ಹಿಂದೂಗಳನ್ನು ಅಕ್ರಮವಾಗಿ ಮತಾಂತರ ಮಾಡಿದ ಓರ್ವ ಕ್ರೈಸ್ತ ವ್ಯಕ್ತಿಗೆ ಜಾಮೀನು ನಿರಾಕರಣೆ !
ಪ್ರಯಾಗರಾಜ್ – ಧಾರ್ಮಿಕ ಸ್ವಾತಂತ್ರ್ಯ, ಎಂದರೆ ಇತರರನ್ನು ಮತಾಂತರಗೊಳಿಸುವ ಅಧಿಕಾರ ಅಲ್ಲ, ಎಂದು ಅಲಹಾಬಾದ್ ಉಚ್ಚನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಕೆಲವು ಹಿಂದೂಗಳನ್ನು ಅಕ್ರಮವಾಗಿ ಮತಾಂತರಿಸಿದ ಆರೋಪ ಇರುವ ಓರ್ವ ಕ್ರೈಸ್ತ ವ್ಯಕ್ತಿಗೆ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ಅಲಹಾಬಾದ್ ಉಚ್ಚನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
Religious freedom does not grant the right to convert others – Allahabad HC
Bail denied to Christian individual for unlawful conversion of Hindus#NoConversion #BanConversion pic.twitter.com/NtVM8ipkwN
— Sanatan Prabhat (@SanatanPrabhat) July 11, 2024
ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನ ಶ್ರೀನಿವಾಸ ರಾವ್ ಹೆಸರಿನ ಕ್ರೈಸ್ತ ವ್ಯಕ್ತಿಯ ವಿರುದ್ಧ ‘ಉತ್ತರ ಪ್ರದೇಶ ಅಕ್ರಮ ಮತಾಂತರ ತಡೆ ಕಾಯ್ದೆ, 2021’ ರ ಕಲಂ 3 ಮತ್ತು 5 (1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಫೆಬ್ರವರಿ 15, 2014 ರಂದು ಆರೋಪಿಯು, ಕೆಲವು ವ್ಯಕ್ತಿಗಳನ್ನು ಹಿಂದೂ ಧರ್ಮವನ್ನು ತೊರೆದು ಕ್ರೈಸ್ತ ಧರ್ಮವನ್ನು ಸ್ವೀಕರಿಸುವಂತೆ ಒತ್ತಾಯಿಸಿದ್ದನು. ಆ ನಂತರ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಅಲಹಾಬಾದ್ ಉಚ್ಚ ನ್ಯಾಯಾಲಯವು, ಭಾರತದ ಸಂವಿಧಾನವು ಪ್ರಜೆಗಳಿಗೆ ತಮ್ಮ ಧರ್ಮವನ್ನು ಆಚರಿಸುವ, ಅದರ ಅನುಸಾರ ಆಚರಣೆ ಮಾಡುವ ಮತ್ತು ಅದರ ಪ್ರಚಾರ ಮಾಡುವ ಹಕ್ಕನ್ನು ನೀಡಿದೆ; ಆದರೆ ಧಾರ್ಮಿಕ ಸ್ವಾತಂತ್ರ್ಯದ ವೈಯಕ್ತಿಕ ಹಕ್ಕನ್ನು, ಮತಾಂತರದ ಸಾಮೂಹಿಕ ಹಕ್ಕು ಎಂದು ವಿಸ್ತರಿಸಲಾಗುವುದಿಲ್ಲ ಎಂದು ಹೇಳಿದೆ.