ನವ ದೆಹಲಿ – ಹಿಮಾಚಲ ಪ್ರದೇಶದಲ್ಲಿ ಆಗಸ್ಟ್ 2 ರಂದು ಮತ್ತೊಮ್ಮೆ ಮೇಘಸ್ಪೋಟವಾಯಿತು. ಈ ಮೇಘಸ್ಪೋಟದಿಂದ ಲಾಹೌಲ ಸ್ಪಿತಿಯ ಪಿನ್ ವಲಿಯಲ್ಲಿ ನೆರೆಹಾವಳಿಯುಂಟಾಗಿದೆ. ಅದರಲ್ಲಿ ಮಹಿಳೆಯೊಬ್ಬರು ಕೊಚ್ಚಿ ಹೋಗಿದ್ದು, ಪೊಲೀಸರಿಗೆ ತಡರಾತ್ರಿ ಮಹಿಳೆಯ ಮೃತದೇಹ ಸಿಕ್ಕಿದೆ. ಈ ಮೊದಲು ಆಗಸ್ಟ್ 1 ರಂದು ಹಿಮಾಚಲದಲ್ಲಿ 5 ಸ್ಥಳಗಳಲ್ಲಿ ಮೇಘಸ್ಫೋಟದಿಂದ ಅಪಾರ ಹಾನಿಯಾಗಿತ್ತು. ಮೇಘಸ್ಪೋಟದಿಂದ ಇಲ್ಲಿಯವರೆಗೆ ಒಟ್ಟು 8 ಮಂದಿ ಸಾವನ್ನಪ್ಪಿದ್ದು, 46 ಮಂದಿ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಲು ಭದ್ರತಾ ಪಡೆಗಳು, ಪೊಲೀಸರು ಮತ್ತು ಗೃಹ ರಕ್ಷಕ ದಳಗಳು ಕಾರ್ಯಾಚರಣೆ ನಡೆಸುತ್ತಿವೆ.
ಮಧ್ಯಪ್ರದೇಶ, ಛತ್ತೀಸಗಢ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ‘ರೆಡ್ ಅಲರ್ಟ್’!
ದೇಶದ ಎಲ್ಲಾ ಭಾಗಗಳಲ್ಲಿ ಋತುಮಾನದ ಮಳೆಯು ಸಕ್ರಿಯವಾಗಿದೆ. ಹವಾಮಾನ ಇಲಾಖೆಯು ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದಲ್ಲಿ ಈ ಮೂರು ರಾಜ್ಯಗಳಲ್ಲಿ ಆಗಸ್ಟ್ 3 ರಂದು ಭಾರಿ ಮಳೆಯಾಗುವ ಸಾಧ್ಯತೆಯಿದೆಯೆಂದು ತಿಳಿಸಿದ್ದು, ಮೂರು ರಾಜ್ಯಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಿದೆ. ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಆಗಸ್ಟ್ 2 ರ ಮಧ್ಯದಲ್ಲಿ ನೆರೆಯ ಸ್ಥಿತಿ ನಿರ್ಮಾಣವಾಗಿತ್ತು.
ರಾಜಸ್ಥಾನದಲ್ಲಿ ವಿಪರೀತ ಮಳೆಯ ಎಚ್ಚರಿಕೆ !
ರಾಜಸ್ಥಾನದಲ್ಲಿ ವಿಪರೀತ ಮಳೆಯ ಎಚ್ಚರಿಕೆ ಇರುವುದರಿಂದ ಆಗಸ್ಟ್ 3 ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದಿದೆ.
ಅಸ್ಸಾಂನಲ್ಲಿ ನೆರೆಯಿಂದಾಗಿ 2 ಮಂದಿ ಸಾವು!
ಅಸ್ಸಾಂನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅಸ್ಸಾಂನ 6 ಜಿಲ್ಲೆಗಳಲ್ಲಿ 18 ಲಕ್ಷಕ್ಕೂ ಹೆಚ್ಚು ಜನರು ನೆರೆಯಿಂದ ತೊಂದರೆಗೀಡಾಗಿದ್ದಾರೆ. ಈ ವರ್ಷ ಇದುವರೆಗೆ ರಾಜ್ಯದಾದ್ಯಂತ ನೆರೆಹಾವಳಿ, ಬಿರುಗಾಳಿ, ಸಿಡಿಲು ಗುಡುಗು, ಬಂಡೆಗಲ್ಲು ಉರುಳುವುದು, ಈ ಘಟನೆಗಳಿಂದ 116 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.