Pakistan Support : ಸಾಮಾಜಿಕ ಮಾಧ್ಯಮದಲ್ಲಿ ಲಾಹೋರ್ ಚಿತ್ರ ಪೋಸ್ಟ್ ಮಾಡಿ ‘ಪಾಕಿಸ್ತಾನ ಬಹಳ ಸುಂದರವಾಗಿದೆ ‘ಎಂದು ಹೇಳಿದ್ದ ಶಾಹರುಖ್ ನ ವಿರುದ್ಧ ದೂರು

ಬರೆಲಿ (ಉತ್ತರಪ್ರದೇಶ) – ಶಾಹರುಖ್ ಅಹಮದ್ ಎಂಬ ಯುವಕನು ತನ್ನ ಸಾಮಾಜಿಕ ಮಾಧ್ಯಮವೊಂದರ ಖಾತೆಯ ಪ್ರೊಫೈಲಿನಲ್ಲಿ ಪಾಕಿಸ್ತಾನದ ಲಾಹೋರ್ ನಗರದ ಒಂದು ಛಾಯಾಚಿತ್ರ ಪೋಸ್ಟ್ ಮಾಡುತ್ತಾ ಪಾಕಿಸ್ತಾನದ ಧ್ವಜ ತೋರಿಸಿ ‘ಪಾಕಿಸ್ತಾನ ಬಹಳ ಸುಂದರ ವಾಗಿದೆ’ ಎಂದು ಬರೆದಿದ್ದನು. ಈ ಪ್ರೊಫೈಲ್ ನೋಡಿದ ನಂತರ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತ ಹಿಮಾಂಶು ಪಟೇಲ್ ಅವರು ಎಕ್ಸ್ ನಲ್ಲಿ ಇದರ ಮಾಹಿತಿ ಪ್ರಸಾರಗೊಳಿಸಿದರು. ಆ ಬಳಿಕ ಶಾಹರುಖ್ ತನ್ನ ಪ್ರೊಫೈಲ್ ಅನ್ನು ಖಾಸಗಿ ಪ್ರೊಫೈಲ್ ಎಂದು ಬದಲಿಸಿದ್ದಾನೆ. ಹಾಗಾಗಿ ಈಗ ಅವನ ಪೋಸ್ಟ್ ಅನ್ನು ಅನ್ಯರು ನೋಡಲು ಸಾಧ್ಯವಿಲ್ಲ. ಪಟೇಲ್ ಅವರು ಈ ಬಗ್ಗೆ ಮಾತನಾಡಿ, ಪೊಲೀಸರು ಇದರ ಕಡೆ ಗಮನಹರಿಸಿ ಕ್ರಮ ಕೈಗೊಳ್ಳದಿದ್ದರೆ, ಕಾನೂನು ರೀತಿಯಲ್ಲಿ ದೂರು ನೀಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಶಾಹರುಖ್ ಬರೆಲಿಯ ಜಾಫರಪುರದ ನಿವಾಸಿ ಆಗಿದ್ದಾನೆ.

ಬರೆಲಿ ಪೊಲೀಸರು ತಮ್ಮ ಅಧಿಕೃತ ಖಾತೆಯಿಂದ ಮಾಹಿತಿ ನೀಡಿದ್ದು, ಜಾಫರಪುರದ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಈ ಬಗ್ಗೆ ಆವಶ್ಯಕ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

  • ಇಂತಹ ಪಾಕ್ ಪ್ರೇಮಿಗಳನ್ನು ದಿವಾಳಿಯ ಹಾದಿಯಲ್ಲಿರುವ ಪಾಕಿಸ್ತಾನಕ್ಕೆ ಕಳುಹಿಸುವುದೇ ಯೋಗ್ಯ ಶಿಕ್ಷೆಯಾಗಿದೆ !
  • ಇಂತಹ ಪಾಕಿಸ್ತಾನ ಪ್ರೇಮಿಯ ವಿರುದ್ಧ ಕಾಂಗ್ರೆಸ್ಸಿಗರು ಎಂದಾದರೂ ಬಾಯಿ ತೆರೆಯುವುದಿಲ್ಲ !