ನವದೆಹಲಿ – ಎರಡು ವರ್ಷದಿಂದ ಓರ್ವ ೮೦ ವರ್ಷದ ಮಹಿಳೆಯ ಮೇಲೆ ಬಲಾತ್ಕಾರ ಮಾಡಿದ ಕಾಮುಕನಿಗೆ ತೀಸ್ ಹಜಾರೀ ನ್ಯಾಯಾಲಯವು ೧೨ ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ. ಆರೋಪಿಯ ವಯಸ್ಸು, ಅವನ ಕೌಟುಂಬಿಕ ಜವಾಬ್ದಾರಿ ಮತ್ತು ಅವನಿಗೆ ಸುಧಾರಿಸಲು ಅವಕಾಶ ನೀಡುವ ವಿಚಾರ ಮಾಡಿ ೧೨ ವರ್ಷಗಳ ಶಿಕ್ಷೆ ನೀಡಿದೆ, ಹಾಗೂ ಸಂತ್ರಸ್ತೆಗೆ ಯೋಗ್ಯ ಪರಿಹಾರ ನೀಡುವುದಕ್ಕಾಗಿ ಈ ಪ್ರಕರಣವನ್ನು ದೆಹಲಿಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಕಳುಹಿಸಿದೆ.
೧. ಈ ಕಾಮುಕನ ಹೆಸರು ಅಂಕಿತ್ ಎಂದಾಗಿದ್ದು ಈತ ಕಳ್ಳತನದ ಉದ್ದೇಶದಿಂದ ಮಹಿಳೆಯ ಮನೆಗೆ ನುಗ್ಗಿದ್ದನು. ಸಂತ್ರಸ್ತ ಮಹಿಳೆಯ ದೇಹದ ಸೊಂಟಕ್ಕಿಂತ ಕೆಳಗಿನ ಭಾಗ ಕಾರ್ಯ ನಿರ್ವಹಿಸದೇ ಇರುವುದರಿಂದ ಆಕೆ ಅನೇಕ ವರ್ಷದಿಂದ ಹಾಸಿಗೆ ಹಿಡಿದಿದ್ದಳು. ಅಂಕಿತ್ ನು ಮಹಿಳೆಯ ಈ ಅವಸ್ಥೆ ನೋಡಿ ಬಲಾತ್ಕಾರ ಮಾಡಿದನು. ಸಂತ್ರಸ್ತ ಮಹಿಳೆಯು ಆರೋಪಿಗೆ ಕೈಜೋಡಿಸಿ ವಿನಂತಿಸುತ್ತಿದ್ದಳು ; ಆದರೆ ಅವನು ಆಕೆಯ ಮಾತನ್ನು ಕೇಳದೆ ಪದೇ-ಪದೇ ಈ ದುಷ್ಕೃತ್ಯ ಮಾಡಿದನು ಹಾಗೂ ಆಕೆಗೆ ಹೊಡೆದು ಆಕೆಯ ಮೊಬೈಲ್ ಮತ್ತು ಇತರ ವಸ್ತುಗಳನ್ನು ಕಳವು ಮಾಡಿ ಓಡಿ ಹೋದನು.
೨. ನ್ಯಾಯಾಲಯ ತೀರ್ಪು ನೀಡುವಾಗ, ಬಲಾತ್ಕಾರದಂತಹ ಅಪರಾಧ ಸಂತ್ರಸ್ತೆಯ ಆತ್ಮಕ್ಕೆ ನೋವನ್ನುಂಟುಮಾಡುವುದಾಗಿದೆ. ಅದರಿಂದ ಸಂತ್ರಸ್ತ ಮಹಿಳೆಯು ಅವಮಾನಕರ ಜೀವನ ನಡೆಸಬೇಕಾಗುತ್ತದೆ. ಆಕೆಯ ಆತ್ಮವಿಶ್ವಾಸ ನಷ್ಟವಾಗುತ್ತದೆ. ಇಂತಹ ಅಪರಾಧವು ಸಾಮಾಜಿಕ ಮತ್ತು ನೈತಿಕ ಮೌಲ್ಯಕ್ಕೆ ಆಘಾತಕಾರಿಯಾಗಿದೆ. ಅಪರಾಧ ಹೇಗೆ ನಡೆಯಿತು? ಎಂಬುದರ ಸಾಕ್ಷಿ ನಮ್ಮೆದುರಿಗಿಲ್ಲ; ಆದರೆ ಆರೋಪಿಯು ಕೇವಲ ತನ್ನ ಕಾಮಾಸಕ್ತಿಯನ್ನು ತೀರಿಸಿಕೊಳ್ಳಲು ಈ ಕೃತ್ಯ ಮಾಡಿದ್ದಾನೆ ಎಂದು ಕಾಣುತ್ತದೆ. ಅವನು ಸಂತ್ರಸ್ತೆಯನ್ನು ಕೇವಲ ತನ್ನ ಕಾಮ ಶಮನದ ಸಾಧನವನ್ನಾಗಿ ಮಾಡಿಕೊಂಡಿದ್ದಾನೆ ಎಂದು ಹೇಳಿತು.
ಸಂಪಾದಕೀಯ ನಿಲುವುಇಂತಹ ಕಾಮುಕರಿಗೆ ಗಲ್ಲು ಶಿಕ್ಷೆಯೇ ಸರಿ ಎಂದು ಜನರಿಗೆ ಅನಿಸುತ್ತದೆ ! ಕಠಿಣ ಶಿಕ್ಷೆಯಿಂದಲೇ ಇಂತಹ ಕಾಮುಕರ ಮೇಲೆ ಅಂಕುಶ ಇಡಬಹುದು ! |