅವರೆಲ್ಲರೂ ವೈಯಕ್ತಿಕ ಕಾರಣಗಳಿಗಾಗಿ ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಹೇಳಲಾಗಿದೆ.
2019 ರಲ್ಲಿ 1 ಲಕ್ಷದ 44 ಸಾವಿರದ 17 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ, 2020 ರಲ್ಲಿ 85 ಸಾವಿರದ 256 ಜನರು, 2021 ರಲ್ಲಿ 1 ಲಕ್ಷದ 63 ಸಾವಿರದ 370, 2022 ರಲ್ಲಿ 2 ಲಕ್ಷ 25 ಸಾವಿರದ 620 ಮತ್ತು 2023 ರಲ್ಲಿ 2 ಲಕ್ಷದ 16 ಸಾವಿರ ಜನರು ತಮ್ಮ ಪೌರತ್ವವನ್ನು ತ್ಯಜಿಸುವ ನಿರ್ಣಯ ಕೈಗೊಂಡರು.
ಭಾರತೀಯರಿಂದ ಅಮೆರಿಕಾಕ್ಕೆ ಆದ್ಯತೆ
2018 ರಿಂದ 2023 ರ ನಡುವೆ, 3 ಲಕ್ಷದ 28 ಸಾವಿರ 619 ಭಾರತೀಯರು ಅಮೇರಿಕಾದ ಪೌರತ್ವ ತೆಗೆದುಕೊಂಡರು. ಹಾಗೆಯೇ 1 ಲಕ್ಷದ 61 ಸಾವಿರದ 917 ಜನರು ಕೆನಡಾದ ಮತ್ತು 1 ಲಕ್ಷದ 31 ಸಾವಿರದ 883 ಜನರು ಆಸ್ಟ್ರೇಲಿಯಾದ ಪೌರತ್ವವನ್ನು ಪಡೆದುಕೊಂಡಿದ್ದಾರೆ.