ಜೈಪುರ – ರಾಜಸ್ಥಾನದ ಶಿಕ್ಷಣ ಇಲಾಖೆಯು ರಾಜ್ಯದ ಶಾಲೆಗಳಲ್ಲಿ ಇಂದಿರಾ ಗಾಂಧಿ ಜಯಂತಿಯನ್ನು ಆಚರಿಸುವುದು ನಿಷೇಧಿಸಿದೆ. ಇದರೊಂದಿಗೆ ಶಾಲೆಯ ‘ಕ್ಯಾಲೆಂಡರ್’ನಿಂದ ಇಂದಿರಾಗಾಂಧಿ ಜಯಂತಿಯನನ್ನೂ ಅಳಿಸಿ ಹಾಕಿದೆ. ಇಷ್ಟು ಮಾತ್ರವಲ್ಲದೆ ಇಂದಿರಾ ಗಾಂಧಿ ಅವರ ಪುಣ್ಯತಿಥಿಯ ಅಂಗವಾಗಿ ಆಯೋಜಿಸಿದ್ದ ‘ಕ್ವಾಮಿ ಏಕತಾ ಸಪ್ತಾಹ’ದ ಹೆಸರನ್ನು ‘ಸಮರಸತಾ ಸಪ್ತಾಹ’ ಎಂದು ಬದಲಾಯಿಸಲಾಗಿದೆ ಎಂದು ಶಿಕ್ಷಣ ಸಚಿವ ಮದನ್ ದಿಲಾವರ್ ಮಾಹಿತಿ ನೀಡಿದ್ದಾರೆ. ದೇಶದ ಅನೇಕ ಮಹಾನ್ ವ್ಯಕ್ತಿಗಳನ್ನು ಗೌರವಿಸುವುದು ಈ ನಿರ್ಧಾರದ ಹಿಂದಿನ ಉದ್ದೇಶವಾಗಿದೆ ಎಂದು ಮದನ್ ದಿಲಾವರ್ ಹೇಳಿದರು.
ಶಿಕ್ಷಣ ಸಚಿವರು ಮಾತು ಮುಂದುವರೆಸಿ, ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದರು. ತುರ್ತು ಪರಿಸ್ಥಿತಿಯು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಆಳವಾಗಿ ಗಾಯಗೊಳಿಸಿದೆ. ವೀರ ಸಾವರ್ಕರ್ ಕುರಿತು ಮಾತನಾಡಿದ ಅವರು, ಅವರು ನಿಜವಾದ ದೇಶಭಕ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ವೀರ ಸಾವರ್ಕರ್ ಅವರ ಜಯಂತಿಯನ್ನು ಆಚರಿಸಲು ಶಿಕ್ಷಣ ಇಲಾಖೆ ಒಪ್ಪಿಗೆ ನೀಡಿದೆ.
ಸಂಪಾದಕೀಯ ನಿಲುವುಕಾಂಗ್ರೆಸ್ ತನ್ನ 6 ದಶಕಗಳ ಆಡಳಿತದಲ್ಲಿ ದೇಶದ ಜನರಿಗೆ ಅನೇಕ ಯೋಜನೆಗಳು, ಸೌಲಭ್ಯಗಳು ಇತ್ಯಾದಿಗಳಿಗೆ ಗಾಂಧಿ-ನೆಹರು ಮನೆತನದ ಹೆಸರನ್ನು ನೀಡಿದೆ. ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಗಾಂಧಿ-ನೆಹರೂ ಕುಟುಂಬದವರ ಕೊಡುಗೆ ಏನು?, ಇದು ಬೇರೆಯೇ ಶೋಧ ವಿಷಯವಾಗಲಿದೆ. ಆದರೆ, ಕಾಂಗ್ರೆಸ್ ಯಾವಾಗಲೂ ಗಾಂಧಿ-ನೆಹರೂ ಕುಟುಂಬಕ್ಕೆ ಪ್ರಜಾಪ್ರಭುತ್ವಕ್ಕಿಂತ ಹೆಚ್ಚಿನ ಸ್ಥಾನ ನೀಡಿದೆ ಎಂಬುದನ್ನು ಇದು ತೋರಿಸುತ್ತದೆ ! |