Jharkhand MLA Oaths Quran Verses : ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಖುರಾನ್‌ನ ಆಯತ ಹೇಳಿದ ಮುಸ್ಲಿಂ ಶಾಸಕ !

  • ಜಾರ್ಖಂಡ್‌ನಲ್ಲಿನ ಘಟನೆ

  • ರಾಷ್ಟ್ರಗೀತೆಗೂ ಅಪಮಾನ !

  • ಭಾಜಪದಿಂದ ಪುನಃ ಪ್ರಮಾಣ ವಚನಕ್ಕೆ ಒತ್ತಾಯ

ಬಲಬದಿಗೆ ಸಚಿವ ಹಾಫೀಜುಲ್ ಹಸನ್

ರಾಂಚಿ (ಜಾರ್ಖಂಡ್) – ಜಾರ್ಖಂಡನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಸರ್ಕಾರದ ಹೊಸದಾಗಿ ಚುನಾಯಿತ ಮುಖ್ಯಮಂತ್ರಿ ಹೇಮಂತ್ ಸೊರೆನ್ ಇವರ ಸರ್ಕಾರದ ಸಚಿವ ಸಂಪುಟವನ್ನು ವಿಸ್ತರಿಸಲಾಯಿತು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಸೇರಿದಂತೆ 11 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಈ ಸಮಯದಲ್ಲಿ ಸಚಿವ ಹಾಫೀಜುಲ್ ಹಸನ್ ಇವರು ಪ್ರಮಾಣ ವಚನ ಸ್ವೀಕರಿಸುವಾಗ ಕುರಾನ್‌ನ ಮೊದಲ ಸಾಲುಗಳು ‘ಬಿಸ್ಮಿಲ್ಲಾ ರಹಮಾನ್ ರಹೀಮ್’ ಎಂದು ಹೇಳಿದರು. ಹಾಗೆಯೇ ರಾಷ್ಟ್ರಗೀತೆಗೂ ಅಪಮಾನ ಮಾಡಿದರು. ಇದಕ್ಕೆ ಭಾಜಪ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ, ಅಸ್ಸಾಂನ ಭಾಜಪ ಸರ್ಕಾರದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರು ಟೀಕಿಸಿದ್ದಾರೆ.

ರಾಷ್ಟ್ರಗೀತೆಯ ಸಮಯದಲ್ಲಿ ಬಟ್ಟೆಯನ್ನು ಸರಿಪಡಿಸಿಕೊಂಡರು !

ಪ್ರಮಾಣ ವಚನದ ಸಮಯದಲ್ಲಿ ರಾಷ್ಟ್ರಗೀತೆಯನ್ನು ಹಾಕಿದಾಗ ಹಾಫೀಜುಲ ಹಸನ ತಮ್ಮ ಕೊರಳಿಗೆ ಸುತ್ತಿದ್ದ ಸ್ಕಾರ್ಫ ಸರಿಪಡಿಸುತ್ತಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ಈ ಘಟನೆಯಿಂದ ಅವರ ಮೇಲೆ ಟೀಕೆಗಳಾಗುತ್ತಿವೆ.

ಹಸನಗೆ ಮತ್ತೊಮ್ಮೆ ಪ್ರಮಾಣ ವಚನ ಬೋಧಿಸುವಂತೆ ಭಾಜಪದಿಂದ ಬೇಡಿಕೆ

ವಿರೋಧಿ ಪಕ್ಷನಾಯಕ ಅಮರ ಬೌರಿ ಮತ್ತು ಭಾಜಪ ವಿರೋಧಿ ಪಕ್ಷದ ನಾಯಕ (ವಿಧಾನಸಭೆಯಲ್ಲಿ ಪಕ್ಷದ ನಾಯಕ) ಬಿರಾಂಚಿ ನಾರಾಯಣ ಅವರು ಈ ವಿಷಯದಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಹಾಫೀಜುಲ್ ಹಸನ ಇವರಿಗೆ ಮತ್ತೊಮ್ಮೆ ಪ್ರಮಾಣ ವಚನ ಬೋಧಿಸುವಂತೆ ವಿನಂತಿಸಿದ್ದಾರೆ. ಅಮರ ಬೌರಿ ಮಾತನಾಡಿ, ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಾಫೀಜುಲ್ ಹಸನ್ ಇವರು ಸೇರಿಸಿದ ಧಾರ್ಮಿಕ ವಿಷಯ ಸಂಪೂರ್ಣವಾಗಿ ತಪ್ಪಾಗಿದೆ. ನಮ್ಮ ಸಂವಿಧಾನ ಇಂತಹ ವಿಷಯವನ್ನು ಅನುಮತಿಸುವುದಿಲ್ಲ. ದೇಶದಲ್ಲಿ ಏನು ನಡೆಯುತ್ತಿದೆ? ಈ ಮೊದಲು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಸಂಸದರೊಬ್ಬರು ಪ್ಯಾಲೆಸ್ತೀನ್ ಬಗ್ಗೆ ಮಾತನಾಡಿದ್ದರು ಮತ್ತು ಈಗ ರಾಷ್ಟ್ರಗೀತೆಯ ಬಗ್ಗೆ ಅವರು ತೋರಿಸಿರುವ ಭಾವನೆಗಳು ಸೂಕ್ತವಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು.

ಕಾಂಗ್ರೆಸ್ ನಿಂದ ಹಫೀಜುಲ್ ಹಸನಗೆ ಬೆಂಬಲ

ಕಾಂಗ್ರೆಸ್ ವಕ್ತಾರ ರಾಕೇಶ್ ಸಿನ್ಹಾ ಮಾತನಾಡಿ, ಭಾರತ ಜಾತ್ಯತೀತ ದೇಶವಾಗಿದೆ. ಈ ಸ್ಥಳದ ಅತ್ಯಂತ ದೊಡ್ಡ ಸೌಂದರ್ಯವೆಂದರೆ ಇಲ್ಲಿ ಎಲ್ಲಾ ಧರ್ಮಗಳನ್ನು ಗೌರವಿಸಲಾಗುತ್ತದೆ. ಒಂದು ವೇಳೆ ಯಾರಾದರೂ ಸನಾತನ ಧರ್ಮದವರಾಗಿದ್ದರೆ, ಅವನು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುತ್ತಾನೆ, ಒಂದು ವೇಳೆ ಯಾರಾದರೂ ಇಸ್ಲಾಂ ಧರ್ಮವನ್ನು ಅನುಸರಿಸಿದರೆ ಅವನು ಅಲ್ಲಾನ ಹೆಸರಿನಲ್ಲಿ ಪ್ರಮಾಣ ಮಾಡುತ್ತಾನೆ. ಇದರಲ್ಲಿ ಯಾವ ದೊಡ್ಡ ವಿಷಯವಿದೆ? ಭಾಜಪದ ಬಳಿ ಪರ್ಯಾಯವಿಲ್ಲ. ಅದರಿಂದ ಅವರಿಗೆ ಕಿರಿಕಿರಿಯಾಗುತ್ತಿದೆಯೆಂದು ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ಕೇವಲ ರಾಜಕೀಯ ಮಾಡುತ್ತಾರೆ. ಅದಕ್ಕಿಂತ ಹೆಚ್ಚೇನೂ ಇಲ್ಲ. (ಇದರಿಂದ ಕಾಂಗ್ರೆಸ್ಸಿನ ಮುಸ್ಲಿಂಪ್ರೀತಿ ಮನಃಸ್ಥಿತಿ ಮತ್ತೊಮ್ಮೆ ಸ್ಪಷ್ಟವಾಗುತ್ತದೆ ! ನಾಳೆ ಮುಸಲ್ಮಾನ ಸಚಿವ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಹೇಳಿದರೆ, ಕಾಂಗ್ರೆಸ್ ಅದನ್ನೂ ಬೆಂಬಲಿಸುತ್ತದೆ ! – ಸಂಪಾದಕರು)

ಹಸನ ಸ್ವೀಕರಿಸಿರುವ ಪ್ರಮಾಣ ವಚನ ಸಂವಿಧಾನ ವಿರೋಧಿ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ‘ಎಕ್ಸ್’ ನಲ್ಲಿ ಪೋಸ್ಟ ಮಾಡಿ, ಜಾರ್ಖಂಡ್ ರಾಜ್ಯದಲ್ಲಿ ಸಚಿವರು ಈ ರೀತಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೇ ? ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ವಿರೋಧ ಪಕ್ಷದ ನಾಯಕ ಅಮರ್ ಬೌರಿ ಅವರು ಗೌರವಾನ್ವಿತ ರಾಜ್ಯಪಾಲರನ್ನು ಹಫೀಜುಲ್ ಹಸನ್ ಅವರಿಗೆ ಸಚಿವ ಹುದ್ದೆಯನ್ನು ಸ್ವೀಕರಿಸಲು ಅವಕಾಶ ನೀಡಬಾರದು; ಕಾರಣ ಈ ಪ್ರಮಾಣ ವಚನ ಅಕ್ರಮ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.

‘ಭಾಜಪ ಉದ್ದೇಶಪೂರ್ವಕವಾಗಿ ವಿಷಯವನ್ನು ಹುಟ್ಟುಹಾಕುತ್ತಿದೆಯಂತೆ !’ – ಹಾಫೀಜುಲ್ ಹಸನ್ ಇವರ ಸ್ಪಷ್ಟೀಕರಣ

ಹಾಫಿಜುಲ ಹಸನ ಇವರು ಸ್ಪಷ್ಟೀಕರಣವನ್ನು ನೀಡುತ್ತಾ, ಸಚಿವನಾಗಿದ್ದಾಗ ಈ ಹಿಂದೆಯೂ ಎರಡು ಬಾರಿ ಅಲ್ಲಾನ ಹೆಸರಿನಲ್ಲಿ ಇದೇ ರೀತಿ ಪ್ರಮಾಣವಚನವನ್ನು ಸ್ವೀಕರಿಸಿದ್ದೆನು; ಆದರೆ ಈಗ ಭಾಜಪ ಬಳಿ ಯಾವುದೇ ವಿಷಯ ಉಳಿದಿಲ್ಲ. ಇದರಿಂದ ಈ ವಿಷಯವನ್ನು ಎತ್ತಿದ್ದಾರೆ. ಹೇಮಂತ ಸೊರೆನ ಜೈಲಿನಿಂದ ಹೊರಗೆ ಬಂದಾಗಿನಿಂದ ಭಾಜಪ ಅಸ್ವಸ್ಥತೆ ಹೆಚ್ಚಾಗಿದೆ. ರಾಜ್ಯಪಾಲರು ಯಾವಾಗ ಏನಾದರೂ ಬರೆಯುವಾಗ ಅವರು ಕಾಗದದ ಮೇಲೆ ಎಲ್ಲಕ್ಕಿಂತ ಮೊದಲು `ಓಂ’ ಎಂದು ಬರೆಯುತ್ತಾರೆ. ಇದನ್ನು ರಾಜಕೀಯ ವಿಷಯವನ್ನಾಗಿ ಮಾಡಬಾರದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಮುಸಲ್ಮಾನರು ಎಷ್ಟೇ ಉನ್ನತ ಹುದ್ದೆಗೆ ತಲುಪಿದರೂ ಅವರು ಜಾತ್ಯತೀತ ಅಲ್ಲ, ಬದಲಾಗಿ ತಮ್ಮ ಧರ್ಮದ ವಿಚಾರವನ್ನೇ ಮಾಡುತ್ತಾರೆ, ಆದರೆ ಹಿಂದೂಗಳು ಮಾತ್ರ `ಜಾತ್ಯತೀತ’ರಾಗಿದ್ದು, ತಮ್ಮನ್ನು `ಹಿಂದೂ’ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಾರೆ !