ಚೆನ್ನೈ – ಶ್ರೀಲಂಕಾ ನೌಕಾಪಡೆಯು ಭಾರತೀಯ ಮೀನುಗಾರರ ದೋಣಿಗೆ ಡಿಕ್ಕಿ ಹೊಡೆದರಿಂದ ಪಲ್ಟಿಯಾಗಿ ಓರ್ವ ಭಾರತೀಯ ಮೀನುಗಾರನ ಸಾವಾಗಿದ್ದು, ಒಬ್ಬ ಮೀನುಗಾರ ನಾಪತ್ತೆಯಾಗಿದ್ದಾನೆ. ಶ್ರೀಲಂಕಾದ ನೌಕಾಪಡೆ ಭಾರತೀಯ ಮೀನುಗಾರರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾಗ ಭಾರತೀಯ ಮೀನುಗಾರರ ನೌಕೆ ಪಲ್ಟಿಯಾಗಿದೆ. ಈ ನೌಕೆಯಲ್ಲಿ ಒಟ್ಟು 4 ಜನ ಮೀನುಗಾರರು ಇದ್ದರು. ಇಬ್ಬರು ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆಯು ವಶಕ್ಕೆ ಪಡೆದಿದೆ. ಅಪಘಾತದ ನಂತರ, ದೆಹಲಿಯಲ್ಲಿರುವ ಶ್ರೀಲಂಕಾದ ಹೈಕಮಿಷನರ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕರೆಸಿ ಅವರ ಬಳಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ.
ಭಾರತ-ಶ್ರೀಲಂಕಾ ಸಂಬಂಧದಲ್ಲಿ ಮೀನುಗಾರರ ಸೂತ್ರ ವಿವಾದಾತ್ಮಕ ಸೂತ್ರ !
ಮೀನುಗಾರರ ಸೂತ್ರವು ಭಾರತ ಮತ್ತು ಶ್ರೀಲಂಕಾ ನಡುವಿನ ವಿವಾದಾತ್ಮಕ ಸೂತ್ರವಾಗಿದೆ. ಮೀನುಗಾರರಿಗೆ ಸಂಬಂಧಿಸಿದ ಹೆಚ್ಚಿನ ಘಟನೆಗಳು ‘ಪಾಲ್ಕ್ ಸ್ಟೇಟ್ ‘ನಲ್ಲಿ (ಜಲಸಂಧಿಯಲ್ಲಿ) ಘಟಿಸುತ್ತವೆ. ಇದು ತಮಿಳುನಾಡು ಮತ್ತು ಉತ್ತರ ಶ್ರೀಲಂಕಾ ನಡುವಿನ ಒಂದು ಬೆಲ್ಟ್ ಆಗಿದೆ. ಇದು ಮೀನುಗಳಿಗಾಗಿ ಸಮೃದ್ಧ ಪ್ರದೇಶವೆಂದು ಪರಿಗಣಿಸಲಾಗಿದೆ. ಈ ವರ್ಷ ಇದುವರೆಗೆ 180 ಕ್ಕೂ ಹೆಚ್ಚು ಮೀನುಗಾರರನ್ನು ಶ್ರೀಲಂಕೆಯು ಬಂಧಿಸಿದೆ. ಕಳೆದ ವರ್ಷ 240 ರಿಂದ 245 ಜನರನ್ನು ಬಂಧಿಸಲಾಗಿತ್ತು.