ಇಸ್ಲಾಂನಲ್ಲಿ ಹುಟ್ಟದವರು ದುರದೃಷ್ಟಕರರು ಎಂದು ಹೇಳಿದ್ದ ಬಂಗಾಲದ ಸಚಿವ ಫಿರಹಾದ ಹಕೀಮ್ ನ ಹೊಸ ದಾವೆ !
ಕೊಲಕಾತಾ (ಬಂಗಾಲ) – ಬಂಗಾಲ ರಾಜ್ಯ ಸರಕಾರದ ಸಚಿವ ಮತ್ತು ಕೊಲಕಾತಾದ ಮಹಾಪೌರ ಫಿರಹಾದ ಹಕೀಮ್ ಇವರು ಕಳೆದ ತಿಂಗಳು, ಇಸ್ಲಾಂನಲ್ಲಿ ಹುಟ್ಟದವರು ದುರದೃಷ್ಟಕರರು, ನಾವು (ಮುಸಲ್ಮಾನರು) ಅವರನ್ನು ಇಸ್ಲಾಂನ ಪರಿಧಿಗೆ ಕರೆತರಬೇಕು.’ ಅವರ ಈ ಹೇಳಿಕೆಗೆ ವಿರೋಧವಾದ ನಂತರ ಅವರು ಈಗ ಬಂಗಾಲ ವಿಧಾನಸಭೆಯಲ್ಲಿ ಆಗಸ್ಟ್ ೧ ರಂದು ಹೊಸ ದಾವೆ ಮಾಡಿದ್ದಾರೆ. ಅವರು, ನಾನು ಮುಸ್ಲಿಂ ಆಗಿದ್ದರೂ ದುರ್ಗಾ ಪೂಜೆ ಮತ್ತು ಕಾಲಿ ಪೂಜೆಯ ಆಯೋಜನೆ ನಿರಂತರ ಮಾಡುತ್ತೇನೆ ಎಂದು ದಾವೆ ಮಾಡಿದರು.
Firhad Hakim: “Even though I am a Mu$l!m, I regularly organize Durga Puja!” – Bengal Minister Firhad Hakim
The new claim of Bengal Minister Firhad Hakim, who stated, “Those who are not born into I$lam are unfortunate!”
Firhad’s statement, “Those who are not born into I$l@m are… pic.twitter.com/QhrxefTTcg
— Sanatan Prabhat (@SanatanPrabhat) August 2, 2024
ಹಕೀಮ್ ಮಾತು ಮುಂದುವರೆಸುತ್ತಾ, ಯಾವಾಗ ನಾನು ಯಾವುದಾದರೂ ಪ್ರಶ್ನೆಯ ಉತ್ತರ ನೀಡುವುದಕ್ಕಾಗಿ (ವಿಧಾನಸಭೆಯಲ್ಲಿ) ನಿಲ್ಲುತ್ತೇನೆ, ಆಗ ಭಾಜಪದ ಶಾಸಕರು ಸಂಸತ್ತಿನಿಂದ ಹೊರಹೋಗುತ್ತಾರೆ. ನನ್ನ ಎಲ್ಲಾ ಟಿಪ್ಪಣಿಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದ್ದರೆ, ನಾನು ಏನು ಮಾಡಲು ಸಾಧ್ಯ ? ಭಾಜಪದವರು ನನ್ನನ್ನು ಜಾತ್ಯತೀತ ಎಂದು ನಂಬುತ್ತಾರೆ ಅಥವಾ ಇಲ್ಲ? ನಾನು ಎಂದಿಗೂ ಕೂಡ ಇತರ ಯಾವುದೇ ಧರ್ಮದ ಜನರ ಅವಮಾನ ಮಾಡಿಲ್ಲ ಮತ್ತು ನನ್ನ ಕೊನೆಯ ಉಸಿರು ಇರುವ ವರೆಗೆ ನಾನು ಹಾಗೆ ಮಾಡುವುದಿಲ್ಲ. ಯಾರನ್ನೂ ನೋಯಿಸುವ ಉದ್ದೇಶ ನನ್ನದಾಗಿಲ್ಲ. ನನ್ನ ಜನ್ಮ ಜಾತ್ಯತೀತ ಕುಟುಂಬದಲ್ಲಿ ಆಗಿದೆ ಮತ್ತು ಭವಿಷ್ಯದಲ್ಲಿ ಕೂಡ ನಾನು ಜಾತ್ಯತೀತವಾಗಿ ಇರುವೆ ಎಂದು ಹೇಳಿದ್ದಾರೆ. (ಹಾಗಾದರೆ ಹಕೀಂ ಇವರ ಜಾತ್ಯತೀತತೆಯ ಜ್ಞಾನ ಬಂಗಾಲದಲ್ಲಿನ ಮುಸಲ್ಮಾನರಿಗೂ ಕೂಡ ನೀಡಬೇಕು ಮತ್ತು ಅಲ್ಲಿಯ ಹಿಂದುಗಳ ರಕ್ಷಣೆಯ ಕಾಳಜಿ ವಹಿಸಬೇಕು, ಇಲ್ಲವಾದರೆ ಇದೆಲ್ಲವೂ ಆಚಾರ ಹೇಳುವುದು ಬದನೆಕಾಯಿ ತಿನ್ನುವುದು ಎಂಬಂತೆ ಆಗುತ್ತದೆ ಇದನ್ನು ಬೇರೆ ಹೇಳಬೇಕಿಲ್ಲ ! – ಸಂಪಾದಕರು)
ಸಂಪಾದಕೀಯ ನಿಲುವು
|