ನವ ದೆಹಲಿ – ಮುಸ್ಲಿಮರು ತಮ್ಮ ಗುರುತನ್ನು ಮರೆಮಾಚಿ ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾರೆ. ರಾಜ್ಯ ಸರ್ಕಾರವು ಈ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಮುಸ್ಲಿಮರಿಗೆ ಪೂಜಾಸಾಮಗ್ರಿಗಳ ಅಂಗಡಿಗಳನ್ನು ತೆರೆಯುವುದನ್ನು ತಡೆಯಬೇಕು ಎಂದು ವಿಶ್ವ ಹಿಂದೂ ಪರಿಷತ್ತು ಇತ್ತೀಚೆಗೆ ಮನವಿ ಮಾಡಿದೆ. ಹಿಂದೂಗಳ ದೇವಸ್ಥಾನಗಳು ಮತ್ತು ಇತರ ಧಾರ್ಮಿಕ ಸ್ಥಳಗಳಲ್ಲಿ ಯಾರಾದರೂ ಮುಸ್ಲಿಂ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಹಿಂದೂಗಳು ತಕ್ಷಣವೇ ಆ ವಿಷಯದಲ್ಲಿ ಆಡಳಿತದಲ್ಲಿ ಮಾಹಿತಿಯನ್ನು ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಜರಂಗ ಬಾಗ್ರಾ ಇವರು ಕರೆ ನೀಡಿದ್ದಾರೆ.
ಕೇದಾರನಾಥದಂತಹ ಕೆಲವು ಹಿಂದೂ ತೀರ್ಥಕ್ಷೇತ್ರಗಳಲ್ಲಿ ಮುಸ್ಲಿಮರು ಅಂಗಡಿಗಳು ಇವೆ ಮತ್ತು ಅವರು ಭಕ್ತರಿಗೆ ಪ್ರಸಾದ ಹಾಗೂ ಇತರ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾರೆ. ಕಾನೂನುಬದ್ಧವಾಗಿ ಯಾರೂ ಅದನ್ನು ವಿರೋಧಿಸಲು ಸಾಧ್ಯವಿಲ್ಲ; ಆದರೆ ಮುಸ್ಲಿಂ ಅಂಗಡಿಯವರು ಗಿರಾಕಿಗಳಿಗೆ ಖಾದ್ಯಪದಾರ್ಥ, ಪಾನೀಯ ಮತ್ತು ಇತರ ಸಾಮಗ್ರಿಗಳನ್ನು ನೀಡುವ ಮೊದಲು ಅದರ ಮೇಲೆ ಉಗುಳಿರುವ ಹಲವಾರು ಘಟನೆಗಳು ಕೆಲವು ವರ್ಷಗಳಿಂದ ಬೆಳಕಿಗೆ ಬಂದಿವೆ. ಆದ್ದರಿಂದ ಮುಸಲ್ಮಾನರು ಹಿಂದೂಗಳ ದೇವಸ್ಥಾನದ ಪರಿಸರದಲ್ಲಿ ಅಂಗಡಿಗಳನ್ನು ಸ್ಥಾಪಿಸಿ ಪೂಜಾ ಸಾಹಿತ್ಯ ಮಾರಾಟ ಮಾಡುವುದನ್ನು ರಾಜ್ಯ ಸರಕಾರವು ನಿಷೇಧಿಸಬೇಕು ಇದರಿಂದ ಹಿಂದೂ ಭಕ್ತರ ಶ್ರದ್ಧೆಗೆ ಧಕ್ಕೆಯಾಗುವುದಿಲ್ಲ ಎಂದು ಶ್ರೀ. ಬಾಗ್ರಾ ಇವರು ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಮಾತನಾಡಿ, ಮುಸಲ್ಮಾನರು ತಮ್ಮ ಗುರುತನ್ನು ಮರೆಮಾಚಿ ದೇವಸ್ಥಾನಗಳು ಮತ್ತು ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ ತಮ್ಮ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಹಿಂದೂಗಳು ಇಂತಹ ಅಂಗಡಿಕಾರರ ಗುರುತು ಕಂಡು ಹಿಡಿದು ತಕ್ಷಣವೇ ಸ್ಥಳೀಯ ಆಡಳಿತಕ್ಕೆ ತಿಳಿಸಬೇಕು. ಈ ದೂರಿನ ನಂತರ ಸ್ಥಳೀಯ ಆಡಳಿತ ಕಠಿಣ ಕ್ರಮವನ್ನು ಕೈಕೊಳ್ಳಬೇಕು ಮತ್ತು ಹಿಂದೂ ಧಾರ್ಮಿಕ ಸ್ಥಳಗಳ ಪಾವಿತ್ರ್ಯವನ್ನು ಕಾಪಾಡುವಂತೆ ಎಂದು ಬನ್ಸಲ ಇವರು ಎಲ್ಲ ರಾಜ್ಯ ಸರಕಾರಗಳಿಗೆ ಮನವಿ ಮಾಡಿದ್ದಾರೆ.