(ಮೌಲಾನಾ ಎಂದರೆ ಇಸ್ಲಾಂನ ಅಧ್ಯಯನಕಾರ)
ಬರೇಲಿ (ಉತ್ತರಪ್ರದೇಶ) – ಇಲ್ಲಿ ೨೩ ಹಿಂದೂ ಹುಡುಗ ಹುಡುಗಿಯರನ್ನು ಮತಾಂತರಗೊಳಿಸಿ ನಂತರ ಮುಸಲ್ಮಾನರ ಜೊತೆಗೆ ವಿವಾಹ ಮಾಡಿಕೊಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ, ಎಂದು ‘ಇತ್ತೆಹಾದ-ಏ-ಮಿಲ್ಲತ್ ಪರಿಷತ್ತಿ’ನ (‘ಐ.ಎಂ.ಸಿ.’ ನ) ಅಧ್ಯಕ್ಷ ಮೌಲಾನ ತೌಕಿರ್ ರಝಾ ಖಾನ್ ಇವರು ಹೇಳಿಕೆ ನೀಡಿದ್ದಾರೆ. ಮೊದಲ ಹಂತದಲ್ಲಿ ಜುಲೈ ೨೧ ರಂದು ೫ ಜೋಡಿಗಳ ಸಾಮೂಹಿಕ ವಿವಾಹ ನಡೆಯುವುದು ಎಂದು ಅವರು ಮಾಹಿತಿ ಕೂಡ ನೀಡಿದರು.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಾಗ ‘ಐ.ಎಂ.ಸಿ.’ಯ ಉಸ್ತುವಾರಿ ನದೀಮ್ ಖುರೇಶಿ ಇವರು, ಜುಲೈ ೨೧ ರಿಂದ ೨೪ ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ. ನಗರದಂಡಾಧಿಕಾರಿಗಳ ಬಳಿ ಅನುಮತಿ ಕೇಳಲಾಗಿದೆ ಎಂದು ಹೇಳಿದರು. ಮೌಲಾನ ತೌಕಿರ್ ರಝಾ ಇವರು, ದೇಶದಲ್ಲಿ ‘ಗಂಗಾ-ಜಮುನಿ-ತಹಜೀಬ್’ನ(ಗಂಗಾ ಜಮುನಿ ತಹಜೀಬ್ ಎಂದರೆ ಗಂಗಾ ಮತ್ತು ಯಮುನಾ ಈ ನದಿಯ ತೀರದಲ್ಲಿ ವಾಸಿಸುವ ಹಿಂದೂ ಮತ್ತು ಮುಸಲ್ಮಾನ ಇವರಲ್ಲಿನ ಕಥಿತ ಐಕ್ಯತೆ ತೋರಿಸುವ ಸಂಸ್ಕೃತಿ) ಆದರ್ಶ ಸ್ಥಾಪಿಸುವುದಕ್ಕಾಗಿ ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮಗಳಿಗೆ ಅನುಮತಿ ನೀಡಬೇಕು ಎಂದು ಹೇಳಿದರು.
ಇದು ಶಾಂತಿ ಮತ್ತು ಸುವ್ಯವಸ್ಥೆ ಕದಡುವ ಷಡ್ಯಂತ್ರ ! – ಮಹಾಂತ ಪಂಡಿತ್ ಸುಶೀಲ ಪಾಠಕ
‘ಮೌಲಾನ ತೌಕಿರ್ ಇವರ ಪ್ರಚೋದನಕಾರಿ ಹೇಳಿಕೆಯಿಂದ ಬರೇಲಿಯ ಶಾಂತಿ ಮತ್ತು ಸುವ್ಯವಸ್ಥೆ ಹಾಳು ಮಾಡುವ ಷಡ್ಯಂತ್ರ ರಚಿಸುತ್ತಿದ್ದಾರೆ. ಯೋಗಿ ಸರಕಾರವು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶಿರಡಿ ಸಾಯಿ ಸರ್ವದೇವ ದೇವಸ್ಥಾನದ ಮಹಂತ ಪಂಡಿತ ಸುಶೀಲ ಪಾಠಕ ಇವರು ಆಗ್ರಹಿಸಿದ್ದಾರೆ.
ನಾಥ ನಾಗರಿ ಸುರಕ್ಷಾ ತಂಡದ ಅಧಿಕಾರಿಗಳು ಕೂಡ ಈ ಮತಾಂತರವನ್ನು ಆಕ್ಷೇಪಿಸಿದ್ದಾರೆ. ಸಂಘಟನೆಯ ಶಾಖ ಅಧ್ಯಕ್ಷ ದುರ್ಗೇಶ ಗುಪ್ತ ಇವರು, ಇದರ ವಿರುದ್ಧ ಅವರು ಜಿಲ್ಲ ನ್ಯಾಯ ದಂಡಾಧಿಕಾರಿಗಳನ್ನು ಭೇಟಿ ಮಾಡುವರು ಎಂದು ಹೇಳಿದರು.
Will convert 23 Hindu boys and girls to I$lam and marry them to Mu$l!ms : Mass marriage ceremony planned for July 21st in Bareilly Uttar Pradesh – Provocative statement of Maulana Tauqeer Raza
In Hindu-majority India, it is shameful for the government and 1 billion Hindus that… pic.twitter.com/SH141d6Q2R
— Sanatan Prabhat (@SanatanPrabhat) July 16, 2024
ಸಂಪಾದಕೀಯ ನಿಲುವುಹಿಂದೂ ಬಹುಸಂಖ್ಯಾತ ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯದ ಓರ್ವ ಧಾರ್ಮಿಕ ಮುಖಂಡ ಬಹಿರಂಗವಾಗಿ ಹಿಂದುಗಳ ಮತಾಂತರ ಮಾಡುವುದಾಗಿ ಹೇಳುತ್ತಾನೆ ಮತ್ತು ಅವನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ, ಇದು ಸರಕಾರ ಮತ್ತು ೧೦೦ ಕೋಟಿ ಹಿಂದುಗಳಿಗೆ ಲಚ್ಚಾಸ್ಪದ ! ಜಿಹಾದಿ ಭಯೋತ್ಪಾದಕರು ೨೦೪೭ ವರೆಗೆ ‘ಗಝವಾ-ಏ’ಹಿಂದ’ (ಭಾರತದ ಇಸ್ಲಾಮಿಕರಣ) ಮಾಡಲು ರೂಪಿಸಿರುವ ಷಡ್ಯಂತ್ರ ಇಂತಹವರಿಂದ ಹೇಗೆ ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ, ಇದು ಒಂದು ಉದಾಹರಣೆಯಾಗಿದೆ. ಹಿಂದುಗಳು ಈಗಲಾದರೂ ಎಚ್ಚರಗೊಳ್ಳುವರೆ ? |