ಬೆಂಗಳೂರು – ರಾಜ್ಯದ ಕಾಂಗ್ರೆಸ್ ಸರಕಾರ ‘ರಾಜ್ಯ ಉದ್ಯೋಗ ಮಸೂದೆ, 2024’ ರ ಕರಡನ್ನು ಅನುಮೋದಿಸಿದನ್ನು ಹಿಂಪಡೆದಿದೆ. ಮಸೂದೆ ಮಂಡಿಸುವಾಗ ಇದರಲ್ಲಿ ಸ್ಥಳೀಯರಿಗೆ ಖಾಸಗಿ ಸಂಸ್ಥೆಗಳಲ್ಲಿ ಮತ್ತು ಕೈಗಾರಿಕೆಗಳಲ್ಲಿ ಮೀಸಲಾತಿ ನೀಡಲಾಗಿತ್ತು. ಈ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದ ನಂತರ, ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಮೀಸಲಾತಿಯನ್ನು ನೀಡುವುದು ಕಡ್ಡಾಯವಾಗಿತ್ತು. ಈ ಮಸೂದೆಯಲ್ಲಿ ಆಡಳಿತ ಅಥವಾ ಆಡಳಿತಾತ್ಮಕ ಉದ್ಯೋಗಗಳ ಸಂದರ್ಭದಲ್ಲಿ, ಶೇಕಡಾ 50 ರಷ್ಟು ಹುದ್ದೆಗಳು ಮತ್ತು ಆಡಳಿತೇತರ ಉದ್ಯೋಗಗಳಲ್ಲಿ ಶೇಕಡಾ 75 ರಷ್ಟು ಹುದ್ದೆಗಳನ್ನು ಕನ್ನಡದವರಿಗೆ ಮೀಸಲಿಡಲಾಗಿತ್ತು. ‘ಗ್ರೂಪ್ ಸಿ’ ಮತ್ತು ‘ಗ್ರೂಪ್ ಡಿ’ ಯಲ್ಲಿ ಶೇ. 100 ರಷ್ಟು ಸ್ಥಳೀಯರಿಗೆ ಕೆಲಸ ಸಿಗುವುದಿತ್ತು. ರಾಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಕನ್ನಡ ಪ್ರಾವೀಣ್ಯತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿರುತ್ತದೆ. ಯಾವುದೇ ಸಂಸ್ಥೆಯು ಕಾನೂನಿನ ನಿಬಂಧನೆಗಳನ್ನು ಉಲ್ಲಂಘಿಸಿದರೆ ಅವರಿಗೆ 10 ಸಾವಿರದಿಂದ 25 ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸಬಹುದಾಗಿದೆ.
ಸರಕಾರವು ಈ ಮೊದಲೇ ಒಂದು ಕಾನೂನನ್ನು ಜಾರಿಗೊಳಿಸಿದೆ, ಇದರಲ್ಲಿ ವಾಣಿಜ್ಯ ಸಂಸ್ಥೆಗಳು ತಮ್ಮ ಶೇ 60 ರಷ್ಟು ಸೈನ್‌ಬೋರ್ಡ್‌ಗಳನ್ನು ಕನ್ನಡ ಭಾಷೆಯಲ್ಲಿ ಹೊಂದಿರುವುದು ಆವಶ್ಯಕವಾಗಿದೆ.
ರಾಜ್ಯದ ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿ, ಖಾಸಗಿ ಸಂಸ್ಥೆಗಳು ತಮ್ಮ ಸಂಸ್ಥೆಗಳಿಗೆ ಸರಕಾರದಿಂದ ಅನುದಾನ ಮತ್ತು ಇತರ ಪ್ರಯೋಜನಗಳನ್ನು ಪಡೆಯುತ್ತವೆ, ಆದ್ದರಿಂದ ಅವರು ಉದ್ಯೋಗಗಳಲ್ಲಿ ಸ್ಥಳೀಯ ಜನರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕಾಗುವುದು. ರಾಜ್ಯ ಉದ್ಯೋಗ ಮಸೂದೆ ಜಾರಿಯ ನಂತರ ಸ್ಥಳೀಯ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಕಾನೂನು ಪ್ರಕ್ರಿಯೆಗಳ ನಂತರ ಅರ್ಹ ಅಭ್ಯರ್ಥಿಗಳು ಸಿಕ್ಕಿಲ್ಲವೆಂದು ಸಂಸ್ಥೆಗಳು ಸಬೂಬು ಹೇಳಲು ಸಾಧ್ಯವಿಲ್ಲ. ಕೆಲವು ಕಾರಣಗಳಿಂದ ಅರ್ಹ ಸ್ಥಳೀಯ ಜನರು ಸಿಗದಿದ್ದರೆ, ಸಂಸ್ಥೆಯು 3 ವರ್ಷಗಳಲ್ಲಿ ಸ್ಥಳೀಯ ಜನರಿಗೆ ತರಬೇತಿಯನ್ನು ನೀಡಬೇಕಾಗುತ್ತದೆ. ಈ ಮಸೂದೆಯಲ್ಲಿ ಉದ್ಯೋಗ ಅಥವಾ ಸಂಸ್ಥೆಗಳಿಗೆ ಕೆಲವು ಷರತ್ತುಗಳ ಮೇಲೆ ವಿನಾಯತಿ ನೀಡಲಾಗಿದೆ. ಅವರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ 25 ಮತ್ತು ಆಡಳಿತೇತರ ಹುದ್ದೆಗಳಿಗೆ ಶೇ 50 ಮೀಸಲಾತಿ ನೀಡಬೇಕು. ಅದರಂತೆ, ಸಂಸ್ಥೆಗಳು ಸರಕಾರಿ ಆಡಳಿತದೊಂದಿಗೆ ಸಹರಿಸುವುದು ಅವಶ್ಯಕವಾಗಿದೆ ಎಂದು ಹೇಳಿದ್ದಾರೆ.
ಕಾನೂನಿನ ಪ್ರಕಾರ ಸ್ಥಳೀಯರು ಯಾರು ?
ಈ ಮಸೂದೆಯನುಸಾರ, ‘ರಾಜ್ಯದಲ್ಲಿ ಜನಿಸಿರುವವರು, 15 ವರ್ಷಗಳಿಂದ ರಾಜ್ಯದಲ್ಲಿ ನೆಲೆಸಿರುವವರು, ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿರುವವರು ಮತ್ತು ರಾಜ್ಯದಲ್ಲಿ ಅಗತ್ಯವಿರುವ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ‘ಸ್ಥಳೀಯರು’ ಎಂದು ಪರಿಗಣಿಸಲಾಗುತ್ತದೆ.