ಜಾರ್ಖಂಡ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಾವಡ ಯಾತ್ರಿಕರ ಮೇಲೆ ಮುಸ್ಲಿಮರಿಂದ ದಾಳಿ !

ರಾಂಚಿ-ಲೋಹಾರದಗಾ ರೈಲಿನ ಮೇಲೆ ಕಲ್ಲು ತೂರಾಟ

ರಾಂಚಿ – ಜಾರ್ಖಂಡನಲ್ಲಿ ಭಗವಾನ ಶ್ರೀ ಭೋಲೆ ನಾಥನಿಗೆ ಜಲಾಭಿಷೇಕ ಮಾಡಿ ಮರಳುತ್ತಿದ್ದ ಕಾವಡ ಯಾತ್ರಿಕರ ಮೇಲೆ ಮುಸಲ್ಮಾನರು ದಾಳಿ ನಡೆಸಿದ್ದಾರೆ. ಯಾತ್ರಿಕರು ಪ್ರವಾಸ ಮಾಡುತ್ತಿದ್ದ ರಾಂಚಿ-ಲೋಹಾರದಗಾ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮುಸಲ್ಮಾನರು ರೈಲಿನಲ್ಲಿ ಲೂಟಿ ಮಾಡಿರುವುದಾಗಿ ಆರೋಪಿಸಲಾಗುತ್ತಿದೆ. ಈ ದಾಳಿಯನ್ನು ವಿರೋಧಿಸಿ ಕಾವಡ ಯಾತ್ರಿಕರು ಪ್ರತಿಭಟನೆ ನಡೆಸಿದರು.

1. ಲೋಹಾರದಗಾ ಜಿಲ್ಲೆಯ ಕಾವಡ ಯಾತ್ರಿಕರ ಗುಂಪೊಂದು ರಾಜಧಾನಿ ರಾಂಚಿಯ ಬೆಟ್ಟದ ಮಹಾದೇವ ದೇವಸ್ಥಾನದಲ್ಲಿ ಜಲಾಭಿಷೇಕ ಮಾಡಲು ಹೋಗಿತ್ತು. ಆ ಯಾತ್ರಿಕರು ರಾಂಚಿ-ಲೋಹಾರದಗಾ ರೈಲಿನಲ್ಲಿ ಮರಳುತ್ತಿದ್ದರು.

2. ಕೆಲವು ಮುಸ್ಲಿಂ ಪ್ರಯಾಣಿಕರು ಈ ಯಾತ್ರಿಕರನ್ನು ಕೆದರಿ ಜಗಳವಾಡಿ, ಅವರ ಮೇಲೆ ಹಲ್ಲೆ ನಡೆಸಿದರು ಮತ್ತು ಅವರ ವಸ್ತುಗಳನ್ನು ಲೂಟಿ ಮಾಡಿದರು.

3. ಈ ಮಾರ್ಗದ ಹಲವು ರೈಲ್ವೆ ನಿಲ್ದಾಣಗಳಲ್ಲಿ ಮುಸಲ್ಮಾನರ ಇಂತಹ ದಾಳಿ ಮುಂದುವರಿದಿದ್ದು ಕಾವಡ ಯಾತ್ರಿಕರಿಂದ ತುಂಬಿದ್ದ ಈ ರೈಲಿನ ಮೇಲೆಯೂ ಕೂಡ ಕಲ್ಲು ತೂರಾಟ ನಡೆಸಲಾಗಿದೆ.

4. ಜಾರ್ಖಂಡನ ಬಿಜೆಪಿ ಮುಖ್ಯಸ್ಥ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಅವರು ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

5.  ‘ಪವಿತ್ರ ಶ್ರಾವಣ ಮಾಸದಲ್ಲಿ ಶಿವಭಕ್ತರ ಮೇಲೆ ನಡೆದ ಈ ಹಲ್ಲೆಯು ಖಂಡನೀಯ ಹಾಗೂ ಅಕ್ಷಮ್ಯ’ ಎಂದು ಶ್ರೀ ಮರಾಂಡಿಯವರು ಪ್ರತಿಕ್ರಿಯಿಸಿದ್ದಾರೆ.

ಸಂಪಾದಕೀಯ ನಿಲುವು

ಉತ್ತರ ಭಾರತದಲ್ಲಿ ಶ್ರಾವಣ ಮಾಸ ಪ್ರಾರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಕಾವಡಾ ಯಾತ್ರಿಕರ ಮೇಲೆ ಮುಸಲ್ಮಾನರು ದಾಳಿ ನಡೆಸಿರುವ ಹಲವು ಘಟನೆಗಳು ನಡೆದರೂ ಆಶ್ಚರ್ಯವೇನಿಲ್ಲ!

ಭಾರತದಲ್ಲಿ, ಮುಸಲ್ಮಾನರು ಹಿಂದೂಗಳ ಹಬ್ಬ-ಉತ್ಸವಗಳ ಸಮಯದಲ್ಲಿ ಅವರ ಮೇಲೆ ದಾಳಿ ನಡೆಸಿ ಅವರ ಸಂತೋಷಕ್ಕೆ ಹುಳಿ ಹಿಂಡುವ ಸಂಚು ರೂಪಿಸಿದ್ದಾರೆ.
ಇದು ಪೋಲೀಸ್, ಸರ್ಕಾರ ಮತ್ತು ಹಿಂದೂಗಳಿಗೆ ನಾಚಿಕೆಗೇಡಿನ ವಿಷಯವಾಗಿದೆ.