ಕಾವಡ ಯಾತ್ರೆಯ ಮಾರ್ಗಗಳಲ್ಲಿ ಮಸೀದಿಯ ಮುಂದೆ ಹಾಕಲಾಗಿದ್ದ ಪರದೆಗಳನ್ನು ತೆಗೆದ ಸರಕಾರ !

ಹರಿದ್ವಾರ (ಉತ್ತರಾಖಂಡ) – ಕಾವಡ ಯಾತ್ರೆ ಜುಲೈ 26 ರಂದು ಹರಿದ್ವಾರ ನಗರದ ಜ್ವಾಲಾಪುರ ಪ್ರದೇಶದ ಮೂಲಕ ಹಾದುಹೋಗುತ್ತಿತ್ತು; ಆದರೆ ಅದಕ್ಕೂ ಮುಂಚೆಯೇ, ಈ ಮಾರ್ಗದಲ್ಲಿನ ಎರಡು ಮಸೀದಿಗಳು ಮತ್ತು ಒಂದು ಮಜಾರ (ಮುಸ್ಲಿಂ ಗೋರಿ) ಇವುಗಳನ್ನು ಪರದೆಗಳಿಂದ ಮುಚ್ಚಲಾಗಿತ್ತು. ಜಿಲ್ಲಾಡಳಿತಕ್ಕೆ ಈ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ‘ನಾವು ಈ ರೀತಿ ಪರದೆ ಹಾಕುವಂತೆ ಸೂಚನೆ ನೀಡಿರಲಿಲ್ಲ’ ಎಂದು ಹೇಳುತ್ತಾ ಎಲ್ಲಾ ಪರದೆಗಳನ್ನು ತೆರವುಗೊಳಿಸಿದರು.

1. ಈ ಬಗ್ಗೆ ಹರಿದ್ವಾರ ಪೊಲೀಸ್ ವರಿಷ್ಠಾಧಿಕಾರಿ ಸ್ವತಂತ್ರ ಕುಮಾರ್ ಅವರು ಮಾತನಾಡಿ, ಈ ಯಾತ್ರೆಯ ಮಾರ್ಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗುತ್ತಿದ್ದು, ತಪ್ಪಾಗಿ ಪರದೆಗಳನ್ನು ಹಾಕಿರಬಹುದು. ಇದರ ಹಿಂದೆ ಯಾವುದೇ ತಪ್ಪು ಉದ್ದೇಶ ಇರಲಿಲ್ಲ ಎಂದರು.

2. ಈ ಬಗ್ಗೆ ಅಲ್ಲಿನ ಉಸ್ತುವಾರಿ ಸಚಿವರಾದ ಸತ್ಪಾಲ್ ಮಹಾರಾಜ್ ಅವರು ಮಾತನಾಡಿ, ಕಾವಡ ಯಾತ್ರೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯಬಾರದು ಮತ್ತು ಯಾತ್ರೆ ಸುಗಮವಾಗಿ ಸಾಗಬೇಕು ಎಂದು ಮಸೀದಿ ಹಾಗೂ ಮಜಾರಗಳಿಗೆ ಪರದೆಗಳನ್ನು ಹಾಕಲಾಗಿದ್ದು, ಇದರ ಹಿಂದೆ ಗಲಭೆಗಳನ್ನು ಪ್ರಚೋದಿಸುವ ಉದ್ದೇಶವಿರಲಿಲ್ಲ ಎಂದು ತಿಸ್ಪಷ್ಟಪಡಿಸಿದ್ದಾರೆ. .